ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕ ಸಭೆ ಹಾಗೂ ಸಮಾವೇಶಗಳ ಮೇಲಿನ ನಿರ್ಬಂಧವನ್ನು ಫೆಬ್ರವರಿ 11ರವರೆಗೆ ಮುಂದಿವರೆಸಿದೆ.
ಸಾರ್ವಜನಿಕ ಸಭೆ ಹಾಗೂ ಸಮಾವೇಶಗಳಿಗೆ ಇದ್ದ 500 ಜನರ ಮಿತಿಯನ್ನು ಆಯೋಗವು 1000ಜನರಿಗೆ ಏರಿಕೆ ಮಾಡಿದೆ. ಮನೆ ಮನೆ ಪ್ರಚಾರಕ್ಕೆ ಮೊದಲಿಗೆ 10 ಜನರನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿತ್ತು ಆದರೆ, ಈಗ 20 ಜನರಿಗೆ ಏರಿಕೆ ಮಾಡಲಾಗಿದೆ.
ಈ ಕುರಿತು ಪಂಚರಾಜ್ಯಗಳ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಆಯೋಗವು ಆಯಾ ರಾಜ್ಯಗಳ ಕೋವಿಡ್ ಸ್ಥಿತಿಗತಿ ಕುರಿತು ಸುಧೀರ್ಘ ಚರ್ಚೆ ನಡೆಸಿದ ನಂತರ ತನ್ನ ನಿರ್ಧಾರ ಪ್ರಕಟಿಸಿದೆ.






