• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಧಾನ ಪರಿಷತ್‌ನಲ್ಲಿ ಗುಡುಗಿದ ಕಾರ್ಮಿಕ ಸಚಿವ;ಸಂತೋಷ್ ಲಾಡ್ ಅಬ್ಬರಕ್ಕೆ ಬಿಜೆಪಿ ನಾಯಕರು ಗಪ್ ಚುಪ್

ಪ್ರತಿಧ್ವನಿ by ಪ್ರತಿಧ್ವನಿ
September 22, 2026
in Top Story
0
ವಿಧಾನ ಪರಿಷತ್‌ನಲ್ಲಿ ಗುಡುಗಿದ ಕಾರ್ಮಿಕ ಸಚಿವ;ಸಂತೋಷ್ ಲಾಡ್ ಅಬ್ಬರಕ್ಕೆ ಬಿಜೆಪಿ ನಾಯಕರು ಗಪ್ ಚುಪ್
Share on WhatsAppShare on FacebookShare on Telegram

ಬೆಂಗಳೂರು: ಬರ ಪರಿಹಾರಕ್ಕೆ ಕೇಂದ್ರ ಹಣ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಗೋಗರೆಯುತ್ತಿದೆ ಎಂದು ಹೇಳಿದ ಸದಸ್ಯ ಎನ್‌.ರವಿ ಕುಮಾರ್‌ ಮಾತಿಗೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್‌ ಎಸ್‌. ಲಾಡ್‌ ನೀಡಿದ ಪ್ರತ್ಯುತ್ತರಕ್ಕೆ ರವಿಕುಮಾರ್ ಆದಿಯಾಗಿ ಬಿಜೆಪಿ ನಾಯಕರು ತಬ್ಬಿಬ್ಬಾದ ಪ್ರಸಂಗ ವಿಧಾನ ಪರಿಷತ್ ನಲ್ಲಿ ನಡೆಯಿತು.

ADVERTISEMENT

ವಿಧಾನ ಪರಿಷತ್‌ನಲ್ಲಿ ಚರ್ಚೆ ವೇಳೆ ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಒಂದು ಪೈಸೆಯನ್ನೂ ನೀಡಿಲ್ಲ. ಕೇಂದ್ರ ಹಣ ನೀಡಲಿ ಎಂದು ರಾಜ್ಯ ಸರ್ಕಾರ ಗೋಗೆರೆಯುತ್ತಿದೆ ಎಂದು ರವಿ ಕುಮಾರ್‌ ಅವರು ಹೇಳಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಲಾಡ್‌ ಅವರು, ಗೋಗರೆಯುತ್ತದೆ ಎಂಬ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲಾಡ್‌ ಅವರು, ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಕೋಟ್ಯಂತರ ಹಣ ಹೋಗುತ್ತೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಕೇಳುತ್ತಿದೆ. ರಾಜ್ಯಕ್ಕೆ ಕೇಂದ್ರದಿಂದ ಹಣ ಕೇಳಲು ಅಧಿಕಾರ ಇದೆ. ನಾಲ್ಕೂವರೆ ಲಕ್ಷ ಕೋಟಿ ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಹೋಗುತ್ತಿದೆ ಎಂದು ವಿವರಿಸಿದರು.

BJP Leader : ಕಸ್ತೂರಿ ರಂಗನ್ ವರದಿ : ಅರಣ್ಯ ಉಳಿಬೇಕು..! | #pratidhvani

ನಮ್ಮ ದುಡ್ಡನ್ನು ನಾವು ಕೇಳುತ್ತಿದ್ದೇವೆ. ಇದರಲ್ಲಿ ಗೋಗರೆಯುವ ಮಾತಿಲ್ಲ. ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಿಗೆ ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಹಣ ನೀಡುತ್ತಿದೆ ಎಂಬುದೂ ಇಲ್ಲಿ ಚರ್ಚೆಯಾಗಲಿ ಎಂದು ಲಾಡ್‌ ಅವರು ಪಟ್ಟು ಹಿಡಿದರು.

ಲಾಡ್‌ ಅವರ ಪ್ರತಿಕ್ರಿಯೆಯಿಂದ ವಿಚಲಿತರಾದ ರವಿಕುಮಾರ್‌ ಅವರು ಮಾತು ಮುಂದುವರಿಸಿದರು. ಆದರೆ ಅದಕ್ಕೆ ಅವಕಾಶ ನೀಡದ ಲಾಡ್‌ ಅವರು, ಕೇಂದ್ರ ಸರ್ಕಾರ ಗುಜರಾತ್‌, ಮಧ್ಯಪ್ರದೇಶಕ್ಕೆ ಎಷ್ಟು ಹಣ ನೀಡಿದೆ ಎಂದು ಹೇಳಲೇ ಎಂದು ಪ್ರಶ್ನೆ ಹಾಕಿದರು.

Shivalinge Gowda : ಶಿವಲಿಂಗೇಗೌಡರಂತೆ ಎಲ್ಲರೂ ಕೆಲಸ ಮಾಡಿ ಅಂತ ಹೇಳ್ಬೇಕಿತ್ತು.. #pratidhvani #dkshivakumar

ನಾವು ನಾಲ್ಕೂವರೆ ಲಕ್ಷ ಕೋಟಿ ಹಣ ಕೇಂದ್ರಕ್ಕೆ ನೀಡುತ್ತೇವೆ ಅದರಲ್ಲಿ ಪಾಲು ಕೇಳುತ್ತೇವೆ. ಅದನ್ನು ವಾಪಸ್‌ ಕೊಡಲ್ಲ ಎಂದರೆ ಹೇಗೆ ಎಂದು ಲಾಡ್‌ ಅವರು ಗುಡುಗಿದರು.

ಸಚಿವ ಲಾಡ್‌ ಅವರ ಪ್ರತಿಕ್ರಿಯೆಗೆ ಬೆಂಬಲ ಸೂಚಿಸಿದ ಸಾರಿಗೆ ಸಚಿವ ಬೈರತಿ ಸುರೇಶ್‌ ಅವರು, ನಮ್ಮ ಪಾಲು ಕೇಳುತ್ತಿದ್ದೇವೆ. ಇದು ಫೆಡರಲ್‌ ವ್ಯವಸ್ಥೆ. ಇಲ್ಲಿ ರಾಜ್ಯಗಳು ಪಾಲು ಕೇಳುವ ಅಧಿಕಾರ ಇದೆ. ಗೋಗರೆಯುವ ಪದ ಸರಿಯಲ್ಲ ಎಂದರು. ಗೋಗರೆಯುವ ಪದ ಬಳಕೆ ಸರಿಯಲ್ಲ ಎಂಬ ಲಾಡ್‌ ಅವರ ವಾದಕ್ಕೆ ಹಲವು ಸದಸ್ಯರು ಬೆಂಬಲ ಸೂಚಿಸಿದರು.

ಬರ ಪರಿಹಾರಕ್ಕೆ ರಾಜ್ಯ ಈಗಲೇ ಕೇಳಬೇಕು. ಮೊದಲೇ ಕೇಳಲು ಬರುವುದಿಲ್ಲ. ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಬಹುದು ಎಂದು ಲಾಡ್‌ ಅವರು ಹೇಳಿದರು.

Krishna Byre Gowda : ಟೀಕೆಗಳಿಗೆ ನಾವು ಕಿವಿಗೊಡದೆ ನಮ್ಮ ಕೆಲಸ ಮಾಡ್ತಿದ್ದೀವಿ.. #pratidhvani

*ಯಾವಾಗಲೂ ಕಾಂಗ್ರೆಸ್‌ ವಿರುದ್ಧ ಮಾತು*
ಬಿಜೆಪಿಯವರು ಯಾವಾಗಲೂ ಕಾಂಗ್ರೆಸ್‌ ವಿರುದ್ಧವೇ ಮಾತನಾಡುತ್ತಾರೆ. ಈ ಸದನದಲ್ಲಿ ಯಾವಾಗಲೂ ಹೀಗೆ ಮಾತನಾಡುತ್ತೀರಿ. ನಾವು ಕೇಂದ್ರದ ಬಗ್ಗೆ ಮಾತನಾಡಿದರೆ ನಮ್ಮ ಮೇಲೆ ಮುಗಿಬೀಳುತ್ತೀರಿ. ನೀವು ಬೈಯಿರಿ. ಕಾಂಗ್ರೆಸ್‌ ವಿರುದ್ಧ ಮಾತನಾಡಿ. ಆದರೆ ಒಂದು ತಿಳಿಯಿರಿ ಕೇಂದ್ರ ಸರ್ಕಾರ ನಡೆಯುವುದು ರಾಜ್ಯಗಳ ಹಣದಿಂದ. ಎಲ್ಲ ರಾಜ್ಯದಿಂದ ಕೇಂದ್ರಕ್ಕೆ ಹಣ ಹೋಗುತ್ತೆ ಎಂದು ಲಾಡ್‌ ಅವರು ಸಮಾಜಾಯಿಷಿ ನೀಡಿದರು.

Tags: BJPBJP leaderscongressKarnataka Governmentkarnataka legislative councilKarnataka PoliticsLabour DepartmentLabour MInisterlegislative councilpolitical debateSantosh Lad
Previous Post

ಪಲ್ಲವಿ ಲಕ್ಷ್ಮಿಕಾಂತ್‌ ಸಾವಿಗೆ ಏನು‌ ಕಾರಣ? ಕೊನೆಯ ಕ್ಷಣಗಳ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

Next Post

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!

Related Posts

Protest by ASHA workers: What did D.K. Shivakumar say?
Top Story

ಆಶಾ ಕಾರ್ಯಕರ್ತೆಯರ ಪ್ರತಿಭಟನೆ : ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

by Shivakumar
November 19, 2026
0

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ (ASHA Workers Protest) ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಪ್ರತಿಕ್ರಿಯೆ...

Read moreDetails
Allegation of disrespect towards Basavanna: B.Y. Vijayendra demands seizure of Ravi Hanj's work

ಬಸವಣ್ಣನವರ ಗೌರವಕ್ಕೆ ಧಕ್ಕೆ ಆರೋಪ: ರವಿ ಹಂಜ್ ಕೃತಿ ಮುಟ್ಟುಗೋಲಿಗೆ ಬಿ.ವೈ. ವಿಜಯೇಂದ್ರ ಆಗ್ರಹ

November 19, 2026
BREAKING: CM’s meeting with ASHA workers fails?

BREAKING : ಆಶಾ ಕಾರ್ಯಕರ್ತೆಯರೊಂದಿಗಿನ ಸಿಎಂ ಸಭೆ ವಿಫಲ? ಡಿಕೆಶಿ ಪ್ರತಿಕ್ರಿಯೆಗೆ ಕಾರ್ಯಕರ್ತೆಯರ ತೀವ್ರ ಅಸಮಾಧಾನ

November 19, 2026
TVK MLA V.S. Babu passes away

ಟಿವಿಕೆ ಶಾಸಕ ವಿ.ಎಸ್. ಬಾಬು ನಿಧನ :  ಸ್ಟಾಲಿನ್ ಸೋಲಿಸಿ ಸಂಚಲನ ಮೂಡಿಸಿದ್ದ ನಾಯಕನ ಅಗಲಿಕೆಗೆ ಸಿಎಂ ವಿಜಯ್ ಸಂತಾಪ

November 19, 2026
All citizen service centers in the state renamed as 'Praja Seva Kendra': Government issues significant order

ರಾಜ್ಯದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳು ಇನ್ನು ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ : ಸರ್ಕಾರ ಮಹತ್ವದ ಆದೇಶ

November 19, 2026
Next Post
ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದ ಮೌಲಾನಾ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada