ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ ಜಾರಿಯಾಗಿ ಮೂರು ತಿಂಗಳು ಪೂರೈಸಿದ್ದು, ಈ ನಡುವಲ್ಲೇ ಕೆಎಸ್‌ಆರ್‌ಟಿಸಿ ಸ್ಟಾಫ್ ಅ್ಯಂಡ್ ವರ್ಕರ್ಸ್ ಫೆಡರೇಶನ್ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದು, ಈ ಯೋಜನೆ ಅನುಷ್ಠಾನದ ಬಳಿಕ ಕಂಡಕ್ಟರ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಅ್ಯಂಡ್ ವರ್ಕರ್ಸ್ ಫೆಡರೇಶನ್’ನ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಡಿ ಎ ಅವರು ಅನ್ಬುಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಯಶಸ್ವಿಯಾಗಿ ಮೂರು ತಿಂಗಳು ಪೂರೈಸಿದೆ. ಆದರೆ, ಈ ಯೋಜನೆಯನ್ನು ಅನುಷ್ಠಾನದ ಬಳಿಕ ಕಂಡಕ್ಟರ್‌ಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತುರ್ತು ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಇದೇ ವೇಳೆ ಕಂಡಕ್ಟರ್ ಗಳಿಂದ ಮಹಿಳೆಯರಿಗೆ ಎದುರಾಗುತ್ತಿರುವ ಕಿರುಕುಳವನ್ನೂ ಉದಾಹರಣೆ ಸಮೇತ ವಿವರಿಸಿದ್ದಾರೆ.
ಈ ಸುದ್ದಿಯನ್ನು ಸಹ ಓದಿ: ಚಂದ್ರನಮೇಲೆಮತ್ತೆಬೆಳಗಾಯಿತು; ನಿದ್ರೆಯಿಂದಏಳುವುದೇಲ್ಯಾಂಡರ್, ರೋವರ್?
ಸೆಪ್ಟೆಂಬರ್ 14 ರಂದು ಸಿಗಂದೂರಿನಿಂದ ಕೋಲಾರಕ್ಕೆ ಕೆಎಸ್‌ಆರ್‌ಟಿಸಿ ಬಸ್ ತೆರಳಿದ್ದು, ಈ ವೇಲೆ ಬಸ್ ಹತ್ತಿದ್ದ ನಾಲ್ವರು ಮಹಿಳೆಯರು ಸೀಟು ಕಾಯ್ದಿರಿಸಿದ್ದರು. ಎಂದಿನಂತೆ ಕಂಡಕ್ಟರ್ ರಾಮಣ್ಣ ರಿಸರ್ವೇಶನ್ ಟಿಕೆಟ್ ಪರಿಶೀಲಿಸಿ ಟಿಕೆಟ್ ಚಾರ್ಟ್ ನಲ್ಲಿ ಗುರುತು ಮಾಡಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದರು. ಬಸ್ ರಿಪ್ಪನ್‌ಪೇಟೆ ತೆರಳಿದಾಗ ತಪಾಸಣಾ ತಂಡ ಟಿಕೆಟ್ ಪರಿಶೀಲನೆ ಆರಂಭಿಸಿದ್ದು, ನಾಲ್ವರು ಮಹಿಳೆಯರು ‘ಶೂನ್ಯ ಟಿಕೆಟ್’ ನೀಡಿಲ್ಲ. ಕಂಡಕ್ಟರ್‌ಗೆ ಮೆಮೋ ನೀಡಲಾಗಿದೆ. ಈ ರೀತಿ ಸಾಕಷ್ಟು ಘಟನೆಗಳಿವೆ.
ಪ್ರತೀನಿತ್ಯ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆಯರಿಗೆ ನಿರ್ವಾಹಕ ಶೂನ್ಯ ಟಿಕೆಟ್ ನೀಡಿಲ್ಲ. ಇದರಲ್ಲಿ ನಿರ್ವಾಹಕರ ಯಾವುದೇ ವೈಯಕ್ತಿ ಲಾಭವಿರಲಿಲ್ಲ. ನಿರ್ವಾಹಕರು ಯೋಜನೆಗೆ ಒಗ್ಗಿಕೊಳ್ಳುವವರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬಾರದು. ಕಾಲಾವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.