• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಾಂತವೇರಿ ಗೋಪಾಲಗೌಡರ ತೀರ್ಥಹಳ್ಳಿಗೆ ಆರಗ ಕಳಂಕ: ಕಿಮ್ಮನೆ

ಪ್ರತಿಧ್ವನಿ by ಪ್ರತಿಧ್ವನಿ
April 7, 2022
in ಕರ್ನಾಟಕ
0
ಶಾಂತವೇರಿ ಗೋಪಾಲಗೌಡರ ತೀರ್ಥಹಳ್ಳಿಗೆ ಆರಗ ಕಳಂಕ: ಕಿಮ್ಮನೆ
Share on WhatsAppShare on FacebookShare on Telegram

ADVERTISEMENT

ಶಿವಮೊಗ್ಗ: ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಮಾಧ್ಯಮಗಳಿಗೆ ನೀಡಿದ ಅನೇಖ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಟೀಕೆಗಳೊಳಗಾದವು. ಮೈಸೂರು ಗ್ಯಾಂಗ್‌ ರೇಪ್‌, ಶಿವಮೊಗ್ಗದಲ್ಲಿ ಹರ್ಷ ಸಾವಿನ ಪ್ರಕರಣ ಸೇರಿ ನಿನ್ನೆ ದಲಿತ ಚಂದ್ರು ಹತ್ಯೆ ಕುರಿತಾಗಿ ನೀಡಿದ ಹಠಾತ್‌ ಹೇಳಿಕೆ ಆಡಳಿತ ಪಕ್ಷದವರಿಗೇ ಇರಿಸು ಮುರಿಸಾಗಿದೆ. ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ. ಇವೆಲ್ಲದರ ಬೆನ್ನಲ್ಲೇ ಆರಗ ಜ್ಞಾನೇಂದ್ರ ಅವರ ಸಾಂಪ್ರದಾಯಿಕ ಎದುರಾಳಿ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್‌ ಗರಂ ಆಗಿದ್ದಾರೆ. ತಮ್ಮ ಕ್ಷೇತ್ರ ತೀರ್ಥಹಳ್ಳಿ ಹಾಗೂ ಅದರ ರಾಜಕೀಯ ಮತ್ತು ಹೋರಾಟದ ಪರಂಪರೆಗೆ ಜ್ಞಾನೇಂದ್ರ ಮಸುಕಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹಾಗೂ ಶುಕ್ರವಾರ ತೀರ್ಥಹಳ್ಳಿ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ್‌, ತೀರ್ಥಹಳ್ಳಿ ಕ್ಷೇತ್ರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಕಳಂಕ ಎಂದರು.

ಆರಗ ಜ್ಞಾನೇಂದ್ರ ಗೃಹ ಸಚಿವರಾದಾಗ, ನಮ್ಮ ಕ್ಷೇತ್ರಕ್ಕೆ ಒಳ್ಳೆಯ ಪೋಸ್ಟ್ ಸಿಕ್ಕಿದೆ ಎಂದು ಖುಷಿ ಪಟ್ಟಿದ್ದೆ. ನಾನೇ ಮುಂದೆ ನಿಂತು ಸನ್ಮಾನ ಸಹ ಮಾಡಿದ್ದೆ. ತೀರ್ಥಹಳ್ಳಿ ಪ್ರಜ್ಞಾವಂತ ಮತದಾರರು ಇರುವ ಕ್ಷೇತ್ರ. ಶಾಂತವೇರಿ ಗೋಪಾಲಗೌಡರ ಹೆಸರು ಹೇಳದೇ ಇವತ್ತಿಗೂ ಅಧಿವೇಶನ ನಡೆಯಲ್ಲ. ಅಂತಹ ಹಿನ್ನೆಲೆ ಇರುವ ತೀರ್ಥಹಳ್ಳಿ ಕ್ಷೇತ್ರದಲ್ಲಿಆರಗ ಜ್ಞಾನೇಂದ್ರ ಅಸಂಬದ್ಧವಾಗಿ ಹೇಳಿಕೆ ನೀಡುತ್ತಾ ನಮ್ಮ ಕ್ಷೇತ್ರಕ್ಕೆ ಕಳಂಕ ತರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ರಾಜ್ಯದ ಜನರು ಆರಗ ಜ್ಞಾನೇಂದ್ರ ಅವರನ್ನು ಬೈಯ್ಯುತ್ತಿದ್ದಾರೆ. ಆದ ಕಾರಣ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೀರ್ಥಹಳ್ಳಿ ಗೌರವವನ್ನು ಉಳಿಸಬೇಕು, ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರು, ಮುಖಂಡರು ಶಾಂತಿ- ಸುವ್ಯವಸ್ಥೆ ಕಾಪಾಡಬೇಕು. ಆಡಳಿತ ಪಕ್ಷದವರೇ ಕೋಮುಗಲಭೆ ಸೃಷ್ಟಿಸುತ್ತಿರುವುದು ಹಾಗೂ ಗೃಹ ಸಚಿವರು ಅಭಯ ನೀಡುವುದು ದೇಶದ ದುರಂತ.

ಓರ್ವ ಗೃಹ ಸಚಿವರಾಗಿ ಕೋಮು ಭಾವನೆ ಕೆರಳಿಸುವಂತೆ ಹೇಳಿಕೆ ಕೊಡಬಾರದು. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮಿನಿಸ್ಟರ್ ಹೀಗೆ ಮಾತಾಡಿದ್ರೆ ಹೇಗೆ? ಹೋಮ್ ಮಿನಿಸ್ಟರ್ ಇರೋದು ಕೋಮು ಭಾವನೆ ಸೃಷ್ಟಿಸೋದಕ್ಕಾ ಅಥವಾ ಕಡಿಮೆ ಮಾಡೋದಕ್ಕಾ ಇವರ ವಿರುದ್ದವೇ ಕೇಸ್ ದಾಖಲಿಸಬೇಕು. ಸಿಎಂ ಇವರನ್ನು ವಜಾ ಮಾಡಬೇಕಿತ್ತು ಎಂದರು. ಗೃಹ ಸಚಿವರಾಗಿ ಅಸಮರ್ಪಕ ಮಾಹಿತಿಯೊಂದಿಗೆ ಮಾಧ್ಯಮದ ಎದುರು ಬಂದು ಚುಚ್ಚಿ-ಚುಚ್ಚಿ ಕೊಲೆ ಮಾಡ್ತಾರೆ ಅಂತಾರೆ. ಚಂದ್ರು ಉರ್ದು ಮಾತನಾಡಲಿಲ್ಲ ಆ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ಮುಗಿಬೀಳಲಿ ಎನ್ನುವ ಉದ್ದೇಶ ಇವರಲ್ಲಿದೆ. ಗೃಹಸಚಿವರ ವಿರುದ್ಧವೇ ದೇಶದ್ರೋಹದ ಕೇಸ್ ದಾಖಲಿಸಬೇಕು. ಅವರ ರಾಜೀನಾಮೆಗೆ ಒತ್ತಾಯಿಸಿ, ಏ.೦೮ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಕಿಮ್ಮನೆ ಹೇಳಿದರು.

Tags: BJPCongress PartyCovid 19ಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಡೆಲ್ಲಿಗೆ ಕುಕ್ಕಿದ ಕುಕ್‍: ಲಕ್ನೊಗೆ 6 ವಿಕೆಟ್ ರೋಚಕ ಜಯ

Next Post

ಸಾರ್ವಜನಿಕ ವಲಯದಿಂದ ಸಂಗ್ರಹಿಸಲಾದ ಡಾಟಾವನ್ನು ಖಾಸಗಿ ಕಂಪೆನಿಗಳಿಗೆ ಮಾರಲಿವೆಯೇ ಸರ್ಕಾರ?

Related Posts

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ
Top Story

ಬಹಳ ದೂರದೃಷ್ಟಿಯುಳ್ಳ, ನಿಷ್ಠಾವಂತ ಡಾ.ಚೆಲ್ಲ ಕುಮಾರ್‌ ಬೆಂಬಲಿಸಿ : ತಮಿಳಿಗರಿಗೆ ಮೋಹನ್‌ ಕೊಂಡಜ್ಜಿ ಕರೆ

by ಪ್ರತಿಧ್ವನಿ
April 20, 2026
0

ಬೆಂಗಳೂರು : ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಡಾ. ಚೆಲ್ಲ ಕುಮಾರ್ ಡಿ.ಎಂ.ಕೆ. ನೇತೃತ್ವದ ಮೈತ್ರಿಕೂಟದಲ್ಲಿ ಕೃಷ್ಣಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ...

Read moreDetails
BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

BREAKING NEWS : ಕೈ ಶಾಸಕನಿಗೆ ಇ.ಡಿ. ಶಾಕ್‌ : ಹ್ಯಾರಿಸ್‌ ಮನೆ ಮೇಲೆ ದಿಢೀರ್ ದಾಳಿ, ದಾಖಲೆಗಳ ಶೋಧ..!

April 20, 2026
ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್ ಮತ್ತು ಸಂವಿಧಾನ – ವಾಸ್ತವಗಳು

April 20, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
Next Post
ಸಾರ್ವಜನಿಕ ವಲಯದಿಂದ ಸಂಗ್ರಹಿಸಲಾದ ಡಾಟಾವನ್ನು ಖಾಸಗಿ ಕಂಪೆನಿಗಳಿಗೆ ಮಾರಲಿವೆಯೇ ಸರ್ಕಾರ?

ಸಾರ್ವಜನಿಕ ವಲಯದಿಂದ ಸಂಗ್ರಹಿಸಲಾದ ಡಾಟಾವನ್ನು ಖಾಸಗಿ ಕಂಪೆನಿಗಳಿಗೆ ಮಾರಲಿವೆಯೇ ಸರ್ಕಾರ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada