• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಿಜೆ, ಪಟಾಕಿಗೆ ಬ್ರೇಕ್; ಸರ್ಕಾರಿ ಶಾಲೆಗಳ ಸ್ವಚ್ಛತೆಗೆ ಮುಂದಾದ ಗಣೇಶೋತ್ಸವ ಯುವಕರು

ಪ್ರತಿಧ್ವನಿ by ಪ್ರತಿಧ್ವನಿ
September 22, 2026
in Top Story
0
ಡಿಜೆ, ಪಟಾಕಿಗೆ ಬ್ರೇಕ್; ಸರ್ಕಾರಿ ಶಾಲೆಗಳ ಸ್ವಚ್ಛತೆಗೆ ಮುಂದಾದ ಗಣೇಶೋತ್ಸವ ಯುವಕರು
Share on WhatsAppShare on FacebookShare on Telegram

ಕೊಪ್ಪಳ: ಗಣೇಶೋತ್ಸವ ಎಂದಾಕ್ಷಣ ಡಿಜೆ ಸದ್ದು, ಪಟಾಕಿ, ಅದ್ಧೂರಿ ಮೆರವಣಿಗೆ ಕಣ್ಮುಂದೆ ಬರುತ್ತದೆ. ಸಣ್ಣ ಪ್ರಮಾಣದ ಮೆರವಣಿಗೆ ಆಯೋಜಿಸಿದರೂ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಅದರಲ್ಲೂ ಗಣೇಶ ಮೂರ್ತಿಗಿಂತ ಡಿಜೆ ಹಾಗೂ ಮೆರವಣಿಗೆಗೆ ಹೆಚ್ಚಿನ ಹಣ ವ್ಯಯವಾಗುವುದು ಸಾಮಾನ್ಯವಾಗಿದೆ.

ADVERTISEMENT

ಇಷ್ಟೆಲ್ಲ ಖರ್ಚು ಮಾಡಿದರೂ ಕೆಲವೊಮ್ಮೆ ಮೆರವಣಿಗೆಯಲ್ಲಿ ಗಲಾಟೆ, ಅಹಿತಕರ ಘಟನೆಗಳು ನಡೆಯುವ ಪ್ರಕರಣಗಳೂ ಕಂಡುಬರುತ್ತವೆ. ಆದರೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಯುವಕರು ಇದಕ್ಕೆ ವಿಭಿನ್ನವಾದ ಮಾದರಿ ನೀಡಿದ್ದಾರೆ.

ಕಿನ್ನಾಳ ಗ್ರಾಮದ ಕಾಮನಕಟ್ಟಿ ಗೆಳೆಯರ ಬಳಗದ ಹಿಂದೂ ಗಜಾನನ ಮಂಡಳಿಯ ಯುವಕರು ಕಳೆದ ಮೂರು ವರ್ಷಗಳಿಂದ ಗಣೇಶೋತ್ಸವವನ್ನು ಸಾಮಾಜಿಕ ಕಾಳಜಿಯೊಂದಿಗೆ ಆಚರಿಸುತ್ತಿದ್ದಾರೆ. ಡಿಜೆ ಹಾಗೂ ಆಡಂಬರಕ್ಕೆ ಹಣ ಖರ್ಚು ಮಾಡುವ ಬದಲು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿದ್ದಾರೆ.

ಕಳೆದ ವರ್ಷ ಗ್ರಾಮದ ರಸ್ತೆ ನಿರ್ಮಾಣಕ್ಕೆ ಕೈಜೋಡಿಸಿದ್ದ ಯುವಕರು, ಈ ಬಾರಿ ಎರಡು ಸರ್ಕಾರಿ ಶಾಲೆಗಳ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಅಲ್ಲದೆ, ಶಾಲೆಗಳ ಕಾಂಪೌಂಡ್‌ಗೆ ಬಣ್ಣ ಬಳಿದು ಹೊಸ ರೂಪ ನೀಡಿದ್ದಾರೆ.

 

ಗಣೇಶೋತ್ಸವದ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳಿಗೆ ಹಣ ಹಾಗೂ ಶ್ರಮ ವಿನಿಯೋಗಿಸುವ ಮೂಲಕ ಕಿನ್ನಾಳ ಗ್ರಾಮದ ಯುವಕರು ಹಬ್ಬದ ಆಚರಣೆಗೆ ಹೊಸ ಅರ್ಥ ನೀಡಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

 

 

Tags: Civic ResponsibilityCommunity ServiceEco Friendly GaneshotsavaGanesh Chaturthiganesh festivalGaneshotsavagovernment schoolHindu Gajanana Mandalikarnataka newsKinnalKinnal YouthKoppalkoppal newsSchool CleaningSchool DevelopmentSocial ServiceYouth Initiative
Previous Post

ವಿಕಾಸದ ಹಾದಿಯಲ್ಲಿ ಕತ್ತಲೆಯ ದ್ವೀಪಗಳು

Next Post

ಕರ್ನಾಟಕದಲ್ಲಿ ಎಐ ಕ್ರಾಂತಿಗೆ ಹೊಸ ಹೆಜ್ಜೆ; ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ

Related Posts

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!
Top Story

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!

by ಪ್ರತಿಧ್ವನಿ
September 22, 2026
0

ಉತ್ತರ ಪ್ರದೇಶದ ಇಟಾವಾ ಮೂಲದ ಮೌಲಾನಾ ಜರ್ಜೀಸ್ ಅನ್ಸಾರಿ ಅವರು ಶ್ರೀಕೃಷ್ಣ ಪರಮಾತ್ಮ ಮುಸ್ಲಿಂ ಆಗಿದ್ದರು ಹಾಗೂ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದು ಹೇಳಿರುವ...

Read moreDetails
ವಿಧಾನ ಪರಿಷತ್‌ನಲ್ಲಿ ಗುಡುಗಿದ ಕಾರ್ಮಿಕ ಸಚಿವ;ಸಂತೋಷ್ ಲಾಡ್ ಅಬ್ಬರಕ್ಕೆ ಬಿಜೆಪಿ ನಾಯಕರು ಗಪ್ ಚುಪ್

ವಿಧಾನ ಪರಿಷತ್‌ನಲ್ಲಿ ಗುಡುಗಿದ ಕಾರ್ಮಿಕ ಸಚಿವ;ಸಂತೋಷ್ ಲಾಡ್ ಅಬ್ಬರಕ್ಕೆ ಬಿಜೆಪಿ ನಾಯಕರು ಗಪ್ ಚುಪ್

September 22, 2026
ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

ತಾಯಿ ಸೆಂಟಿಮೆಂಟ್ ನಿಂದ ರಾಜಕೀಯ? ಬಿಜೆಪಿಗೆ ರಾಹುಲ್ ಗಾಂಧಿ ಮೇಲೆ ಇಷ್ಟು ದೊಡ್ಡ ಭಯವೇ?

September 22, 2026
ಬರಪೀಡಿತ ಜಿಲ್ಲೆ ಘೋಷಿಸಲು ಕೇಂದ್ರದ ಮಾನದಂಡಗಳೇ ಆಧಾರ : ದಿನೇಶ್ ಗೂಳಿಗೌಡ ಸ್ಪಷ್ಟನೆ

ಬರಪೀಡಿತ ಜಿಲ್ಲೆ ಘೋಷಿಸಲು ಕೇಂದ್ರದ ಮಾನದಂಡಗಳೇ ಆಧಾರ : ದಿನೇಶ್ ಗೂಳಿಗೌಡ ಸ್ಪಷ್ಟನೆ

September 22, 2026
KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

ಕಾಡು ಕಾಯದಿದ್ದರೆ ಅರಣ್ಯ ಉಳಿಯುತ್ತಿರಲಿಲ್ಲ : ಅರಣ್ಯ ಇಲಾಖೆ ಸಿಬ್ಬಂದಿಗಳ ಪರ ಸಿಎಂ ಡಿಕೆಶಿ ಬ್ಯಾಟಿಂಗ್

September 22, 2026
Next Post
ಕರ್ನಾಟಕದಲ್ಲಿ ಎಐ ಕ್ರಾಂತಿಗೆ ಹೊಸ ಹೆಜ್ಜೆ; ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ

ಕರ್ನಾಟಕದಲ್ಲಿ ಎಐ ಕ್ರಾಂತಿಗೆ ಹೊಸ ಹೆಜ್ಜೆ; ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada