ಬೆಂಗಳೂರು:ನಾಳೆ ಅಂದರೆ ಮೇ 21ರಂದು ದ್ವಿತೀಯ ಪಿಯುಸಿ -2ರ(Karnataka Second PUC Exam 2nd Result 2024) ಫಲಿತಾಂಶ ಪ್ರಕಟವಾಗಲಿದೆ.
![](https://pratidhvani.com/wp-content/uploads/2024/04/Karnataka-2nd-PUC-2023-Results-to-be-announced-Tomorrow-1-1024x576.webp)
ಮಂಗಳವಾರ ಮಧ್ಯಾಹ್ನ 3ಕ್ಕೆ ಫಲಿತಾಂಶ ಬಿಡುಗಡೆಯಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತವಾ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
![](https://pratidhvani.com/wp-content/uploads/2024/05/second-puc-result-1024x576.webp)
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಆದರೆ, ಈ ಬಾರಿ ಮೂರು ಬಾರಿ ವಾರ್ಷಿಕ ಪರೀಕ್ಷೆ ನಡೆಸಲು ಮಂಡಳಿ ನಿರ್ಧರಿಸಿದೆ. ಹೀಗಾಗಿ ಎರಡನೇ ಪರೀಕ್ಷೆಯ ಏ. 29ರಿಂದ ಮೇ 15ರ ವರೆಗೆ ನಡೆದಿದ್ದವು. ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಅಂಕ ಹೆಚ್ಚಿಸಿಕೊಳ್ಳಲು ಬಯಸಿದ ವಿದ್ಯಾರ್ಥಿಗಳು ಈ ಪರೀಕ್ಷೆ ಎದುರಿಸಿದ್ದರು. ಈಗ ಈ ಪರೀಕ್ಷೆಯ ಫಲಿತಾಂಶ ಹೊರ ಬೀಳುತ್ತಿದ್ದು, ಮಂಗಳವಾರ ಮಧ್ಯಾಹ್ನ 3ಕ್ಕೆ ವೀಕ್ಷಿಸಬಹುದಾಗಿದೆ.
ದ್ವಿತೀಯ ಪಿಯುಸಿ 2ರ ಫಲಿತಾಂಶವನ್ನು ಮಧ್ಯಾಹ್ನ 3ಕ್ಕೆ https://karresults.nic.in ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು.