• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕಾಖಂಡಕಿ ಶ್ರೀ ಮಹಿಪತಿದಾಸರು ಚಿತ್ರ ವೀಕ್ಷಿಸಿದ ಗಣ್ಯರು

ಇದು ಮಧುಸೂದನ್ ಹವಾಲ್ದಾರ್ ನಿರ್ದೇಶನದ ಸಿನಿಮಾ

ಪ್ರತಿಧ್ವನಿ by ಪ್ರತಿಧ್ವನಿ
August 20, 2026
in ಕರ್ನಾಟಕ, ಸಿನಿಮಾ
0
ಕಾಖಂಡಕಿ ಶ್ರೀ ಮಹಿಪತಿದಾಸರು ಚಿತ್ರ ವೀಕ್ಷಿಸಿದ ಗಣ್ಯರು
Share on WhatsAppShare on FacebookShare on Telegram

 

ADVERTISEMENT

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ.‌ ಅಂತಹ ಮಹನೀಯರ ‌ಮಹಿಮೆಯನ್ನು ಚಿತ್ರಗಳ ಮೂಲಕ ಜನರಿಗೆ ಪರಿಚಯಿಸುವ ಕೆಲಸವನ್ನು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾಡುತ್ತಾ ಬರುತ್ತಿದ್ದಾರೆ. ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ಮಹಿಪತಿ ದಾಸರ ಕುರಿತಾದ “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಕಥೆ ಹಾಗೂ ಸಂಭಾಷಣೆ ಬರೆದಿದ್ದು, ಚಿತ್ರಕಥೆ ಜೆ.ಎಂ.ಪ್ರಹ್ಲಾದ್ ಹಾಗೂ ಮಧುಸೂದನ್ ಹವಾಲ್ದಾರ್ ಅವರದು. ಇತ್ತೀಚೆಗೆ ಈ ಚಿತ್ರದ ಟೆಕ್ನಿಕಲ್ ಶೋ ನಡೆಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ, ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ , ಸಯ್ಯದ್ ಷಾ ಸಾನಿ ಜೈನುಲ್ ಅಬಿದೀನ್, ಡಾ.ವಾಸುದೇವ ಅಗ್ನಿಹೋತ್ರಿ, ಧ್ರುವ ಕುಲಕರ್ಣಿ, ಸುಧೀಂದ್ರ ವೆಂಕಟೇಶ್, ಗುರುರಾಜ್ ಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಚಿತ್ರದ ಟೆಕ್ನಿಕಲ್ ಶೋನಲ್ಲಿ ಚಿತ್ರವನ್ನು ವೀಕ್ಷಿಸಿದರು. ಚಿತ್ರ ವೀಕ್ಷಣೆಯ ನಂತರ ಗಣ್ಯರು ಮಹಿಪತಿದಾಸರ ಚಿತ್ರವನ್ನು ಮನಸ್ಸಾರೆ ಕೊಂಡಾಡಿದರು.

“ಶ್ರೀ ಜಗನ್ನಾಥದಾಸರು” ಚಿತ್ರದಿಂದ ಶ್ರೇಷ್ಠ ಹರಿದಾಸರ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೇನೆ. ಪ್ರಸ್ತುತ “ಕಾಖಂಡಕಿ ಶ್ರೀಮಹಿಪತಿದಾಸರು” ಚಿತ್ರವನ್ನು ‌ನಿರ್ದೇಶಿಸುವುದರೊಂದಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಐದನೇ ಹರಿದಾಸರ ಚಿತ್ರ. ಮಾತಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ವಿಜಯಾನಂದ ನಾಯಕ್ ಮಹಿಪತಿದಾಸರ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಪುರಂದರದಾಸರ ಹಾಗೂ ಕನಕದಾಸರ ನಂತರ ದಾಸ ಪರಂಪರೆಗೆ ಬಂದವರು ಮಹಿಪತಿ ದಾಸರು. ಭಾಸ್ಕರ್ ಗುರೂಜಿ ಹಾಗೂ ಶಾನುಂಗ(ಸೂಫಿ ಸಂತ) ಇವರ ಪರಿಣಾಮ ಹೆಚ್ಚು ಬೀರಿ, ಅದಿಲ್ ಷಾ ನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇವರು ಮಹಿಪತಿದಾಸರಾಗುತ್ತಾರೆ. ಯೋಗ ಸಾಧನೆಯಿಂದ ಹರಿದಾಸರಾದ ಮಹಿಪತಿದಾಸರ ಪುಣ್ಯಸ್ಥಳವಿರುವುದು ವಿಜಾಪುರ ಜಿಲ್ಲೆಯ ಕಾಖಂಡಕಿಯಲ್ಲಿ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಕ್ಟೋಬರ್ ವೇಳೆಗೆ ತೆರೆಗೆ ಬರಲಿದೆ.

ಯಾವುದೇ ಒಂದು ಐತಿಹಾಸಿಕ ಹಾಗೂ ಒಬ್ಬ ಸಾಧಕರ ಕುರಿತು ಸಿನಿಮಾ ಮಾಡಿದಾಗ ಮೊದಲು ಟೆಕ್ನಿಕಲ್ ಶೋ ಆಯೋಜಿಸಿ ಸಂಬಂಧಪಟ್ಟವರಿಗೆ ಹಾಗೂ ಗಣ್ಯರಿಗೆ ತೋರಿಸುವುದು ವಾಡಿಕೆ. ಏಕೆಂದರೆ ಚಿತ್ರದಲ್ಲಿ ಏನಾದರೂ ಸ್ವಲ್ಪ ಬದಲಾವಣೆ ಇದ್ದರೆ ಮಾಡಿಕೊಳ್ಳಬಹುದು ಎಂದು. ಆದರೆ ನಮ್ಮ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಆಡಿದ ಪ್ರಶಂಸೆಯ ನುಡಿಗಳನ್ನು ಕೇಳಿ ನನ್ನ ಮನತುಂಬಿ ಬಂತು ಎನ್ನುತ್ತಾರೆ ನಿರ್ದೇಶಕ ಮಧುಸೂದನ್ ಹವಾಲ್ದಾರ್.

Previous Post

ಶಿವರಾಜ್‌ಕುಮಾರ್ ಈಗ ‘ಕೂರ್ಮಾವತಾರ್’ನ ಹೊಸ ಅವತಾರ!

Next Post

ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿಯಾಗಲಿದ್ದಾರೆ ಆದಿತ್ಯ

Related Posts

543 ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಿ: ದಕ್ಷಿಣ ವಲಯ ಮಂಡಳಿಗೆ ಡಿ.ಕೆ ಶಿವಕುಮಾರ್ ಆಗ್ರಹ
Top Story

543 ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಿ: ದಕ್ಷಿಣ ವಲಯ ಮಂಡಳಿಗೆ ಡಿ.ಕೆ ಶಿವಕುಮಾರ್ ಆಗ್ರಹ

by ಪ್ರತಿಧ್ವನಿ
August 20, 2026
0

ಮಹಾಬಲಿಪುರಂ: ಕ್ಷೇತ್ರ ಪುನರ್‌ವಿಂಗಡಣೆಗೆ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು, ಮುಂದಿನ 25 ವರ್ಷಗಳವರೆಗೆ ಲೋಕಸಭೆಯ ಈಗಿರುವ 543 ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಹಾಗೂ ಇದೇ 543 ಸ್ಥಾನಗಳ...

Read moreDetails
₹103 ಕೋಟಿ ಮೌಲ್ಯದ ಖಾತೆ ವರ್ಗಾವಣೆ: ಅಧಿಕಾರಗಳ ವಿರುದ್ಧ ಸುಮೋಟೋ ಕೇಸ್

₹103 ಕೋಟಿ ಮೌಲ್ಯದ ಖಾತೆ ವರ್ಗಾವಣೆ: ಅಧಿಕಾರಗಳ ವಿರುದ್ಧ ಸುಮೋಟೋ ಕೇಸ್

August 20, 2026
ದೇಶಕ್ಕಾಗಿ ಹೋರಾಡಿದವರಲ್ಲಿ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ?-ಬಿ.ಕೆ ಹರಿಪ್ರಸಾದ್‌‌

ದೇಶಕ್ಕಾಗಿ ಹೋರಾಡಿದವರಲ್ಲಿ ಒಬ್ಬ ಬಿಜೆಪಿ ನಾಯಕರ ಹೆಸರು ಇದೆಯೇ?-ಬಿ.ಕೆ ಹರಿಪ್ರಸಾದ್‌‌

August 20, 2026
ತ.ನಾಡಿಗೆ ಕಾವೇರಿ ನೀರು: ತಮ್ಮ ಸರ್ಕಾರ ವಿರುದ್ಧ ರವಿಕುಮಾರ್‌ ಗಣಿಗ ಅಸಮಾಧಾನ

ತ.ನಾಡಿಗೆ ಕಾವೇರಿ ನೀರು: ತಮ್ಮ ಸರ್ಕಾರ ವಿರುದ್ಧ ರವಿಕುಮಾರ್‌ ಗಣಿಗ ಅಸಮಾಧಾನ

August 20, 2026
`A date’ ಸಿನಿಮಾದ ಟ್ರೇಲರ್‌ ಬಂತು

`A date’ ಸಿನಿಮಾದ ಟ್ರೇಲರ್‌ ಬಂತು

August 20, 2026
Next Post
ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿಯಾಗಲಿದ್ದಾರೆ ಆದಿತ್ಯ

ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿಯಾಗಲಿದ್ದಾರೆ ಆದಿತ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada