ಮಾಜಿ ಐಪಿಎಸ್ ಅಧಿಕಾರಿ ಹಾಗೂ ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಫೇಕ್ ವಿಡಿಯೋ ಹಂಚಿಕೊಂಡ ಕಾರಣ ಟ್ರೋಲ್‌ಗೆ ಒಳಗಾಗಿದ್ದಾರೆ.
ಹೌದು, ಸಮುದ್ರದ ಮಧ್ಯದಿಂದ ಹಾರಿ ಬರುವ ಹೆಲಿಕಾಪ್ಟರ್ ಅನು ಬೃಹತ್ ಶಾರ್ಕ್‌ವೊಂದು ದಾಳಿ ಮಾಡಿ ಹೆಲಿಕಾಪ್ಟರ್ ಅನ್ನು ನುಂಗುವ ವಿಡಿಯೋವನ್ನು ಕಿರಣ್ ಬೇಡಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ವಿಡಿಯೊ ಜೊತೆಗೆ ಬರೆದ ಸಂದೇಶಕ್ಕಾಗಿ ಅವರನ್ನು ನೆಟ್ಟಿಗರು ಟ್ರೋಲ್
ಆಗಿದ್ದಾರೆ ಮತ್ತು ಕೆಲವರು ಇದು ಫೇಕ್ ಎಂದು ಹೇಳಿದ್ದಾರೆ.
ಕಿರಣ್ ಬೇಡಿ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಈ ಅಪರೂಪದ ವಿಡಿಯೊಗಾಗಿ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ 1 ಮಿಲಿಯನ್ ಡಾಲರ್ ಪಾವತಿಸಿದೆ. ವಾಟ್ ಎ ವಿಡಿಯೋ ಎಂದು ವಿಡಿಯೋದಲ್ಲಿ ಬರೆದಿರುವುದನ್ನು ಕಾಣಬಹುದಾಗಿದೆ. ಇದನ್ನು ವಾಚ್ ದಿಸ್ ಎಂದು ಟ್ವೀಟ್ ಮಾಡಿ ಮಾಡಿದ್ದಾರೆ.
ಇದಕ್ಕೆ ಕೆಲಸವರು ಟ್ರಾಲ್ ಮಾಡಿದರೆ ಇನ್ನು ಕೆಲವರು ಇದು ಫೇಕ್ ಮೊದಲು ಇದನ್ನು ಪರಿಶೀಲಿಸಿ ಎಂದು ಹೇಳಿದ್ದಾರೆ. ಇನ್ನು ಕೆಲಸವರು ಇದರ ಮೂಲ ಹೇಗೆ ಕಂಡುಕೊಳ್ಳಬಹುದು ಎಂದು ಸಲಹರ
ನೀಡಿದ್ದಾರೆ.
ಕಿರಣ್ ಬೇಡಿ ಹಂಚಿಕೊಂಡ ಕ್ಲಿಪ್ ವಾಸ್ತವವಾಗಿ 2017ರ ಚಲನಚಿತ್ರ 5 ಹೆಡೆಡ್ ಶಾರ್ಕ್ ಅಟ್ಯಾಕ್‌ನ ದೃಶ್ಯವಳಿಯಾಗಿದೆ.