ಎಸ್‌ಡಿಜಿ ಇಂಡಿಯಾ ಸೂಚ್ಯಂಕ: ದಕ್ಷಿಣ ರಾಜ್ಯಗಳೇ ಅಗ್ರಗಣ್ಯ, ಯಾವ ರಾಜ್ಯಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್ ಡಿ ಜಿ) ಅಥವಾ ಜಾಗತಿಕ ಗುರಿಗಳು ಅನ್ನೋದು 17 ಪರಸ್ಪರ ಬೆಸೆದುಕೊಂಡಂತಹ ಜಾಗತಿಕ ಗುರಿಗಳು. ವಿಶ್ವ ಸಂಸ್ಥೆ ಮಹಾಸಭೆ 2015 ರಲ್ಲಿ ಉತ್ತಮ ಸುಸ್ಥಿರ ಭವಿಷ್ಯಕ್ಕಾಗಿ ರೂಪಿಸಿದ ನೀಲನಕ್ಷೆಯಿದು. ಈ ಎಲ್ಲ ಗುರಿಗಳನ್ನ ವರುಷ 2030ರೊಳಗೆ ಸಾಧಿಸುವ ಮಹದಾಸೆ ವಿಶ್ವಸಂಸ್ಥೆಯದು. ಈ ಸುಸ್ಥಿರ ಅಭಿವೃದ್ಧಿ ಗುರಿಗಳನ್ನ 2030 ರೊಳಗೆ ಸಾಧಿಸಲು ಭಾರತ ಸರ್ಕಾರ ನೀತಿ ಆಯೋಗವನ್ನ ರಚಿಸಿದೆ.

ಎಸ್ ಡಿ ಜಿ ಮೊದಲ 17 ಗುರಿಗಳು ಇಂತಿವೆ.

ಬಡತನ ನಿವಾರಣೆ, ಹಸಿವಿನ ನಿರ್ಮೂಲನೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಶ್ರೇಷ್ಠ ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಸ್ವಚ್ಛ ಮತ್ತು ಕೈಗೆಟಕುವ ಶಕ್ತಿ, ಸಭ್ಯ ಕಾಯಕ ಮತ್ತು ಅರ್ಥಿಕಾಭಿವೃದ್ಧಿ, ಉದ್ಯಮ, ನಾವೀನ್ಯತೆ ಮತ್ತು ಮೂಲಭೂತ ಸೌಕರ್ಯ, ತಗ್ಗಿದ ಅಸಮಾನತೆಗಳು, ಸುಸ್ಥಿರ ನಗರ ಮತ್ತು ಸಮುದಾಯಗಳು, ಜವಾಬ್ದಾರಿಯುತ ಸೇವನೆ ಮತ್ತು ಉತ್ಪಾದನೆ, ಹಮಾಮಾನ ಕ್ರಿಯೆ (ಪರಿಸರ ರಕ್ಷಣೆ), ನೀರಿನೊಳಗಿನ ಜೀವಿಗಳು (ಸಾಗರ, ಕಡಲೊಳಗಿನ ಜೀವಿಗಳ ಕಾಳಜಿ), ಭೂಮಿಯ ಮೇಲಿನ ಜೀವಿಗಳು, ಶಾಂತಿ, ನ್ಯಾಯ ಮತ್ತು ಸಮರ್ಥ ಸಂಸ್ಥೆಗಳು, ಗುರಿಗಳಿಗಾಗಿ ಸಹಭಾಗಿತ್ವ. ಈ ಎಲ್ಲಾ ಗುರಿಗಳನ್ನು ಎಷ್ಟರಮಟ್ಟಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಗತಿಯನ್ನು ಸುಸ್ಥಿರ ಅಭಿವೃದ್ಧಿ ಗುರುಗಳು ಸಾಧಿಸಿದೆ ಎಂದು ಎಸ್‌ಡಿಜಿ ಮೌಲ್ಯಮಾಪನ ಮಾಡುತ್ತದೆ.

ಎಲ್ಲ ಅಂಕಿ ಅಂಶಗಳನ್ನ ನಿಷ್ಠುರವಾಗಿ ನಮ್ಮ ಮುಂದಿಡುತ್ತಾ ಯಾವುದೇ ರಾಜ್ಯಗಳ ಮನ ನೋಯಿಸದೆ ವರದಿ ತಯಾರಿಸುವ ಸವಾಲು ನೀತಿ ಆಯೋಗದ ಮುಂದಿರುತ್ತದೆ. ಅದೇ ರೀತಿ ಈ 17 ಗುರಿಗಳ ಆಧಾರದ ಮೇಲೆ ರಾಜ್ಯಗಳ ಸಾಧನೆಯೇನು ಎಂದು ಈ ವರದಿ ಮಾಹಿತಿ ಕೊಡುಬೇಕಾಗತ್ತೆ.

ಇಲ್ಲಿ ನಾಲ್ಕು ರೀತಿಯ ಮಾನದಂಡಗಳಿವೆ

aspirant- ಆಕಾಂಕ್ಷಿ
performer – ಉತ್ತಮ ಪ್ರದರ್ಶನ
front runner – ಮುಂಚೂಣಿಯಲ್ಲಿ
achiever- ಸಾಧಕ

ಇತ್ತೀಚಿಗೆ ನೀತಿ ಆಯೋಗ ಪ್ರಕಟಪಡಿಸಿದ 20-21 ಸಾಲಿನ ಎಸ್ ಡಿ ಜಿ ವರದಿ ಪ್ರಕಾರ, ಯಾವ ರಾಜ್ಯದ ಮಾನನಷ್ಟವಾಗದಂತೆ ಈ ವರದಿ ತಯಾರಿಸಲಾಗಿದೆ. ಈ ವರದಿಯಲ್ಲಿ ಕಳಪೆ ಪ್ರದರ್ಶನಕ್ಕೆ ಆಕಾಂಕ್ಷಿಯೆಂದು ಬಳಸಲಾಗಿದೆ. ಇದೊಂದು ಸೌಮ್ಯೋಕ್ತಿ ಅನ್ನೋದನ್ನ ಮೊದಲು ಅರ್ಥ ಮಾಡಿಕೊಳ್ಳಬೇಕು. ಕೆಳಗೆ ಪೋಸ್ಟ್ ಮಾಡಿರುವ ನಕ್ಷೆಗಳಲ್ಲಿ ಕೆಂಪು ಯಾವ ಯಾವ ರಾಜ್ಯಗಳನ್ನ ಅವರಿಸಿದೆಯೋ ಆ ರಾಜ್ಯಗಳು ಕಳಪೆ ಪ್ರದರ್ಶನ ತೋರಿವೆಯೆಂದೇ ಅರ್ಥ ಎಂದು ಹರೀಶ್ ಅವರು ತುಂಬಾ ಚನ್ನಾಗಿ ವಿವರಿಸಿದ್ದಾರೆ.

ಎಸ್ ಡಿ‌ ಜಿ ಅಂಕಿ ಅಂಶಗಳು ಇರುವ ವರದಿಯ ಪ್ರಕಾರ

2020ರ ರಾಷ್ಟ್ರೀಯ ಸರಾಸರಿ 66%.

ಕೇರಳ 75% ಎಲ್ಲ ರಾಜ್ಯಗಳಿಗಿಂತ ಮುಂದಿದೆ. 74% ಪಡೆದು ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ಕೇರಳಕ್ಕೆ ಒಳ್ಳೆಯ ಪೈಪೋಟಿ ನೀಡುತ್ತಿವೆ. 72% ಗಳಿಸಿದ ಕರ್ನಾಟಕ, ಗೋವಾ, ಆಂಧ್ರ ಮತ್ತು ಉತ್ತರಾಖಂಡ ಮೂರನೇ ಸ್ಥಾನದಲ್ಲಿವೆ. ಮೂರು ಈಶಾನ್ಯ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಶೇಕಡಾ ಗಳಿಸಿವೆ. ಈ ವರದಿ ಪ್ರಕಾರ ಇನ್ನು ಮುಂದೆ ಈಶಾನ್ಯ ರಾಜ್ಯಗಳನ್ನ ಹೊರೆಯೆಂದು ನೋಡುವ ಅವಶ್ಯಕತೆಯಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ ಪ್ರದರ್ಶನ ಕಳಪೆಯಾದರೆ, ಮಿಝೋರಂ ಎಲ್ಲ 17 ಗುರಿಯಲ್ಲೂ ಗಣನೀಯ ಸಾಧನೆ ಮಾಡಿದೆ. ಮುಖ್ಯವಾಗಿ ಗುಜರಾತ್ ಹತ್ತನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ ಬಿಹಾರ್ ಕೇವಲ 52% ಪಡೆದು ಕೊನೆಯ ಸ್ಥಾನದಲ್ಲಿದ್ದು ರಾಷ್ಟ್ರೀಯ ಸರಾಸರಿಗಿಂತ ತುಂಬಾ ಹಿಂದುಳಿದಿದೆ. ಉತ್ತರ ಪ್ರದೇಶ 60% ಗಳಿಸಿ ರಾಷ್ಟ್ರೀಯ ಸರಾಸರಿಗಿಂತ ಸಾಕಷ್ಟು ಹಿಂದುಳಿದಿದೆ.

ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಕರ್ನಾಟಕದ ಪ್ರದರ್ಶನ ಕಳಪೆಯಾಗಿರುವುದನ್ನು ನಾವು ಈ ವರದಿಯಲ್ಲಿ ಕಾಣಬಹುದು. ಕಾಶ್ಮೀರ ಸಾಕಷ್ಟು ಸುಸ್ಥಿರ ಸಾಮಾಜಿಕ ಸೂಚಕಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ ಮತ್ತು ಲಸಿಕೆ ಅಭಿಯಾನದಲ್ಲಿ ಕಾಶ್ಮೀರ ದೇಶಕ್ಕೆ ಮಾದರಿಯೆಂದರೆ ತಪ್ಪಾಗಲಾರದು. ಕಡಿಮೆ ತೂಕದ ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿ ಜಾರ್ಕಂಡ, ಬಿಹಾರ್, ಗುಜರಾತ್, ಉತ್ತರಪ್ರದೇಶ, ಆಂಧ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿದೆ. ಬೆಳವಣಿಗೆ ಕುಂಠಿತವಾಗಿರುವ ಮಕ್ಳಳ ಸಂಖ್ಯೆ ಅತಿ ಹೆಚ್ಚಾಗಿ ಬಿಹಾರ ಮತ್ತು ಗುಜರಾತ್ನಲ್ಲಿದೆ.

ಉತ್ತರ ದೇಶ ರಾಜ್ಯಗಳು ಹಿಂದಿ ರಾಜ್ಯ ಎಂದೇ ನಮಗೆ ಪರಿಚಯವಿರುವ ಉತ್ತರಪ್ರದೇಶ, ಬಿಹಾರ, ಝರ್ಕಂಡ್, ರಾಜಸ್ಥಾನ, ಛತ್ತೀಸ್ಘಡ ಇಂದಿಗೂ ನಮ್ಮ ದೇಶದ ಮಾದರಿ ಅಂತಲೇ ತೋರಿಸಲಾಗುತ್ತಿದೆ. ದಕ್ಷಣ ಭಾರತದ ರಾಜ್ಯಗಳು ಅಂದರೆ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸುಭಿಕ್ಷಾ ಮತ್ತು ಸುಸ್ಥಿರ ಅಭಿವೃದ್ಧಿಯ ಪಥದಲ್ಲಿವೆ. ಆದರೆ ಯೋಗಿ ಅಧಿತ್ಯನಾಥ, ನಿತೀಶ್ ಅವರನ್ನ ಮಾದರಿ ನಾಯಕರೆಂದು ಮುಖ ಮಾಡಿ ನೋಡುವ ಮುನ್ನ ಈ ವರದಿ ಓದಬೇಕು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...