ರಿಷಿ ಅಭಿನಯದ ಈ ಚಿತ್ರ ಜನವರಿ 24 ರಂದು ತೆರೆಗೆ
2025 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ, ಟೀಸರ್ ಮೂಲಕ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ರಿಷಿ ನಾಯಕನಾಗಿ ನಟಿಸಿರುವ `ರುದ್ರ ಗರುಡ ಪುರಾಣ’ ಚಿತ್ರಕ್ಕಾಗಿ ಪ್ರಮೋದ್ ಮರವಂತೆ ಬರೆದಿರುವ “ಅದೇನೇನೋ ಖುಷಿ ತಂದೆ, ಅದೇನೇನೋ ನಶೇ ತಂದೆ” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಕೃಷ್ಣಪ್ರಸಾದ್ ಸಂಗೀತ ನೀಡಿರುವ ಈ ಹಾಡನ್ನು ತಮ್ಮ ಅಮೋಘ ಗಾಯನದ ಮೂಲಕ ಹೆಸರಾಗಿರುವ ಸಂಜಿತ್ ಹೆಗ್ಡೆ ಹಾಗೂ ದೀಪಿಕಾ ವರದರಾಜನ್ ಹಾಡಿದ್ದಾರೆ. ಈಗಾಗಲೇ ಹಾಡುಗಳು ಹಾಗೂ ಟೀಸರ್ ಮೂಲಕ ಮೆಚ್ಚುಗೆ ಪಡೆದುಕೊಂಡಿರುವ ಈ ಚಿತ್ರ ಜನವರಿ 24ರಂದು ತೆರೆಕಾಣಲಿದೆ.
ಮಿಸ್ಟ್ರಿ ಥ್ರಿಲ್ಲರ್ ಕಥಾಹಂದರ ಹೊಂದಿರುವ “ರುದ್ರ ಗರುಡ ಪುರಾಣ”ದಲ್ಲಿ ಪ್ರೇಮ ಕಥೆಯೂ ಇದೆ.
ಹೆಸರಾಂತ ನಿರ್ದೇಶಕ ಜೇಕಬ್ ವರ್ಗೀಸ್ ಅವರ ಬಳಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ನಂದೀಶ್ ನಿರ್ದೇಶನದ ಎರಡನೇ ಚಿತ್ರ `ರುದ್ರ ಗರುಡ ಪುರಾಣ.
ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ವಿಜಯ್ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ನಟಿಸಿದ್ದಾರೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಮುಖ ತಾರಾಬಳಗದಲ್ಲಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ ಹಾಗೂ ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.