ರನ್ ಮೆಷಿನ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ T-20 ಕ್ರಿಕೆಟ್ ಸ್ವರೂಪದಿಂದ ನಿವೃತ್ತಿಯಾಗಬೇಕು ಎಂದು ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಪಂದ್ಯದಲ್ಲಿ ಭಾರತದ ಪರ ಕೊಹ್ಲಿ 82ರನ್ಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ ಮತ್ತು ಇದೇ ಸಮಯದಲ್ಲಿ ಅವರು T-20 ಕ್ರಿಕೆಟ್ನಿಂದ ನಿವೃತ್ತಿಯಾಗಬೇಕೆಂದು ನಾನು ಬಯಸುತ್ತೇನೆ ಮತ್ತು T-20ಯಲ್ಲಿ ತೋರುತ್ತಿರುವ ಪ್ರದರ್ಶನವನ್ನ ಅವರು ಏಕದಿನ ಹಾಗೂ ಟೆಸ್ಟ್ ಸ್ವರೂಪದಲ್ಲಿ ತೋರಬೇಕು ಎಂದು ಹೇಳಿದ್ದಾರೆ.

ಕೊಹ್ಲಿ ಕೆಲ ಸಮಯ ತಮ್ಮ ಕೆಟ್ಟ ಫಾರ್ಮ್ನಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದರು ಮತ್ತು ಮೂರು ವರ್ಷಗಳ ಕಾಲ ಅವರು ರನ್ ಗಳಿಸಲು ಪರದಾಡಿದಾಗ ಅವರನ್ನು ನಾಯಕತ್ವದಿಂದ ಸಹ ತೆಗೆದುಹಾಕಲಾಯಿತು ಎಂದು ಅಖ್ತರ್ ಮಾತನಾಡುವ ವೇಳೆ ನೆನಪಿಸಿಕೊಂಡಿದ್ದಾರೆ.
ಅವರ ಕೆಟ್ಟ ದಿನಗಳಲ್ಲಿ ಟೀಕಾಕಾರರು ಅವರ ಕುಟುಂಬದವರನ್ನು ಸಹ ಎಳೆದರೂ ಮತ್ತು ಅವರು ಯಾವುದಕ್ಕೂ ಕುಗ್ಗದೆ ತಮ್ಮ ಕಠಿಣ ಪರಿಶ್ರಮದಿಂದ ದೀಪಾವಳಿಯ ಮುನ್ನಾದಿನವೇ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಪಟಾಕಿಯನ್ನು ಸಿಡಿಸಿದ್ದಾರೆ.
ಕೊಹ್ಲಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಅವರು ಫಾರ್ಮ್ಗೆ ಮರಳಿರುವುದು ನನ್ನಗೆ ತುಂಬಾ ಸಂತೋಷವಾಗಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಸಂತಸ ವ್ಯಕ್ತಪಡಿಸಿದ್ದಾರೆ.






