ಜೀವಂತ ವ್ಯಕ್ತಿಯ ಗಂಟಲಿನೊಳಗೆ ಅತ್ಯಂತ ಸೂಕ್ಷ್ಮ ರೂಪದ ಪ್ಲಾಸ್ಟಿಕ್ ಪತ್ತೆಯಾಗಿರುವ ಆಘಾತಕಾರಿ ಘಟನೆ ವಿಜ್ಞಾನಿಗಳನ್ನು ದಂಗುಬಡಿಸಿದೆ.
ಇತ್ತೀಚೆಗಷ್ಟೇ ನಡೆದ ಸಂಶೋಧನೆಯಲ್ಲಿ ರಕ್ತದ ಕಣಗಳಲ್ಲಿ ಸೇರಿದ ಪ್ಲಾಸ್ಟಿಕ್ ಅಂಶಗಳು ದೇಹದ ಅಂಗಾಂಗಳಿಗೆ ತಲುಪುತ್ತಿರುವುದು ಪತ್ತೆಯಾಗಿತ್ತು. ಆದರೆ ಇದೀಗ ನಡೆದ ಮತ್ತೊಂದು ಸಂಶೋಧನೆಯಲ್ಲಿ ಜೀವಂತ ಇರುವ ವ್ಯಕ್ತಿಯ ಗಂಟಲಿನಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.
5 ಮಿಮೀ.ಗಿಂತ ಕಡಿಮೆ ಪ್ರಮಾಣದಲ್ಲಿರುವ ಪ್ಲಾಸ್ಟಿಕ್ ಅನ್ನು ಅತ್ಯಂತ ಸೂಕ್ಷ್ಮ ಪ್ಲಾಸ್ಟಿಕ್ ಎಂದು ಗುರುತಿಸಲಾಗುತ್ತದೆ. ಇಷ್ಟು ಸಣ್ಣ ಪ್ರಮಾಣದ ಪ್ಲಾಸ್ಟಿಕ್ ಗಳು ಮನುಷ್ಯರ ದೇಹದಲ್ಲಿ ಪತ್ತೆಯಾಗಿದೆ.
ಈಗಾಗಲೇ ಪ್ಲಾಸ್ಟಿಕ್ ಗಳು ಪ್ರಾಣಿಗಳು ಮತ್ತು ಮೀನುಗಳಲ್ಲಿ ಪತ್ತೆಯಾಗಿದೆ. ಆದರೆ ಇದೇ ಮೊದಲ ಬಾರಿ ಮನುಷ್ಯರ ದೇಹದಲ್ಲಿ ಪತ್ತೆಯಾಗಿದೆ.
ಪ್ಲಾಸ್ಟಿಕ್ ಬಾಟಲ್ ಗಳಲ್ಲಿ ಕುಡಿಯುವ ನೀರು, ತಂಪು ಪಾನೀಯ ಮುಂತಾದವುಗಳನ್ನು ಸೇವಿಸುವುದರಿಂದ ಪ್ಲಾಸ್ಟಿಕ್ ಅಂಶಗಳು ಮನುಷ್ಯರ ದೇಹದಲ್ಲಿ ಪತ್ತೆಯಾಗುತ್ತಿವೆ ಎಂದು ಸಮೀಕ್ಷೆ ಹೇಳಿದೆ.