ಪ್ರವಾದಿ ಮೊಹಮ್ಮದ್ ಅವರ ವ್ಯಕ್ತಿತ್ವದ ಮೇಲಿನ “ನಿರಂತರ ದಾಳಿ”, ಮುಸ್ಲಿಮರ ನಂಬಿಕೆಗಳಿಗೆ ಧಕ್ಕೆ ಮತ್ತು ವಿವಿಧ ವ್ಯಕ್ತಿಗಳ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದ ದ್ವೇಷದ ಅಪರಾಧಗಳ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಮತ್ತು ಕಾನೂನು ಕ್ರಮವನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮೇ 9 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಜಮಿಯತ್ ಉಲಮಾ-ಇ-ಹಿಂದ್ ತನ್ನ ಅಧ್ಯಕ್ಷ ಮೌಲಾನಾ ಸೈಯದ್ ಮಹಮೂದ್ ಅಸಾದ್ ಮದನಿ ಅವರು ಸುಪ್ರೀಂ ಕೋರಟ್ಗೆ ಮನವಿ ಸಲ್ಲಿಸಿದ್ಧಾರೆ. ದ್ವೇಷದ ಭಾಷಣಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯ ಕಾರ್ಯವಿಧಾನಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಗಾಗಿ ಕೇಂದ್ರಕ್ಕೆ ನಿರ್ದೇಶನವನ್ನು ಪ್ರವಾದಿ ಕೋರಿದ್ದಾರೆ..
ಪ್ರವಾದಿಯನ್ನು ಅವಮಾನಿಸುವುದು, ಇಸ್ಲಾಮಿನ ನಂಬಿಕೆಗಳ ಮೇಲೆ ದಾಳಿ ನಡೆಯುತ್ತಿದೆ. ದೇಶದಲ್ಲಿ ದ್ವೇಷ ಭಾಷಣ ಮಾಡುವ ಅಥವಾ ದ್ವೇಷ ಹರಡುವ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಸಂಗ್ರಹಿಸಿ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚಿಸಬೇಕು ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿದೆ.
ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ಇದೇ ರೀತಿಯ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಯನ್ನು ಮೇ 9ಕ್ಕೆ ಮುಂದೂಡಿದೆ.