ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ತನ್ನದೇ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ ಮತ್ತು ಗುಜರಾತ್ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳು ಪಕ್ಷಕ್ಕೆ “ಆಶಾದಾಯಕವಾಗಿ ಕಾಣುತ್ತಿವೆ” ಎಂದು ಅರವಿಂದ್ ಕೇಜ್ರಿವಾಲ್ ಇಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎಎಪಿ ದೇಶದ ಪ್ರಮುಖ ವಿರೋಧ ಪಕ್ಷವಾಗಿ ಬದಲಾಗುತಿದ್ದು, ಕಾಂಗ್ರೆಸ್ ಅನ್ನು ವಿರೋಧ ಪಕ್ಷದಿಂದ ಕಿತ್ತೊಗೆಯುವ ಗುರಿಯನ್ನು ಹೊಂದಿದೆ ಎಂಬ ಚರ್ಚೆಯಲ್ಲಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಯೋಜಿಸಿದ್ದಾರೆಯೇ ಎಂಬ ಪ್ರಶ್ನೆ ಉತ್ತರಿಸಿದ ಅವರು, “ಎಲ್ಲವೂ ಜನತಾ (ಜನರು) ಮೇಲೆ ಇದೆ. ಜನರೇ ಸರ್ವೋಚ್ಚ” ಎಂದಿದ್ದಾರೆ.
“ಅರವಿಂದ್ ಕೇಜ್ರಿವಾಲ್ ಫಾರ್ ಪಿಎಂ” ಎಂಬುದು ಅವರ ಪಕ್ಷದ ನೆಚ್ಚಿನ ವಿಷಯವಾಗಿದ್ದು, ಇತ್ತೀಚಿನ ಪಂಜಾಬ್ ಚುನಾವಣೆಯಲ್ಲಿ ಈ ಘೋಷಣೆ ಕೇಳಿಬಂದಿತ್ತು.
2024ರ ಚುನಾವಣೆಯಲ್ಲಿ ವಾರಣಾಸಿಯಿಂದ ಸ್ಪರ್ಧಿಸಿ ಪ್ರಧಾನಿ ಮೋದಿಯನ್ನು ಎದುರಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರವಿಂದ್ ಕೇಜ್ರಿವಾಲ್, “ಹರ್ ಸಮಯ್ ಅಲಗ್, ಹರ್ ಟೈಮ್ ಅಲಗ್ (ಆ ಸಮಯ ವಿಭಿನ್ನವಾಗಿತ್ತು),” ಆದರೆ “ನನ್ನ ಜೀವನದ ಅಜೆಂಡಾ ಮೋದಿಯನ್ನು ಸೋಲಿಸುವುದಲ್ಲ, ನಾವು ಎಲ್ಲಿ ಅಧಿಕಾರಕ್ಕೆ ಬಂದರೂ ದೇಶವನ್ನು ಮುನ್ನಡೆಸುವುದು ನನ್ನ ಏಕೈಕ ಉದ್ದೇಶ” ಎಂದು ಅವರು ಉತ್ತರಿಸಿದರು.
ಮುಂದುವರೆದು, “75 ವರ್ಷಗಳಲ್ಲಿ ಈ ದೇಶವನ್ನು ಬಡ ಮತ್ತು ಅನಕ್ಷರಸ್ಥರನ್ನಾಗಿ ಮಾಡಲಾಗಿದೆ. ಜನರು ಕೋಪಗೊಂಡಿದ್ದಾರೆ. ಎಲ್ಲಾ ಪಕ್ಷಗಳು ದೇಶವನ್ನು ಲೂಟಿ ಮಾಡಿದರು. ನಮಗೆ ಈಗ ವಿಶ್ವಾಸವಿದೆ ನಾವು ಐದು ವರ್ಷಗಳಲ್ಲಿ ದೆಹಲಿಯನ್ನು ಸರಿಪಡಿಸಲು ಸಾಧ್ಯವಾದರೆ ದೇಶವನ್ನೂ ಸರಿಪಡಿಸಬಹುದು.” ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯವಸ್ಥೆಯಲ್ಲಿ ಎಎಪಿ ಶುದ್ಧ ಗಾಳಿಯಂತಿದೆ ಎಂದು ಹೇಳಿದ್ದಾರೆ.

ಎಂಟು ವರ್ಷದ ಹಿಂದೆ ಉದಯವಾದ ಎಎಪಿ ಪಕ್ಷವು ಈಗ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚೊಚ್ಚಲ ಚುನಾವಣೆ ತಯಾರಿಯಲ್ಲಿದೆ ಎಂಬ ಪ್ರಶ್ನೆಗೆ, AAP ಮುಖ್ಯಸ್ಥರು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ.
“ಇದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಎರಡಕ್ಕೂ ಆರಂಭಿಕ ದಿನಗಳು, ಈ ಎರಡೂ ರಾಜ್ಯಗಳು ಎಎಪಿಗೆ ಭರವಸೆ ನೀಡುತ್ತಿವೆ” ಎಂದು ಪಂಜಾಬ್‌ನ ಹೊಸ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಹಿಮಾಚಲ ಪ್ರದೇಶದಲ್ಲಿ ನಿನ್ನೆ ನಡೆದ ರೋಡ್‌ಶೋ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡಲು ಮೈತ್ರಿಗೆ ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ದೆಹಲಿ ಮುಖ್ಯಮಂತ್ರಿ, ‘ಬಿಜೆಪಿಯನ್ನು ಸೋಲಿಸುವುದು ನಮ್ಮ ಉದ್ದೇಶವಲ್ಲ, ಉತ್ತಮ ಆಡಳಿತ ನೀಡುವುದು ಮತ್ತು ವ್ಯವಸ್ಥೆಯನ್ನು ಬದಲಾಯಿಸುವುದು’ ನಮ್ಮ ಉದ್ದೇಶ ಎಂದು ಹೇಳಿದರು.
ಮುಂದುವರೆದು, “ಬಿಜೆಪಿಯನ್ನು ನಾವು ಹೇಗೆ ಸೋಲಿಸಬಹುದು ಎಂಬುದು ನನ್ನ ಗುರಿಯಲ್ಲ. ಅನೇಕ ಪಕ್ಷಗಳು ಹಾಗೆಯೇ ಯೋಚಿಸುತ್ತವೆ ಎಂದು ನನಗೆ ಖಾತ್ರಿಯಿದೆ. ಈ ದೇಶವು ವಿಶ್ವದ ನಂಬರ್ 1 ಎಂದು ನೋಡುವುದು ನನ್ನ ಗುರಿ. ಜನರು ನಮ್ಮ ಸಕಾರಾತ್ಮಕ ಕಾರ್ಯಸೂಚಿಯನ್ನು ಇಷ್ಟಪಟ್ಟಿದ್ದಾರೆ” ಎಂದು ಹೇಳಿದರು.
ಬದಲಾವಣೆಗಾಗಿ ನಮ್ಮ ಸಕಾರಾತ್ಮಕ ಕಾರ್ಯಸೂಚಿಯ ಬಗ್ಗೆ ನಾವು ಜನರಿಗೆ ಮನವರಿಕೆ ಮಾಡುತ್ತೇವೆ ಅವರೇ ನಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಹೇಳಿದ್ದಾರೆ.






