ಪಿತ್ರಾರ್ಜಿತ ಆಸ್ತಿಗಳನ್ನು ಮಕ್ಕಳಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಅಮೆರಿಕದಲ್ಲಿ (America) ಜಾರಿಯಲ್ಲಿರುವ ಕಾನೂನನ್ನ ಭಾರತದಲ್ಲಿ (India ತರುವ ನಿಟ್ಟಿನಲ್ಲಿ ಚರ್ಚೆಯಾಗಬೇಕು. ಪಿತ್ರಾರ್ಜಿತ ಆಸ್ತಿಗೂ ತೆರಿಗೆ ವಿಧಿಸಬೇಕು ಎಂಬ ಅರ್ಥದಲ್ಲಿ ಸ್ಯಾಮ್ ಪಿತ್ರೋಡ (Sam pitroda) ನೀಡಿದ್ದ ಹೇಳಿಕೆಯಿಂದ ಕಾಂಗ್ರೆಸ್ (congress) ಅಂತರ ಕಾಯ್ದುಕೊಂಡಿದೆ.
ಎಎನ್ಐ (ANI) ಗೆ ನೀಡಿದ ಸಂದರ್ಶನದಲ್ಲಿ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡುವ ಸಂದರ್ಭದಲ್ಲಿ 55 ಪರ್ಸೆಂಟ್ ಸರ್ಕಾರಕ್ಕೆ ತೆರಿಗೆಯಾಗಿ ,ಉಳಿದ 45 ಪರ್ಸೆಂಟ್ ಮಕ್ಕಳಿಗೆ ಆಸ್ತಿಯ ರೂಪದಲ್ಲಿ ಹಂಚಿಕೆಯಾಗುವ ಕಾನೂನು ಅಮೆರಿಕದಲ್ಲಿದೆ . ನಮ್ಮ ದೇಶದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂಬ ಸ್ಯಾಮ್ ಪಿತ್ರೋಡ ಹೇಳಿಕೆ ಕಾಂಗ್ರೆಸ್(congress) ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈಗಾಗಲೇ ವೆಲ್ತ್ ರೀಡಿಸ್ಟ್ರಿಬ್ಯೂಷನ್ (Wealth distribution) ಎಂಬ ವಿಚಾರದ ಬಗ್ಗೆ ರಾಹುಲ್ ಗಾಂಧಿ (Rahul gandhi) ನೀಡಿದ್ದ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra modi) ಅಸ್ತ್ರವಾಗಿ ಬಳಸಿಕೊಂಡಿದ್ದರು . ನಿಮ್ಮ ಬಳಿ ಇರುವ ಮಂಗಳಸೂತ್ರವನ್ನು ಕಸಿದುಕೊಂಡು ಕಾಂಗ್ರೆಸ್ನವರು ಮತ್ತೊಬ್ಬರಿಗೆ ಹಂಚುತ್ತಾರೆ ಎಂದು ವಾಗ್ದಾಳಿ ನಡೆಸಿದರು . ಇದೀಗ ಸ್ಯಾಮ್ ಪಿತ್ರೋಡಾ ಹೇಳಿಕೆ ಬಿಜೆಪಿಗೆ(BJP) ಮತ್ತೊಂದು ಅಸ್ತ್ರವಾಗಿ ಪರಿಣಮಿಸಿದೆ.
ಸದ್ಯ ಈ ಹೇಳಿಕೆಯಿಂದ ಆಗಬಹುದಾದ ಡ್ಯಾಮೇಜ್ (Damage) ಅರಿತಿರುವ ಕಾಂಗ್ರೆಸ್ ಪಕ್ಷ ,ಸ್ಯಾಮ್ ಪಿತ್ರೂಡ ಅವರ ಹೇಳಿಕೆ ಅವರ ವೈಯಕ್ತಿಕ ನೆಲೆಗಟ್ಟಿನ ಹೇಳಿಕೆ. ಅವರ ಈ ಅಭಿಪ್ರಾಯಕ್ಕೂ , ಕಾಂಗ್ರೆಸ್ ಪಕ್ಷದ ನಿಲುವುಗಳಿಗೂ ಸಂಬಂಧವಿಲ್ಲ ಎಂಬ ಸ್ಪಷ್ಟನೆಯನ್ನು ಕೊಟ್ಟಿದೆ. ಒಟ್ನಲ್ಲಿ ಚುನಾವಣೆ ಸಂದರ್ಭದಲ್ಲಿ ಈ ಹೇಳಿಕೆ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿದ್ರು ಅಚ್ಚರಿ ಇಲ್ಲ.