• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

ಅಧಿಕೃತ ಘೋಷಣೆ ಮಾಡಿದ ಸಿನಿಮಾ ಟೈಟಲ್ ಟೀಸರ್ ಕುತೂಹಲ!

ಪ್ರತಿಧ್ವನಿ by ಪ್ರತಿಧ್ವನಿ
August 20, 2026
in ಕರ್ನಾಟಕ, ದೇಶ, ಸಿನಿಮಾ
0
ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!
Share on WhatsAppShare on FacebookShare on Telegram

 

ADVERTISEMENT

ಬೆಂಗಳೂರು: ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶ್ರೀ ಮಹಾವಿಷ್ಣುವಿನ ಎರಡನೇ ಅವತಾರವಾದ ‘ಕೂರ್ಮಾವತಾರ’ದ ಕಥಾಹಂದರವನ್ನು ಆಧರಿಸಿ ಸಿದ್ಧವಾಗುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ‘ಕೂರ್ಮಾವತಾರ್’ ಎಂದು ನಾಮಕರಣ ಮಾಡಲಾಗಿದ್ದು, ಚಿತ್ರತಂಡ ಅಧಿಕೃತ ಟೈಟಲ್ ರಿವೀಲ್ ಟೀಸರ್ ಬಿಡುಗಡೆ ಮಾಡಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕೂರ್ಮಾವತಾರದ ಹಿನ್ನೆಲೆಯನ್ನು ಒಳಗೊಂಡ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರಲ್ಲಿ ಮತ್ತು ಶಿವಣ್ಣನ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಚಿತ್ರವನ್ನು ಹರ್ಷ ವರ್ಧನ್ ಕಡಿಯಾಲ ನಿರ್ದೇಶಿಸುತ್ತಿದ್ದು, ಪಂಚವಕ್ತ್ರ ಪಿಕ್ಚರ್ಸ್ ಹಾಗೂ ರುಕ್ವಿನಾ ಸ್ಟುಡಿಯೋಸ್ ಜಂಟಿ ಬ್ಯಾನರ್‌ಗಳ ಅಡಿಯಲ್ಲಿ ಪೂಜಿತ ಕಡಿಯಾಲ ಮತ್ತು ನರೇಂದ್ರ ಕೊಂಡ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರ ದಂಡೇ ಇರಲಿದ್ದು, ಶಿವರಾಜ್‌ಕುಮಾರ್ ಅವರೊಂದಿಗೆ ತೆಲುಗು ನಟ ರಾಜ್ ತರುಣ್, ಶಿವಾಜಿ, ವರಲಕ್ಷ್ಮಿ ಶರತ್‌ಕುಮಾರ್, ಸಾಯಿ ಕುಮಾರ್, ರಾಜಾ ರವೀಂದ್ರ, ವಿಟಿವಿ ಗಣೇಶ್, ಸಪ್ತಗಿರಿ, ಗೆಟಪ್ ಶ್ರೀನು, ಶತ್ರು, ಮಹೇಶ್ ವಿಟ್ಟ ಮತ್ತು ಅತಿರಾ ರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಂತ್ರಿಕವಾಗಿಯೂ ಚಿತ್ರ ಅತ್ಯುನ್ನತ ಮಟ್ಟದಲ್ಲಿ ಮೂಡಿಬರಲಿದ್ದು, ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಜಗದೀಶ್ ಚೀಕಾಟಿ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನಕಾರ ಮಾರ್ತಾಂಡ್ ಕೆ. ವೆಂಕಟೇಶ್ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಲೇಖಕ್ ರಾಮ್ ಹೆಚ್ಚುವರಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ರಾಘವ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ವಿಎಫ್‌ಎಕ್ಸ್ (VFX) ತಂತ್ರಜ್ಞಾನ ಹಾಗೂ ಅದ್ಧೂರಿ ಮೇಕಿಂಗ್‌ನೊಂದಿಗೆ ತಯಾರಾಗುತ್ತಿರುವ ‘ಕೂರ್ಮಾವತಾರ್’, ಭಾರತದ ಪ್ರಮುಖ ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

Previous Post

‘ಹೈವಾನ್’ ಸಿನಿಮಾದ ‘ಮೇರೆ ಹೀರೋ ಹೈ ವೋ’ ಸಾಂಗ್‌ ರಿಲೀಸ್

Next Post

ಕಾಖಂಡಕಿ ಶ್ರೀ ಮಹಿಪತಿದಾಸರು ಚಿತ್ರ ವೀಕ್ಷಿಸಿದ ಗಣ್ಯರು

Related Posts

543 ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಿ: ದಕ್ಷಿಣ ವಲಯ ಮಂಡಳಿಗೆ ಡಿ.ಕೆ ಶಿವಕುಮಾರ್ ಆಗ್ರಹ
Top Story

543 ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಿ: ದಕ್ಷಿಣ ವಲಯ ಮಂಡಳಿಗೆ ಡಿ.ಕೆ ಶಿವಕುಮಾರ್ ಆಗ್ರಹ

by ಪ್ರತಿಧ್ವನಿ
August 20, 2026
0

ಮಹಾಬಲಿಪುರಂ: ಕ್ಷೇತ್ರ ಪುನರ್‌ವಿಂಗಡಣೆಗೆ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು, ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಹಾಗೂ ಇದೇ 543 ಸ್ಥಾನಗಳ...

Read moreDetails
₹103 ಕೋಟಿ ಮೌಲ್ಯದ ಖಾತೆ ವರ್ಗಾವಣೆ: ಅಧಿಕಾರಗಳ ವಿರುದ್ಧ ಸುಮೋಟೋ ಕೇಸ್

₹103 ಕೋಟಿ ಮೌಲ್ಯದ ಖಾತೆ ವರ್ಗಾವಣೆ: ಅಧಿಕಾರಗಳ ವಿರುದ್ಧ ಸುಮೋಟೋ ಕೇಸ್

August 20, 2026
ದೇಶಕ್ಕಾಗಿ ಹೋರಾಡಿದವರಲ್ಲಿ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ?-ಬಿ.ಕೆ ಹರಿಪ್ರಸಾದ್‌‌

ದೇಶಕ್ಕಾಗಿ ಹೋರಾಡಿದವರಲ್ಲಿ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ?-ಬಿ.ಕೆ ಹರಿಪ್ರಸಾದ್‌‌

August 20, 2026
1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

1984ರ ಸಿಖ್ ದಂಗೆ ಪ್ರಕರಣದ ಕೈದಿ ಸಜ್ಜನ್ ಕುಮಾರ್ ನಿಧನ

August 20, 2026
ತ.ನಾಡಿಗೆ ಕಾವೇರಿ ನೀರು: ತಮ್ಮ ಸರ್ಕಾರ ವಿರುದ್ಧ ರವಿಕುಮಾರ್‌ ಗಣಿಗ ಅಸಮಾಧಾನ

ತ.ನಾಡಿಗೆ ಕಾವೇರಿ ನೀರು: ತಮ್ಮ ಸರ್ಕಾರ ವಿರುದ್ಧ ರವಿಕುಮಾರ್‌ ಗಣಿಗ ಅಸಮಾಧಾನ

August 20, 2026
Next Post
ಕಾಖಂಡಕಿ ಶ್ರೀ ಮಹಿಪತಿದಾಸರು ಚಿತ್ರ ವೀಕ್ಷಿಸಿದ ಗಣ್ಯರು

ಕಾಖಂಡಕಿ ಶ್ರೀ ಮಹಿಪತಿದಾಸರು ಚಿತ್ರ ವೀಕ್ಷಿಸಿದ ಗಣ್ಯರು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada