ವಿಶ್ವದ ಮಾಜಿ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ವಜ್ರಗಳನ್ನು ಅಳವಡಿಸಲಾಗಿದ್ದ ಶೂ ಧರಿಸಿ ಆಡಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗಷ್ಟೇ ನಿವೃತ್ತಿಯ ಸುಳಿವು ನೀಡಿದ್ದ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ನಲ್ಲಿ ಕೊನೆಯ ಬಾರಿ ಆಡಲಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ತಡರಾತ್ರಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೆರೆನಾ ಭರ್ಜರಿ ಪ್ರದರ್ಶನ ನೀಡುವ ಮೂಲಕ ಶುಭಾರಂಭ ಮಾಡಿದ್ದರು.
ಸೆರೆನಾ ಒಂದೇ ಪಂದ್ಯ ಗೆದ್ದರೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಟೂರ್ನಿಗಳಲ್ಲಿ ಚಿತ್ರ ವಿಚಿತ್ರ ಡ್ರೆಸ್ ಗಳ ಮೂಲಕ ಗಮನ ಸೆಳೆಯುತ್ತಿದ್ದ ಸೆರೆನಾ ಇದೀಗ ತಾವು ಧರಿಸಿದ ಶೂನಿಂದ ಗಮನ ಸೆಳೆದಿದ್ದಾರೆ.

ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಸೆರೆನಾ ಅದಕ್ಕೆ ಹೊಂದುವಂತಹ ಕಪ್ಪು ಬಣ್ಣದ ಶೂ ಧರಿಸಿದ್ದರು. ಇದು ಮಾಮೂಲಿ ಕ್ರೀಡಾಪಟುಗಳು ಬಳಸುವ ಶೂನಂತೆ ಇರಲಿಲ್ಲ. ಇದಕ್ಕೆ ಕಾರಣ ವಜ್ರದ ಹರಳುಗಳುನ್ನು ಚೀಪದ ಲೇಪ ಹೊಂದಿದ ಶೂ ಧರಿಸಿ ಆಡಿದರು.
ಪಾದರಕ್ಷೆಗಳ ತಯಾರಿಕಾ ಸಂಸ್ಥೆ ನೈಕಿ ಜೊತೆ ಜಾಹಿರಾತು ಒಪ್ಪಂದ ಮಾಡಿಕೊಂಡಿರುವ ಸೆರೆನಾ ವಿಲಿಯಮ್ಸ್ ಧರಿಸಿದ ಶೂ ಮೇಲೆ ಮಾಮಾ (mama) ಮತ್ತು ಕ್ವೀನ್ (queen) ಎಂದು ವಿಶೇಷವಾಗಿ ಬರೆಯಲಾಗಿತ್ತು. ವಿಶೇಷವಾಗಿ ತಯಾರಿಸಿದ ಶೂ ಬೆಲೆ ಕೋಟ್ಯಂತರ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗಿದ್ದು, ನಿಖರ ಬೆಲೆ ಗುಟ್ಟುಬಿಟ್ಟುಕೊಟ್ಟಿಲ್ಲ.









