ಇತ್ತೀಚೆಗಷ್ಟೇ ಮ್ಯಾಕ್ಸ್ (Max) ಸಿನಿಮಾದ ಶೂಟಿಂಗ್ ಮುಗಿಸಿ ಹೊಸ ಹೇರ್ ಕಟ್ ನಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ (Kichha sudeep) ಮಂಗಳೂರಿನ ಪಟ್ಲ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು . ಇಲ್ಲಿ ಕಿಚ್ಚ ಸುದೀಪ್ ಹಾಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿದೆ.
ವೇದಿಕೆಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪ್ರತಿಯೊಬ್ಬ ಅತಿಥಿಯು ಕೂಡ ,ನಮ್ಮ ತುಳುನಾಡಿಗೆ ಸ್ವಾಗತ ಎಂದು ಕಿಚ್ಚ ಸುದೀಪ್ ರನ್ನ ಸ್ವಾಗತ ಮಾಡಿದ್ದರು . ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ನಮ್ಮ ತುಳುನಾಡು – ನಮ್ಮ ತುಳು ನಾಡು ಎಂದು ಹೇಳುವ ಮೂಲಕ ನಮ್ಮನ್ನು ಹೊರಗಿನವರಾಗಿ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ.

ತುಳುನಾಡು ಕರ್ನಾಟಕದಲ್ಲಿದೆ (Karnataka). ಕರ್ನಾಟಕ ನಮ್ಮ ಹೃದಯದಲ್ಲಿದೆ ಹೀಗಾಗಿ ಪ್ರತ್ಯೇಕವಾಗಿ ನಮ್ಮ ತುಳು ನಾಡು ನಮ್ಮ ತುಳುನಾಡಿಗೆ ಸ್ವಾಗತ ಎಂದು ಹೇಳುವ ಮೂಲಕ, ನಮ್ಮನ್ನು ಹೊರಗಿನವರನ್ನಾಗಿಸಬೇಡಿ ಎಂಬ ಹೇಳಿಕೆ ನೀಡಿರುವುದು ಬೇರೆ ಬೇರೆ ಸ್ವರೂಪದ ಚರ್ಚೆಗೆ ಕಾರಣವಾಗಿದೆ.

ಈ ಮೊದಲಿನಿಂದಲೂ ತುಳುನಾಡು (Tulu) ಪ್ರತ್ಯೇಕತೆಯ ಕೂಗು ಇರುವುದರಿಂದ ವಿನಯವಾಗಿಯೇ ಕಿಚ್ಚ ಸುದೀಪ್ ಅದಕ್ಕೆ ಈ ರೀತಿ ಉತ್ತರಿಸುವ ಮೂಲಕ ಅಖಂಡ ಕರ್ನಾಟಕದ ಕಲ್ಪನೆಯನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಲಾಗುತ್ತಿದೆ ಅವರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.