
ತಿರುಪತಿ:ನಟ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ.

ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ದೇವರಿಗೆ ಮುಡಿ ಸಮರ್ಪಣೆ ಮಾಡಿದ್ದಾರೆ. ಸ್ನೇಹಿತರ ಜತೆಗೂಡಿ ತಿರುಮಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದು, ಎಲ್ಲರೂ ಒಟ್ಟಾಗಿ ಫೋಟೋ ಗೆ ಪೋಸ್ ನೀಡಿದ್ದಾರೆ.

ಕಳೆದ 1 ವರ್ಷದಿಂದ ಗಾಲ್ ಬ್ಲಾಡರ್ ಕ್ಯಾನ್ಸರ್ ನಿಂದ ಶಿವಣ್ಣ ಬಳಲುತ್ತಿದ್ದಾರೆ.ಇದೇ ತಿಂಗಳು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದಾರೆ.ಅಮೆರಿಕ ಪ್ರಯಾಣಕ್ಕೂ ಮುನ್ನ ಶಿವರಾಜ್ ಕುಮಾರ್ ತಿರುಪತಿಗೆ ತೆರಳಿ ಬಾಲಾಜಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
https://www.instagram.com/p/DDQzUW_oyM_/?igsh=MTZsanFraWM0dzM4aQ==
ಶಿವಣ್ಣ ಅಭಿನಯದ ಭೈರತಿ ರಣಗಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮುಂದಿನ 6 ತಿಂಗಳು ಶಿವಣ್ಣ ವಿಶ್ರಾಂತಿಗೆ ಮೊರೆ ಹೋಗಲಿದ್ದಾರೆ.