• Home
  • About Us
  • ಕರ್ನಾಟಕ
Sunday, July 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸರ್ಕಾರದ ಮಾನಸಿಕ ಆರೋಗ್ಯ ಸಹಾಯ ಕೇಂದ್ರಕ್ಕೆ ಕರೆ ಮಾಡಿದ ಶೇಕಡಾ 70ರಷ್ಟು ಮಂದಿ ಪುರುಷರು: ಅಧ್ಯಯನ

ಫಾತಿಮಾ by ಫಾತಿಮಾ
June 26, 2021
in ಕರ್ನಾಟಕ
0
ಸರ್ಕಾರದ ಮಾನಸಿಕ ಆರೋಗ್ಯ ಸಹಾಯ ಕೇಂದ್ರಕ್ಕೆ ಕರೆ ಮಾಡಿದ ಶೇಕಡಾ 70ರಷ್ಟು ಮಂದಿ ಪುರುಷರು: ಅಧ್ಯಯನ
Share on WhatsAppShare on FacebookShare on Telegram

ಕರೋನಾ ವೈರಸ್ ಭಾರತದ ಸಾಮಾಜಿಕ, ಆರ್ಥಿಕ ರಚನೆಯ ಮೇಲೆ ಬೀರಿದಷ್ಟೇ ಪ್ರತಿಕೂಲ ಪರಿಣಾಮ ಮಾನಸಿಕ ಆರೋಗ್ಯದ ಮೇಲೂ ಬೀರಿದೆ. ಉದ್ಯೋಗ ನಷ್ಟ, ವಸತಿ ಸಮಸ್ಯೆ, ಆತ್ಮೀಯರ ಅಗಲಿಕೆಗಳಂತಹ ನಾನಾ ಕಾರಣಗಳು ಸೃಷ್ಟಿಸಿದ ಒತ್ತಡ ಮತ್ತು ಆತಂಕ ಅಷ್ಟಿಷ್ಟಲ್ಲ. ಒತ್ತಡವನ್ನು ನಿಭಾಯಿಸಲಾಗದವರಿಗೆಂದೇ  ದೇಶದ ಹದಿಮೂರು ಭಾಷೆಗಳಲ್ಲಿ KIRAN ಎಂಬ ಹೆಲ್ಪ್‌ಲೈನ್ ತೆರೆಯಲಾಗಿತ್ತು. 

ADVERTISEMENT

ಈ ಹೆಲ್ಪ್‌ಲೈನ್ ಅನ್ನು ಸಪ್ಟೆಂಬರ್ 16ರಂದು ತೆರೆಯಲಾಗಿದ್ದು, ಸೆಪ್ಟೆಂಬರ್ ಮತ್ತು ಮೇ 31 ರ ನಡುವೆ ಸಹಾಯವಾಣಿಗೆ ಒಟ್ಟು 29,975 ಕರೆಗಳು ಬಂದಿದ್ದವು ಎಂದು ಅಧ್ಯಯನವೊಂದು ತಿಳಿಸಿದೆ.  ಈ ಪೈಕಿ 69.9 ರಷ್ಟು ಕರೆಗಳು ಪುರುಷರಿಂದ ಬಂದಿದ್ದರೆ, ಉಳಿದ 30.1 ಶೇಕಡಾ ಮಹಿಳೆಯರಿಂದ ಬಂದಿದೆ ಎಂದು ಸರ್ಕಾರ ಹೇಳಿದೆ.  ಅಲ್ಲದೆ  ಶೇಕಡಾ 76.8ರಷ್ಟು ಮಂದಿ 15-40 ವರ್ಷ ವಯಸ್ಸಿನವರಾಗಿದ್ದರೆ, 16.8 ಶೇಕಡಾ ಜನ 41 ರಿಂದ 60 ವರ್ಷದೊಳಗಿನವರು ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.

ಕರೆ ಮಾಡಿದವರಲ್ಲಿ ಅತಿ ಹೆಚ್ಚು ಶೇಕಡಾವಾರು ವಿದ್ಯಾರ್ಥಿಗಳು (ಶೇಕಡಾ 32.6), ನಂತರದ ಸ್ಥಾನದಲ್ಲಿ  ವೃತ್ತಿಪರರು (ಶೇ 25.5) ಇದ್ದರು. ಶೇ 20.4 ನಿರುದ್ಯೋಗಿಗಳು , ಶೇ 14.2 ಸ್ವಯಂ ಉದ್ಯೋಗಿಗಳು  ಮತ್ತು ಶೇ 4.4 ಗೃಹಿಣಿಯರೂ ಕರೆ ಮಾಡಿದ್ದಾರೆ . ಸರ್ಕಾರದ ದಾಖಲೆಯ ಪ್ರಕಾರ, ಶೇಕಡಾ 2.9 ರಷ್ಟು ಕರೆ ಮಾಡಿದವರು ತಮ್ಮ ಬಗ್ಗೆ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಿಲ್ಲ.

ಈ ಅವಧಿಯಲ್ಲಿ ಪ್ರತಿ ತಿಂಗಳು ಸರಾಸರಿ 3,700 ಕ್ಕೂ ಹೆಚ್ಚು ಕರೆಗಳನ್ನು ಸಹಾಯವಾಣಿ ಸ್ವೀಕರಿಸುತ್ತಿತ್ತು.  ಇವುಗಳಲ್ಲಿ, ಶೇಕಡಾ 50 ಕ್ಕಿಂತ ಸ್ವಲ್ಪ ಹೆಚ್ಚು ಖಿನ್ನತೆ ಮತ್ತು ಆತಂಕದ ಸಮಸ್ಯೆಗಳಿಗೆ ಸಂಬಂಧಿಸಿದ್ದವುಗಳಾಗಿದ್ದವು.

“ಜನರು ತಮ್ಮ ಕುಟುಂಬ ಸದಸ್ಯರು ,ಅವರ ಆರೋಗ್ಯ ಮತ್ತು ಅವರ ಭವಿಷ್ಯದ ಬಗ್ಗೆ ಭಯಭೀತರಾಗಿದ್ದರು” ಎಂದು ನೊಯ್ಡಾದ ಬೌದ್ಧಿಕ ವಿಕಲಾಂಗರ ಸಬಲೀಕರಣ  ಸಂಸ್ಥೆ (NIEPID)ಯ ಸಹಾಯವಾಣಿಯನ್ನು  ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.

“ಸಾಂಕ್ರಾಮಿಕದ ಕಾರಣದಿಂದಾಗಿ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಾದ ವ್ಯತ್ಯಯದಿಂದಾಗಿ ಖಂಡಿತವಾಗಿಯೂ ಖಿನ್ನತೆ ಮತ್ತು ಆತಂಕದ ವಿಚಾರದಲ್ಲೇ ಹೆಚ್ಚಿನ ಕರೆಗಳು ಬಂದಿವೆ” ಎಂದೂ ಅವರು ಹೇಳಿದ್ದಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ವಿಕಲಾಂಗರ ಸಬಲೀಕರಣಕ್ಕಾಗಿ  (ಡಿಇಪಿಡಬ್ಲ್ಯುಡಿ) ಅಭಿವೃದ್ಧಿಪಡಿಸಿದ ಕಿರಣ್ ಸಹಾಯವಾಣಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ  ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವವರಿಗೆ ಮೊದಲ ಹಂತದ ಆಪ್ತ ಸಮಾಲೋಚನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ
ಸಹಾಯವಾಣಿ ಸೇವೆ (1800-599-0019)ಯು 13 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.  25 ಸಹಾಯವಾಣಿ ಕೇಂದ್ರಗಳಿವೆ. ಈ ಪೈಕಿ ಎಂಟು ರಾಷ್ಟ್ರೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, 14 ಸಂಯೋಜಿತ ಪ್ರಾದೇಶಿಕ ಮಾನಸಿಕ ಆರೋಗ್ಯ ಕೇಂದ್ರಗಳು ಮತ್ತು ಮೂರು ಪ್ರಾದೇಶಿಕ ಕೇಂದ್ರಗಳಾಗಿವೆ.  ಸಹಾಯವಾಣಿಯು 660 ಕ್ಲಿನಿಕಲ್ ಮತ್ತು ಪುನರ್ವಸತಿ ಮನಶ್ಶಾಸ್ತ್ರಜ್ಞರ ಮತ್ತು 668 ಮನೋವೈದ್ಯರ ಸೇವೆಯನ್ನು ತೊಡಗಿಸಿಕೊಂಡಿದೆ.

ಒಟ್ಟು ಕರೆಗಳಲ್ಲಿ ಶೇ.  30.1ಕರೆಗಳಿಗೆ ಆತಂಕದ ಸಮಸ್ಯೆಗಳಿಗೆ ಸಹಾಯದ ಅಗತ್ಯವಿದ್ದರೆ, 24.1 ಶೇಕಡಾ ಮಂದಿ ಖಿನ್ನತೆಯಿಂದ ಬಳಲುತ್ತಿದ್ದವರಾಗಿದ್ದಾರೆ.
ಉಳಿದ ಕರೆಗಳಲ್ಲಿ, 35.2 ಶೇಕಡಾ ಇತರ ಕಾರಣಗಳಿಗಾಗಿ, 5.6 ಶೇಕಡಾ ಇತರ ಕೋಬೊಡ್ ಸೃಷ್ಟಿಸಿದ ಇತರ ಸಮಸ್ಯೆಗಳಿಗೆ (ಉದ್ಯೋಗ ನಷ್ಟದಂತಹವು), 2.7 ಶೇಕಡಾ ಆತ್ಮಹತ್ಯಾ ಪ್ರವೃತ್ತಿಯಿಂದ ಬಂದವುಗಳು ಮತ್ತು 2.3 ಶೇಕಡಾ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದೆ.

“ಆತಂಕ ಮತ್ತು ಖಿನ್ನತೆಯು ಸಾಂಕ್ರಾಮಿಕ ರೋಗದಆರೋಗ್ಯದ ಬಗೆಗಿನ ಚಿಂತೆಗಳಂತಹ ತಕ್ಷಣದ ಕಾರಣಗಳಿಂದಾಗಿ ಮಾತ್ರವಲ್ಲ, ಉದ್ಯೋಗ ನಷ್ಟ ಅಥವಾ ಅನಿಶ್ಚಿತತೆಯಂತಹ ಕಾರಣಗಳಿಂದಲೂ ಉಂಟಾಗಿವೆ” ಎಂದು ದೃಷ್ಟಿ ವಿಕಲಾಂಗತೆ ಹೊಂದಿರುವ ವ್ಯಕ್ತಿಗಳ ಸಬಲೀಕರಣದ ರಾಷ್ಟ್ರೀಯ ಸಂಸ್ಥೆಯ (ಎನ್ಐಇಪಿವಿಡಿ  )ಯ ಡೆಹ್ರಾಡೂನಿನ ಹೆಲ್ಪ್ಲೈನಿನ ಡಾ.ಸುರೇಂದ್ರ ಧಲ್ವಾಲ್ ವಿವರಿಸಿದ್ದಾರೆ. “ಆಪ್ತ ಸಮಾಲೋಚನೆಯ ಮೂಲಕ ಪರಿಹರಿಸಬಹುದಾದ ಹಲವು ವಿಷಯಗಳಿವೆ.  ಚಿಕಿತ್ಸೆಯು ದುಬಾರಿಯಾಗಿದೆ, ಆದರೆ ಈ ಸಹಾಯವಾಣಿ ಮಾನಸಿಕ ಆರೋಗ್ಯ ಸೇವೆಗಳು‌ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ ”ಎಂದು ಅವರು ಹೇಳಿದ್ದಾರೆ.

ಹೆಲ್ಪ್‌ಲೈನ್‌ನಲ್ಲಿ ಸ್ವೀಕರಿಸಿದ ಕರೆಗಳಿಗೆ ಮೂರು ಹಂತಗಳಲ್ಲಿ ಸ್ಪಂದಿಸಲಾಗುತ್ತದೆ ಎಂದು ಸರ್ಕಾರದ ದಾಖಲೆ ತಿಳಿಸಿದೆ.ಮೊದಲ ಹಂತದಲ್ಲಿ, ‘ಸೌಮ್ಯ ಕಾಳಜಿ’ ಗಳನ್ನು ವೃತ್ತಿಪರ ಸಲಹೆಗಾರರು ನಿರ್ವಹಿಸುತ್ತಾರೆ.  ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ, ಎರಡನೇ ಹಂತದಲ್ಲಿ, ಈ ಕೇಂದ್ರಗಳಲ್ಲಿ ಕೆಲಸ ಮಾಡುವ ಮನಶ್ಶಾಸ್ತ್ರಜ್ಞರಿಗೆ ಕರೆಗಳನ್ನು ರವಾನಿಸಲಾಗುತ್ತದೆ.  ಮನಶ್ಶಾಸ್ತ್ರಜ್ಞನಿಗೆ ಅಗತ್ಯವೆಂದು ತೋರಿದರೆ ಕರೆ ಮಾಡಿದವರನ್ನು ನಂತರ ಬಾಹ್ಯ ಮಾನಸಿಕ ತಜ್ಞರೊಂದಿಗೆ ಸಂಪರ್ಕಿಸಲಾಗುತ್ತದೆ.
“ನಿಜವಾದ ಸವಾಲು ಕುಟುಂಬ ಸದಸ್ಯರದ್ದು. ವಿಶೇಷವಾಗಿ ಉದಾಹರಣೆಗೆ, ಹೆಂಡತಿಗೆ ಸಮಸ್ಯೆಗಳಿದ್ದು,  ಗಂಡ ಅದನ್ನು ಗುರುತಿಸದಿದ್ದರೆ ಮತ್ತು ನಿರಾಕರಿಸುತ್ತಿದ್ದರೆ  ಸಮಸ್ಯೆ ಹೊಂದಿರುವವರಿಗೆ ಸಹಾಯ ಮಾಡಲು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವುದು ತುಂಬಾ ಕಷ್ಟಕರವಾಗುತ್ತದೆ.  ಆಗ ಕುಟುಂಬ ಸದಸ್ಯರನ್ನು ಮನವೊಲಿಸಲು ಮಾರ್ಗಗಳನ್ನು‌ ಮೊದಲು ರೂಪಿಸಬೇಕಾಗುತ್ತದೆ. ಆದ್ದರಿಂದ, ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ದೊಡ್ಡ ಸವಾಲಾಗಿ ಮುಂದುವರೆದಿದೆ ”ಎಂದು ನೋಯ್ಡಾದ ಎನ್‌ಐಇಪಿಐಡಿಯ ಹಿರಿಯ ಅಧಿಕಾರಿ ಹೇಳಿರುವುದಾಗಿ ‘ದಿ ಪ್ರಿಂಟ್’ ವರದಿ ಮಾಡಿದೆ.
ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಒಪ್ಪಿಕೊಳ್ಳುವುದರಲ್ಲಿ ಅವಮಾನದ ಭಾವನೆ ಇರುತ್ತದೆ. ಇದು ಸಮಸ್ಯೆಯನ್ನು ಪರಿಹರಿಸಲು ಕಷ್ಟವಾಗುತ್ತದೆ.  “ನಾವು ದೈಹಿಕ ಕಾಯಿಲೆಗಳಿಗೆ ಸುಲಭವಾಗಿ ಸಹಾಯವನ್ನು ಪಡೆಯುತ್ತೇವೆ, ಆದರೆ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಇನ್ನೂ ಒಂದು ರೀತಿಯ ಜಿಂಜರಿಕೆ ಇದೆ” ಎಂದು ಎನ್ಐಇಪಿವಿಡಿ ಡೆಹ್ರಾಡೂನ್‌ನ ಡಾ.ಸುರೇಂದ್ರ ಧಲ್ವಾಲ್ ಹೇಳುತ್ತಾರೆ.

Previous Post

ಪರಿಸರ vs ಮಾನವ ಸಂಘರ್ಷಕ್ಕೆ ಸಾಕ್ಷಿಯಾದ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿ!

Next Post

ಕನ್ನಡಿಗರ, ಕನ್ನಡದ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನಿದೆ ಎಂದು ಸವಿಸ್ತಾರವಾದ ಚರ್ಚೆಯಾಗಬೇಕು-HD ಕುಮಾರಸ್ವಾಮಿ

Related Posts

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್
ಕರ್ನಾಟಕ

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

by ಪ್ರತಿಧ್ವನಿ
July 13, 2025
0

ಕನಕದಾಸರು ಕುಲದ ಅವಮಾನವನ್ನು ಅನುಭವಿಸಿ ಬಳಿಕ ಅಳಿಸಿದರು: ಕೆ.ವಿ.ಪಿ ಕನಕದಾಸರನ್ನು ಭಕ್ತಿಗೆ ಕಟ್ಟಿಹಾಕದೆ-ಅವರ ಬಂಡಾಯವನ್ನೂ ನಾವು ಅರಿಯಬೇಕಿದೆ: ಕೆ.ವಿ.ಪಿ ಪ್ರತಿಭಾ ಪುರಸ್ಕಾರ ಅಂದರೆ ಆತ್ಮವಿಶ್ವಾಸದ ರಕ್ತದಾನವಿದ್ದಂತೆ: ಕೆ.ವಿ.ಪ್ರಭಾಕರ್...

Read moreDetails

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

July 13, 2025

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

July 12, 2025

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

July 12, 2025
Next Post
ಕನ್ನಡಿಗರ, ಕನ್ನಡದ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನಿದೆ ಎಂದು ಸವಿಸ್ತಾರವಾದ ಚರ್ಚೆಯಾಗಬೇಕು-HD ಕುಮಾರಸ್ವಾಮಿ

ಕನ್ನಡಿಗರ, ಕನ್ನಡದ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನಿದೆ ಎಂದು ಸವಿಸ್ತಾರವಾದ ಚರ್ಚೆಯಾಗಬೇಕು-HD ಕುಮಾರಸ್ವಾಮಿ

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

by ಪ್ರತಿಧ್ವನಿ
July 13, 2025
ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ
Top Story

ಕೆಬಿ ಗಣಪತಿ ನಿಧನಕ್ಕೆಕೆಯುಡಬ್ಲ್ಯೂಜೆ ಸಂತಾಪ

by ಪ್ರತಿಧ್ವನಿ
July 13, 2025
Top Story

Byrathi Suresh: ಸಿದ್ದರಾಮಯ್ಯನ ಮೇಲಿನ ಹೊಟ್ಟೆ ಉರಿಗೆ ಇಲ್ಲಸಲ್ಲದ ಆರೋಪ ಮಾಡ್ತಾರೆ..!!

by ಪ್ರತಿಧ್ವನಿ
July 12, 2025
Top Story

DK Suresh: ಶಿವಕುಮಾರ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತ, ಶಾಸಕರ ಬಲಾಬಲ ಪ್ರದರ್ಶಿಸುವ ವ್ಯಕ್ತಿತ್ವ ಅವರದಲ್ಲ..

by ಪ್ರತಿಧ್ವನಿ
July 12, 2025
Top Story

CT Ravi: ಕಾಂಗ್ರೇಸ್‌ ಪಕ್ಷದಲ್ಲಿ ಡಿಕೆ ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ..

by ಪ್ರತಿಧ್ವನಿ
July 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

ಕನಕನ‌ ಮಕ್ಕಳು ಕೀಳರಿಮೆಯಿಂದ ಹೊರಬರಬೇಕಿದೆ: ಕೆ.ವಿ.ಪ್ರಭಾಕರ್

July 13, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

July 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada