• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರದ್ದಾದ ಐಟಿ ಸೆಕ್ಷನ್​ ಅಡಿಯಲ್ಲಿ ಪೊಲೀಸರು ಈಗಲೂ ಪ್ರಕರಣ ದಾಖಲು: ಸುಪ್ರೀಂ ಕೋರ್ಟ್ ಕಳವಳ

ಪ್ರತಿಧ್ವನಿ by ಪ್ರತಿಧ್ವನಿ
July 6, 2021
in ದೇಶ, ರಾಜಕೀಯ
0
Share on WhatsAppShare on FacebookShare on Telegram

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್​ 66 ಎ ಅಡಿಯಲ್ಲಿ ಪೊಲೀಸರು ಈಗಲೂ ಪ್ರಕರಣ ದಾಖಲಿಸುತ್ತಿರೋದರ ಬಗ್ಗೆ ಸುಪ್ರೀಂ ಕೋರ್ಟ್​ ಕಳವಳ ವ್ಯಕ್ತಪಡಿಸಿದ್ದು ಸುಪ್ರೀಂಕೋರ್ಟ್ 2015 ರಲ್ಲೇ ರದ್ದುಗೊಂಡಿದ್ದ ಸೆಕ್ಷನ್ 66ಎ ಐಟಿ ಕಾಯ್ದೆಯಡಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದು ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ADVERTISEMENT

ಸುಪ್ರೀಂ ಕೋರ್ಟ್ 2015ರಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ರದ್ದುಗೊಳಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್​ 66 ಎ ಅಡಿಯಲ್ಲಿ ದೇಶಾದ್ಯಂತ ಪೊಲೀಸರೂ ಇನ್ನೂ ಪ್ರಕರಣಗಳನ್ನ ದಾಖಲಿಸುತ್ತಲೇ ಇರೋದು ನಿಜಕ್ಕೂ ಆಶ್ಚರ್ಯಕರ ಹಾಗೂ ದುಃಖಕರ ಸಂಗತಿಯಾಗಿದೆ ಎಂದು ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳಾದ ಆರ್​.ಎಫ್.​ ನಾರಿಮನ್​, ಕೆ.ಎಂ. ಜೋಸೆಫ್​ ಹಾಗೂ ಬಿ.ಆರ್. ಗವಾಯಿ ನೇತೃತ್ವದ ಪೀಠ ಹೇಳಿದೆ.

ಐಟಿ ಕಾಯ್ದೆ ಎಂದರೇನು? ಮತ್ತದು ರದ್ದತಿಯಾಗಿದ್ದು ಏಕೆ?

ಐಟಿ ಕಾಯ್ದೆಯ ಸೆಕ್ಷನ್​ 66ಎ ಅನ್ನೋದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರಮಣಕಾರಿ ವಿಷಯನ್ನ ಪೋಸ್ಟ್​ ಮಾಡುವವರ ಬಂಧನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ವಿವಾದಾತ್ಮಕ ಸೆಕ್ಷನ್​​ನ ಅಡಿಯಲ್ಲಿ ಆಕ್ರಮಣಕಾರಿ ಪೋಸ್ಟ್​​ಗಳನ್ನ ಶೇರ್​ ಮಾಡಿದವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವಿಚಾರಗಳ ಬಗ್ಗೆ ಆಕ್ರಮಣಾಕಾರಿಯಾಗಿ ಟಿಪ್ಪಣಿಗಳನ್ನ ಬರೆದವರನ್ನ ಬಂಧಿಸಲು ವಿವಿಧ ರಾಜ್ಯಗಳ ಪೊಲೀಸರು ಈ ಸೆಕ್ಷನ್​​ನ್ನು ವ್ಯಾಪಕವಾಗಿ ದುರುಪಯೋಗ ಮಾಡಿಕೊಂಡಿದ್ದರು. ಈ ಸೆಕ್ಷನ್​​​ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನ ಕಿತ್ತುಕೊಳ್ಳುತ್ತದೆ ಎಂದು ನ್ಯಾಯಪೀಠ ಹೇಳಿತ್ತು.

ಐಟಿ ಕಾಯ್ದೆ ಮತ್ತೆ ಮುನ್ನೆಲೆಗೆ ಬಂದಿದ್ದು ಏಕೆ? ಸುಪ್ರೀಂಕೋರ್ಟ್ ಹೇಳಿದ್ದೇನು?

ಈ ಕಾನೂನಿನಡಿಯಲ್ಲಿ ಎಫ್‌ಐಆರ್‌ಗಳನ್ನು ನೋಂದಾಯಿಸುವಂತಿಲ್ಲ ಎಂದು ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಎಂಬ ಎನ್‌ಜಿಒವೊಂದರ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ ಎರಡು ವಾರಗಳ ಅವಧಿಯಲ್ಲಿ ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ.

ಸೆಕ್ಷನ್‌ ರದ್ದಾದರೂ ಪ್ರಕರಣಗಳ ದಾಖಲು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಕ್‌, “ಪ್ರಕರಣಗಳು ಹೇಗೆ ಹೆಚ್ಚಿವೆ. ಜನರು ತೊಂದರೆ ಅನುಭವಿಸುತ್ತಿದ್ದಾರೆ,” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ರದ್ದು ಮಾಡಿದ ಕಾನೂನಿನಡಿಯಲ್ಲಿ ಎಫ್‌ಐಆರ್ ಮತ್ತು ಸಕ್ರಿಯ ತನಿಖೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಒತ್ತಾಯಿಸಿದರು. ಸೆ. 66 ಎ ರದ್ದುಗೊಳಿಸುವ ಮೊದಲು 11 ರಾಜ್ಯಗಳಲ್ಲಿ 229 ಪ್ರಕರಣಗಳು ದಾಖಲಾಗಿದೆ. ಆದರೆ ರದ್ದಾದ ಬಳಿಕ ಈ ಸೆಕ್ಷನ್‌ ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1,307 ಕ್ಕೆ ಏರಿದೆ, ಅದರಲ್ಲಿ 570 ಇನ್ನೂ ಬಾಕಿ ಉಳಿದಿವೆ ಎಂದು ಕೂಡಾ ಉಲ್ಲೇಖ ಮಾಡಿದರು.

ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ – ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಲು ಪಿಯುಸಿಎಲ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿದೆ – ಸೆಕ್ಷನ್ 66 ಎ ಅನ್ನು ರದ್ದು ಪಡಿಸಲಾಗಿದ್ದು, ಇನ್ನು ಮುಂದೆ ಇದು ಕಾನೂನು ಅಲ್ಲ ಎಂದು ಸಾರ್ವಜನಿಕರಿಗೆ ತಿಳಿಸಬೇಕಿದೆ. 2015 ರ ತೀರ್ಪನ್ನು ಪಾಲಿಸಬೇಕೆಂದು ಕೋರಿ ಎನ್‌ಜಿಒ 2018 ರಲ್ಲಿ ಇದೇ ರೀತಿಯ ಮನವಿ ಸಲ್ಲಿಸಿತ್ತು. ಆದರು ಈ ಸೆಕ್ಷನ್‌ ದುರ್ಬಳಕೆ ಆಗುತ್ತಿದೆ ಎಂದು ಸಂಜಯ್‌ ವಿವರಿಸಿದರು.

ಸೆಕ್ಷನ್ 166 ಅಡಿಯ ನಿಬಂಧನೆಯನ್ನು ರದ್ದುಗೊಳಿಸಿದ ನಂತರವೂ ದೇಶದ ವಿವಿಧ ಭಾಗಗಳಲ್ಲಿ 1000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ” ಎಂದು ಅಪೀಲುದಾರರ ಪರ ವಕೀಲರಾದ ಅಪರ್ಣಾ ಭಟ್ ಹೇಳಿದಾಗ, ನಾವು ನೋಟಿಸ್ ಜಾರಿಗೊಳಿಸುತ್ತೇವೆ ಎಂದು ಜಸ್ಟಿಸ್ ನಾರಿಮನ್ ಹೇಳಿದರು.

Tags: IT sectionPoliceSupreme Court of India
Previous Post

ಕರ್ನಾಟಕಕ್ಕೆ ನೂತನ ರಾಜ್ಯಪಾಲರಾಗಿ ತಾವರ್‌ಚಂದ್‌ ಗೆಹ್ಲೋಟ್‌ ನೇಮಕ

Next Post

ಅಪೌಷ್ಟಿಕತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

Related Posts

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..
Top Story

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧವು ದಿನದಿಂದ ದಿನಕ್ಕೆ ಮಗ್ಗಲು ಬದಲಿಸುತ್ತಿದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ...

Read moreDetails
ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

ಮದ್ಯ ತೆರಿಗೆ, ಶಿಕ್ಷಣ ಮತ್ತು ಸರ್ಕಾರದ ನೀತಿಗಳ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ- ಸಿಎಂ ಬಿಯರ್ ಗುಟ್ಟು-ರಟ್ಟು!

April 16, 2026
ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

ಇಂದು ಸಂಸತ್ತಿನಲ್ಲಿ ಐತಿಹಾಸಿಕ ತಿದ್ದುಪಡಿ ವಿಧೇಯಕ ಮಂಡನೆ

April 16, 2026
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಶಾಸಕ ವಿನಯ್ ಕುಲಕರ್ಣಿ ದೋಷಿ-ನಿರ್ದೋಷಿ ?

April 15, 2026
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
Next Post
ಅಪೌಷ್ಟಿಕತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

ಅಪೌಷ್ಟಿಕತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada