ಉಕ್ರೇನ್ ಮೇಲೆ ತನ್ನ ದಾಳಿಯನ್ನ ತೀವ್ರಗೊಳಿಸಿರುವ ರಷ್ಯಾ ಇಲ್ಲಿಯವರೆಗೂ 14 ಮಕ್ಕಳು ಸೇರಿದಂತೆ 352 ನಾಗರೀಕರನ್ನು ಕೊಂದಿದೆ ಎಂದು ಹೇಳಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಷರತ್ತುಗಳನ್ನು ಹೊರಹಾಕಿದ ನಂತರ ಉಕ್ರೇನ್ ಜೊತೆ ಸಂಧಾನ ಮಾತುಕತೆ ಜೋರಾಗಿ ನಡೆಯುತ್ತಿದೆ.
ಇಲ್ಲಿದೆ ಪ್ರಮುಖ 10 ಅಂಶಗಳು
1) ರಷ್ಯಾ ಸೇನೆಯೂ ಉಕ್ರೇನ್ನ ಎರಡನೇ ಅತಿ ದೊಡ್ಡ ನಗರವಾದ ಖಾರ್ಕಿವ್ನ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿದೆ.
2) ಕಳೆದ ಗುರುವಾರ ಉಕ್ರೇನ್ ಮೇಲೆ ದಾಳಿ ಮಾಡಿದ ರಷ್ಯಾ ಇಲ್ಲಿಒಯವರೆಗೂ 14 ಮಕ್ಕಳು ಸೇರಿದಂತೆ ಒಟ್ಟು 352 ನಗಾರೀಕರನ್ನು ಕೊಂದಿದೆ ಎಂದು ಉಕ್ರೇನ್ ಹೇಳಿದೆ.
3) ರಷ್ಯಾ ಆಕ್ರಮಣದ ನಂತೆ ಇಲ್ಲಿಯವರೆಗೂ ಅರ್ಧ ಮಿಲಿಯನ್ಗಿಂತ (Half Million)ಹೆಚ್ಚಿನ ಜನರು ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ(UN)ನ ನಿರಾಶ್ರಿತರ ವಿಭಾಗವು ತಿಳಿಸಿದೆ.
4) ಇತ್ತೀಚಿನ ಉಪಗ್ರಹ ಚಿತ್ರಗಳ (Satellite Picture) ಪ್ರಕಾರ ಉಕ್ರೇನ್ನ ರಾಜಧಾನಿ ಕೈವ್ (KYIV)ನ ಉತ್ತರ ಭಾಗದಲ್ಲಿ ರಷ್ಯಾದ ಸೇನೆಯೂ ಬೀಡು ಬಿಟ್ಟಿರುವುದನ್ನು ತೋರಿಸುತ್ತದೆ.
5) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ತಟಸ್ಥವಾಗಿದ್ದರೆ ಮಾತ್ರ ಉಕ್ರೇನ್ ವಸಾಹತು ಸಾಧ್ಯ ಎಂದು ಪುಟಿನ್ ಹೇಳಿದ್ದಾರೆ. “denazified” ಮತ್ತು “demilitarised” ಬಗ್ಗೆ ರಷ್ಯಾ ಔಪಚಾರಿಕವಾಗಿ ಒಪ್ಪಿಕೊಂಡಿದೆ.
6) ರಷ್ಯಾ ಹಾಗೂ ಉಕ್ರೇನ್ ನಡುವಿನ ಮೊದಲ ಸುತ್ತಿನ ಮಾತುಕತೆ ಯಾವುಧೇ ಫಲ ನೀಡಲಿಲ್ಲ.
7) ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಕ್ರೀಡಾ ಕ್ಷೇತ್ರದ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ರಷ್ಯಾ ಈ ವರ್ಷದ FootBall ವಿಶ್ವಕಪ್(WorldCup)ನಿಂದ ಹೊರ ಬಿದಿದ ಮತ್ತು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯೂ(IOC) ರಷ್ಯಾ ಮೇಲೆ ಜಾಗತಿಕ ಕ್ರೀಡಾ ನಿಷೇಧಕ್ಕೆ ಕರೆ ನೀಡಿದೆ.
8) ವಿಶ್ವಸಂಸ್ಥೆ(UN)ಯಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟನ್ನು ಚರ್ಚಿಸಲಾಗುತ್ತಿದೆ ಮತ್ತು ವಿಶ್ವಸಂಸ್ಥೆಯಿಂದ ರಷ್ಯಾವನ್ನು ಹೊರಗಿಡಲು ಮುಂದಿನ ವಾರ ಮತದಾನ ಪ್ರಕ್ರಿಯೆ ನಡೆಯಲಿದೆ.
9) ಒಂದೇ ವಾರದ ಅಂತರದಲ್ಲಿ ನಡೆದ ಎರಡನೇ ಸಭೆಯಲ್ಲು ಸಹ ಭಾರತ ತಟಸ್ಥ ನಿಲುವು ತಾಳಿತ್ತು. ಬೆಲಾರಸ್(Belarus) ಗಡಿ(Border) ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಮಾತುಕತೆಯನ್ನು ಭಾರತ ಸ್ವಾಗತಿಸಿದೆ.
10) ರಾಷ್ಟ್ರೀಯ ಭದ್ರತೆಯ ಕಾರಣದಿಂದಾಗಿ 12 ಮಂದಿ ರಷ್ಯಾದ ರಾಜತಾಂತ್ರಿಕರನ್ನು ವಿಶ್ವಸಂಸ್ಥೆಯ ಸಭೆಯಿಂದ ಹೊರಗಿಡಲಾಗಿತ್ತು.