ಮೈಸೂರು (Mysuru) ಜಿಲ್ಲೆಯ ಕೆ.ಆರ್.ನಗರ (KR Nagar)ತಾಲೂಕಿನ ಮಳಲಿ ಅರಣ್ಯ ಶಾಖೆಯಲ್ಲಿ ಚಿರತೆ ಸೆರೆಯಾಗಿದೆ. ಹುರುಳಿಕಾಮೇನಹಳ್ಳಿ ಗ್ರಾಮದ ಬಳಿ ಚಿರತೆಗಾಗಿ ಬೋನ್ ಇರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಬೋನಿಗೆ ಬಿದ್ದ ಚಿರತೆ (Leopard) ಲಾಕ್ ಆಗಿದೆ.

ಈ ಗ್ರಾಮದ ಭಾಗದಲ್ಲಿ ಕಳೆದ ಹಲವು ದಿನಗಳಿಂದ ಕಾಣಿಸಿಕೊಂಡು ಚಿರತೆ ಆತಂಕ ಸೃಷ್ಠಿಸಿತ್ತು.ಈ ಕುರಿತು ಗ್ರಾಮಸ್ಥರು ಕೂಡ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಮನವಿ ಮಾಡಿದ್ದರು.
ಹೀಗಾಗಿ ಕಳೆದ ನಾಲ್ಕು ದಿನಗಳ ಹಿಂದೆ ಅರಣ್ಯ ಸಿಬ್ಬಂದಿ ಬೋನ್ ಇರಿಸಿದ್ದರು. ಇಂದು ಬೆಳಿಗ್ಗೆ ಬೋನ್ ನಲ್ಲಿ ಚಿರತೆ ಸೆರೆಯಾಗಿರುವುದನ್ನು ಕಂಡು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.