ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಜನವರಿ ೩೦ ರಂದು ಯೋಗ ಉತ್ಸವ ಆಚರಿಸಲಾಗಿದೆ. ಈ ವೇಳೆ ಸಾವಿರಕ್ಕೂ ಹೆಚ್ಚು ಮಂದಿ ಅತ್ಯಂತ ಚೈತನ್ಯದಿಂದ ಉತ್ಸವದಲ್ಲಿ ಭಾಗವಹಿಸಿದ್ದರು.
ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಅವರ ಎಕನಾಮಿಕ್ ಸಿಟಿಯಾಗಿರುವ ಜುಮಾನ್ ಪಾರ್ಕ್ನಲ್ಲಿ ಅದ್ಧೂರಿಯಾದ ಉತ್ಸವ ನಡೆಯಿತು. 10 ರಿಂದ 60 ವರ್ಷದೊಳಗಿನ ಜನರು ವಿವಿಧ ಚಟುವಟಿಕೆಗಳ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹುಲ್ಲುಹಾಸಿನ ಮೇಲೆ ಯೋಗ ಮಾಡುವುದರೊಂದಿಗೆ ಈ ಯೋಗ ಉತ್ಸವಕ್ಕೆ ಚಾಲನೆ ನೀಡಲಾಯಿತು. ಫೆಬ್ರವರಿ 1ರ ವರೆಗೆ ಯೋಗ ಉತ್ಸವ ನಡೆಯಲಿದೆ.
ಸೌದಿ ಮತ್ತು ಅಂತಾರಾಷ್ಟ್ರೀಯ ಯೋಗ ಪಟುಗಳು ಮತ್ತು ಉಪನ್ಯಾಸಕರು ಈ ಯೋಗ ಉತ್ಸವದಲ್ಲಿ ಎಂಟು ಗಂಟೆಗಳಿಗೂ ಹೆಚ್ಚು ಯೋಗ ತರಗತಿಗಳನ್ನು ನೀಡಿದ್ದರು. ಅನೇಕ ಜನರು ಚಾಪೆಗಳು, ದಿಂಬುಗಳು ಮತ್ತು ರಗ್ಗುಗಳೊಂದಿಗೆ ನೆರಳಿನಲ್ಲಿ ಕುಳಿತು ಯೋಗ ಮಾಡಿದರು.
ಕಾರ್ಯಕ್ರಮವನ್ನು ಸೌದಿ ಯೋಗ ಸಮಿತಿ ಆಯೋಜಿಸಿದ್ದು, ಬಹುತೇಕ ಸೌದಿಯ ಯೋಗ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಭಾರತ ಹಾಗೂ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಜಂಟಿಯಾಗಿ ಯೋಗ ಕಾರ್ಯಕ್ರಮ ಆಯೋಜಿಸಿದೆ.