ಬೆಳಗಾವಿ : ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲು ಕಾಂಗ್ರೆಸ್ ಹಣ ಪಡೆದುಕೊಂಡಿದೆ ಎಂಬ ಶೋಭಾ ಕರಂದ್ಲಾಜೆ ಆರೋಪದ ವಿಚಾರವಾಗಿ ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಇದು ನಮ್ಮ ಪಕ್ಷದ ಆಂತರಿಕ ವಿಚಾರ, ಅವರು ಚೆಕ್ ಮೂಲಕ ಕೊಟ್ಟಿದ್ದಾರೆ. ಚುನಾವಣಾ ಆಯೋಗದಲ್ಲಿ ಇದಕ್ಕೆ ಅವಕಾಶವಿದೆ . ಇದರಲ್ಲಿ ಯಾವುದೇ ತಪ್ಪಿಲ್ಲ. ಪೇಪರ್ ಜಾಹೀರಾತಿಗಾಗಿ ಹಣ ತೆಗೆದುಕೊಳ್ತಿದ್ದೇವೆ ಎಂದು ಹೇಳಿದರು.

ಟಿಕೆಟ್ ವಂಚಿತರ ಬಂಡಾಯ ಶಮನ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಕಿತ್ತೂರುನಲ್ಲಿ ಶಿಲ್ಲೇದಾರ್ ಆಗಿದೆ. ಬೇರೆ ಬೇರೆ ಎಲ್ಲ ಕಡೆ ಸಂಧಾನ ನಡೀತಾಯಿದೆ.ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆ ಪ್ರಚಾರ ಒಂದು ಬಾರಿ ಆಗಿದೆ.ಡಿಕೆಶಿ, ರಾಹುಲ್ ಗಾಂಧಿ ಈಗಾಗಲೇ ಬಂದು ಹೋಗಿದ್ದಾರೆ ಸಿದ್ಧರಾಮಯ್ಯ ಕೊನೆಯ ಬಾರಿಗೆ ಬರ್ತಾ ಇದ್ದಾರೆ ಎಂದು ಹೇಳಿದರು .
ಚುನಾವಣೆ ಗೆಲ್ಲಲು ಬಿಜೆಪಿ ಹೊಸ ತಂತ್ರಗಾರಿಕೆ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಏನಾಗಲ್ಲ ಅವೆಲ್ಲ ಹಳೆಯ ವಿಚಾರ, ಹೊಸದೇನಿಲ್ಲ. ಅದೇನು ವರ್ಕೌಟ್ ಆಗಲ್ಲ. ಎಷ್ಟು ಸಲ ಅಂತಾ ಅವರು ಸುಳ್ಳು ಹೇಳ್ತಾರೆ…? ಎಂದು ಪ್ರಶ್ನಿಸಿದ್ರು.