ಚಂಡೀಗಢ: ರಬ್ಬರ್ ಕಾರ್ಖಾನೆಯೊಂದರಲ್ಲಿ ಭೀಕರ ಅಗ್ನಿ ಅಪಘಡ ಸಂಭವಿಸಿದ ಪರಿಣಾಮ 40ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
![](https://pratidhvani.com/wp-content/uploads/2024/05/RUBBER-FACTORY-1.png)
ಸೋನಿಪತ್ (Sonipat) ಜಿಲ್ಲೆಯ ರಾಯ್ ಕೈಗಾರಿಕಾ ಪ್ರದೇಶದ ರಬ್ಬರ್ ಕಾರ್ಖಾನೆಯಲ್ಲಿ (Rubber Factory) ಈ ಘಟನೆ ನಡೆದಿದೆ. ಕಾರ್ಖಾನೆಯಲ್ಲಿ ಸಿಲಿಂಡರ್ಗಳು (Cylinder) ಸ್ಫೋಟಗೊಂಡಿದ್ದು, 40ಕ್ಕೂ ಅಧಿಕ ಜನ ಕಾರ್ಮಿಕರು ಸುಟ್ಟು ಭಸ್ಮವಾಗಿದ್ದಾರೆ.
![](https://pratidhvani.com/wp-content/uploads/2024/05/RUBBER-FACTORY.png)
ಅಲ್ಲದೇ, ಇನ್ನೂ ಹಲವು ಕಾರ್ಮಿಕರನ್ನು ರಕ್ಷಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. 16 ಜನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವರ ಸ್ಥಿತಿ ಗಂಭೀರವಾಗಿದೆ.