• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, October 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಯುಧ ಪೂಜೆ : ವಿಧಾನಸೌಧ, ವಿಕಾಸಸೌಧದಲ್ಲಿ ರಾಸಾಯನಿಕ ಬಣ್ಣಗಳ ಬಳಕೆಗೆ ನಿಷೇಧ : ರಾಜ್ಯ ಸರ್ಕಾರ ಆದೇಶ

ಪ್ರತಿಧ್ವನಿ by ಪ್ರತಿಧ್ವನಿ
October 17, 2026
in Top Story, ಕರ್ನಾಟಕ
0
Ban on the use of chemical colors at Vidhana Soudha and Vikasa Soudha for Ayudha Puja: State Government issues order | Ayudha Puja
Share on WhatsAppShare on FacebookShare on Telegram

ಬೆಂಗಳೂರು :  ಬೆಂಗಳೂರಿನ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳಾದ ವಿಧಾನಸೌಧ (Vidhana Soudha) , ವಿಕಾಸಸೌಧ (Vikasa Soudha) ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ (Ayudha Puja) ಆಚರಣೆ ವೇಳೆ ಕಚೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕಯುಕ್ತ ಬಣ್ಣಗಳ ಬಳಕೆಯನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.

ADVERTISEMENT

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸಿ&ಆಸು) ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿನಾಥ್ ಅವರು ದಿನಾಂಕ 16-10-2026 ರಂದು ಈ ಅಧಿಕೃತ ಮಾರ್ಗಸೂಚಿಯನ್ನು ಜಾರಿಗೊಳಿಸಿದ್ದಾರೆ.

ಹಿಂದಿನ ವರ್ಷಗಳಲ್ಲಿ ಆಯುಧ ಪೂಜೆಯ ಸಂದರ್ಭದಲ್ಲಿ ಕಚೇರಿಗಳಲ್ಲಿ ಹಾಗೂ ಮೊಗಸಾಲೆಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸಿದ್ದರಿಂದ, ನೆಲಹಾಸಿನ ಮೇಲೆ ಬಣ್ಣ ಉಳಿದುಕೊಂಡು ಕಟ್ಟಡಗಳ ನೈಸರ್ಗಿಕ ಸೌಂದರ್ಯಕ್ಕೆ ಹಾನಿಯಾಗಿತ್ತು. ಈ ಬಗ್ಗೆ ಈ ಹಿಂದೆಯೇ ಹಲವು ಸುತ್ತೋಲೆಗಳನ್ನು ಹೊರಡಿಸಿದ್ದರೂ ಕೆಲವು ಇಲಾಖೆಗಳು ಹಾಗೂ ಶಾಖೆಗಳು ಸೂಕ್ತ ಗಮನಹರಿಸದೆ ಇರುವುದು ಕಂಡುಬಂದಿದ್ದು, ಇದು ತೀವ್ರ ವಿಷಾದನೀಯ ಎಂದು ಸರ್ಕಾರ ಪ್ರಸ್ತಾಪಿಸಿದೆ. ಆದ್ದರಿಂದ, ಕಟ್ಟಡಗಳ ಸುರಕ್ಷತೆ, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ನೌಕರರು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆದೇಶಿಸಲಾಗಿದೆ.

ಕಚೇರಿ ಆವರಣದಲ್ಲಿ ರಂಗೋಲಿ ಹಾಕಲು ಕೇವಲ ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ವಸ್ತುಗಳನ್ನು ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ರಾಸಾಯನಿಕ, ಕೃತಕ, ವಿಷಕಾರಿ ಅಥವಾ ಆರೋಗ್ಯಕ್ಕೆ ಹಾನಿಕಾರಕವಾದ ಬಣ್ಣಗಳು ಮತ್ತು ಪುಡಿಗಳನ್ನು ಬಳಸುವಂತಿಲ್ಲ. ಜತೆಗೆ ವಿದ್ಯುತ್ ದೀಪಗಳು ಹಾಗೂ ಅಲಂಕಾರಿಕ ದೀಪಗಳನ್ನು ಸುರಕ್ಷಿತವಾಗಿ ಅಳವಡಿಸಬೇಕಾಗಿದ್ದು, ಪೂಜೆಯ ದಿನ ಕಚೇರಿಯಿಂದ ನಿರ್ಗಮಿಸುವ ಮುನ್ನ ದೇವರ ದೀಪ ಹಾಗೂ ವಿದ್ಯುತ್ ಸ್ವಿಚ್‌ಗಳನ್ನು ಕಡ್ಡಾಯವಾಗಿ ನಂದಿಸಿ ತೆರಳುವಂತೆ ಸೂಚಿಸಲಾಗಿದೆ.

ತುರ್ತು ನಿರ್ಗಮನ ಮಾರ್ಗಗಳು, ಮೆಟ್ಟಿಲುಗಳು, ಕಾರಿಡಾರ್‌ಗಳು ಹಾಗೂ ಪ್ರವೇಶ ದ್ವಾರಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಹೂವುಗಳು, ಆಹಾರದ ಉಳಿಕೆಗಳು ಹಾಗೂ ಇತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸರಿಯಾಗಿ ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅಲರ್ಜಿ, ಉಸಿರಾಟದ ತೊಂದರೆ ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಹೊಗೆಯುಂಟುಮಾಡುವ ವಸ್ತುಗಳು ಮತ್ತು ಅಪಾಯಕಾರಿ ಸಾಮಗ್ರಿಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕೆಂದು ಸ್ಪಷ್ಟಪಡಿಸಲಾಗಿದೆ.

ಕಚೇರಿಯ ದೈನಂದಿನ ಕಾರ್ಯನಿರ್ವಹಣೆ ಮತ್ತು ನಾಗರಿಕರಿಗೆ ನೀಡುವ ಸಾರ್ವಜನಿಕ ಸೇವೆಗಳಿಗೆ ಧಕ್ಕೆಯಾಗದಂತೆ ಶಿಸ್ತಿನಿಂದ ಆಯುಧ ಪೂಜೆಯನ್ನು ಆಚರಿಸಬೇಕು. ಕಂಪ್ಯೂಟರ್‌ಗಳು, ಪೀಠೋಪಕರಣಗಳು ಹಾಗೂ ಪ್ರಮುಖ ಸರ್ಕಾರಿ ಕಡತ, ದಾಖಲೆಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಜಾಗ್ರತೆ ವಹಿಸುವುದು ಅವಶ್ಯಕವಾಗಿದೆ. ಪಾರಂಪರಿಕ ಕಟ್ಟಡಗಳ ರಕ್ಷಣೆ ಪ್ರತಿಯೊಬ್ಬ ನೌಕರರ ಆದ್ಯ ಕರ್ತವ್ಯವಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಅಸಡ್ಡೆ ತೋರಿದರೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

 

Tags: Ayudha PujaVIDHANA SOUDHAVikasa Soudha
Previous Post

ವಿದ್ಯಾರ್ಥಿಗಳಿಗೆ ಸಂಸತ್‌ ಚಟುವಟಿಕೆ ಅರಿವು ಮೂಡಿಸಲು 20 ವರ್ಷದ ಅನುಭವ ಧಾರೆ ಎರೆಯಲು ಸಿದ್ಧ : ಸಚಿವ ಶಿವಲಿಂಗೇಗೌಡ

Next Post

ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, ಬಿಗಿ ಭದ್ರತೆ..!

Related Posts

ಬೆಂಗಳೂರಿನಲ್ಲಿ ಮಳೆ ಕಾಟ, ಭಾರತ–ವೆಸ್ಟ್ ಇಂಡೀಸ್ ಪಂದ್ಯಕ್ಕೆ ಹಿನ್ನಡೆ; ಸರಣಿ ಗೆಲ್ಲೋರು ಯಾರು?
Top Story

ಬೆಂಗಳೂರಿನಲ್ಲಿ ಮಳೆ ಕಾಟ, ಭಾರತ–ವೆಸ್ಟ್ ಇಂಡೀಸ್ ಪಂದ್ಯಕ್ಕೆ ಹಿನ್ನಡೆ; ಸರಣಿ ಗೆಲ್ಲೋರು ಯಾರು?

by ಪ್ರತಿಧ್ವನಿ
October 17, 2026
0

ಬೆಂಗಳೂರು: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ವಿಳಂಬವಾಗಿದೆ. ಐದು...

Read moreDetails
‘ಕೊನೆಯುಸಿರು ಇರುವವರೆಗೂ ದರ್ಶನ್‌ರನ್ನು ಮರೆಯಲ್ಲ’; ಯುವ ದಸರಾ ವೇದಿಕೆಯಲ್ಲಿ ಭಾವುಕರಾದ ರಚಿತಾ ರಾಮ್!

‘ಕೊನೆಯುಸಿರು ಇರುವವರೆಗೂ ದರ್ಶನ್‌ರನ್ನು ಮರೆಯಲ್ಲ’; ಯುವ ದಸರಾ ವೇದಿಕೆಯಲ್ಲಿ ಭಾವುಕರಾದ ರಚಿತಾ ರಾಮ್!

October 17, 2026
ಈ ಸರ್ಕಾರ ಸ್ಟಿಂಗ್ ಕಿರಾತಕನ ಬೂಟ್ ಪಾಲಿಶ್ ಮಾಡುತ್ತಿದೆ : ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶ..!

ಈ ಸರ್ಕಾರ ಸ್ಟಿಂಗ್ ಕಿರಾತಕನ ಬೂಟ್ ಪಾಲಿಶ್ ಮಾಡುತ್ತಿದೆ : ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶ..!

October 17, 2026
Push for arrest of 'sting' kingpin: H.D. Kumaraswamy takes to the streets

ಸ್ಟಿಂಗ್ ಕಿಂಗ್‌ಪಿನ್ ಬಂಧನಕ್ಕೆ ಬಿಗಿಪಟ್ಟು: ರೊಚ್ಚಿಗೆದ್ದು ರಸ್ತೆಗಿಳಿದ ಹೆಚ್.ಡಿ. ಕುಮಾರಸ್ವಾಮಿ

October 17, 2026
Travel insurance becomes mandatory for offline train tickets starting Oct 27: Supreme Court issues significant order

ಅ. 27 ರಿಂದ ಆಫ್‌ಲೈನ್ ರೈಲು ಟಿಕೆಟ್‌ಗಳಿಗೂ ಪ್ರಯಾಣ ವಿಮೆ ಕಡ್ಡಾಯ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

October 17, 2026
Next Post
ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, ಬಿಗಿ ಭದ್ರತೆ..!

ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವ : ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, ಬಿಗಿ ಭದ್ರತೆ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada