ಬಾಲಿವುಡ್ ನಟ ಅಕ್ಷಯ್ ಕುಮಾರ್ ಬುಧವಾರ ಮುಂಬೈನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮೂರು ನಿಮಿಷಗಳಲ್ಲಿ ಅತಿ ಹೆಚ್ಚು ಸೆಲ್ಫಿಗಳನ್ನು ತೆಗೆದುಕೊಂಡು ಗಿನ್ನಿಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಇಮ್ರಾನ್ ಖಾನ್ ಸಹನಟರಾಗಿ ಅಭಿನಯಿಸಿರುವ ತಮ್ಮ ಮುಂಬರುವ ʼಸೆಲ್ಫಿʼ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಅಕ್ಷಯ್, 3 ನೀಮಿಷಗಳಲ್ಲಿ 184 ಸೆಲ್ಫಿಗಳನ್ನು ತೆಗೆದು ದಾಖಲೆ ನಿರ್ಮಿಸಿದ್ದಾರೆ.
ಈ ದಾಖಲೆಯನ್ನು ನಿರ್ಮಿಸಲು ಮತ್ತು ವಿಶೇಷ ಕ್ಷಣವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ ಎಂದು ಅಕ್ಷಯ್ ಹೇಳಿದ್ದಾರೆ.
ಜನವರಿ 22, 2018 ರಂದು ಕಾರ್ನಿವಲ್ ಡ್ರೀಮ್ ಕ್ರೂಸ್ ಹಡಗಿನಲ್ಲಿ ಜೇಮ್ಸ್ ಸ್ಮಿತ್ ಮೂರು ನಿಮಿಷಗಳಲ್ಲಿ 168 ಸೆಲ್ಫಿಗಳನ್ನು ತೆಗೆದು ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಅಕ್ಷಯ್ ಮುರಿದಿದ್ದಾರೆ. ಅದಕ್ಕೂ ಮುನ್ನ, 2015 ರಲ್ಲಿ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಮೂರು ನಿಮಿಷಗಳಲ್ಲಿ 105 ಸೆಲ್ಫಿಗಳೊಂದಿಗೆ ಈ ದಾಖಲೆಯನ್ನು ನಿರ್ಮಿಸಿದ್ದರು.
ಸೆಲ್ಫಿ ಚಿತ್ರವು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಸುರಾಜ್ ವೆಂಜಾರಮೂಡು ಅಭಿನಯದ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ಅಧಿಕೃತ ರಿಮೇಕ್ ಆಗಿದೆ. ಇದರಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರವನ್ನು ಮಾಡಲಿದ್ದು, ಸೂಪರ್ ಸ್ಟಾರ್ ಆಗಿ ಕಾಣಿಸಿಕೊಳ್ಳಲಿದ್ದು, ಇಮ್ರಾನ್ ಖಾನ್ ಟ್ರಾಫಿಕ್ ಪೋಲೀಸ್ ಪಾತ್ರವನ್ನು ಕಾಣಿಸಲಿದ್ದಾರೆ. ಮಳೆಯಾಲಂನಲ್ಲಿ ಈ ಪಾತ್ರವನ್ನು ಸುರಾಜ್ ಮಾಡಿದ್ದರು.

‘ಸೆಲ್ಫಿ’ ಚಿತ್ರವನ್ನು ದಿವಂಗತ ಅರುಣಾ ಭಾಟಿಯಾ, ಹಿರೂ ಯಶ್ ಜೋಹರ್, ಸುಪ್ರಿಯಾ ಮೆನನ್, ಕರಣ್ ಜೋಹರ್, ಪೃಥ್ವಿರಾಜ್ ಸುಕುಮಾರನ್, ಅಪೂರ್ವ ಮೆಹ್ತಾ ಮತ್ತು ಲಿಸ್ಟಿನ್ ಸ್ಟೀಫನ್ ನಿರ್ಮಿಸಿದ್ದದು, ಇದು ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ.
