• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪೀಪಲ್‌ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಗರಿವಿಡಿ ಲಕ್ಷ್ಮೀ ಚಿತ್ರದ ಮೊದಲ ಹಾಡು ಬಿಡುಗಡೆ

ಪ್ರತಿಧ್ವನಿ by ಪ್ರತಿಧ್ವನಿ
January 11, 2025
in Top Story, ಅಂಕಣ, ಇದೀಗ, ಕರ್ನಾಟಕ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ತೆಲುಗಿನ ಖ್ಯಾತ ನಟಿ ಆನಂದಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಗರಿವಿಡಿ ಲಕ್ಷ್ಮೀ” ಸಿನಿಮಾ ಇದೀಗ ಹೊಸ ಅಪ್‌ಡೇಟ್‌ ಜತೆಗೆ ಆಗಮಿಸಿದೆ. ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ “ಗರಿವಿಡಿ ಲಕ್ಷ್ಮೀ” ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇದೀಗ ಇದೇ ಚಿತ್ರದ ಉತ್ತರ ಆಂಧ್ರ ಭಾಷಾ ಸೊಗಡಿನ “ನಳ ಜಿಲಕರ ಮೊಗ್ಗ” ಹಾಡು ಬಿಡುಗಡೆ ಆಗಿದೆ. ಗೌರಿ ನಾಯ್ಡು ಜಮ್ಮು ಎಂಬ ನಿರ್ದೇಶಕರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ADVERTISEMENT

ಟಿಜಿ ವಿಶ್ವ ಪ್ರಸಾದ್‌ ಮತ್ತು ಟಿಜಿ ಕೃತಿ ಪ್ರಸಾದ್‌ ಜಂಟಿಯಾಗಿ ಪೀಪಲ್‌ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಾಡನ್ನು ಕನ್ನಡದ ಜನಪ್ರಿಯ ಗಾಯಕಿ ಅನನ್ಯ ಭಟ್ ಹಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರದ ಚಿತ್ರೀಕರಣ ಆಂಧ್ರಪ್ರದೇಶದ ಅಡೋನಿಯಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದೀಗ 1990 ಕಾಲಘಟ್ಟ ಜಾನಪದ ಶೈಲಿಯ ಹಾಡಿನ ಮೂಲಕ ಕೇಳುಗರನ್ನು ಆಕರ್ಷಿಸಿರುವ ಗರಿವಿಡಿ ಲಕ್ಷ್ಮೀ ಸಿನಿಮಾದಲ್ಲಿ, ಉತ್ತರ ಆಂಧ್ರ ಭಾಗದ ಸಂಸ್ಖೃತಿ, ಆಚಾರ ವಿಚಾರದ ಜತೆಗೆ ಬುರ್ರ ಕಥಾ ಕಲಾವಿದರನ್ನೂ ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಚರಣ್ ಅರ್ಜುನ್ ಅವರ ಸಂಗೀತದೊಂದಿಗೆ, ಉತ್ತರ ಆಂಧ್ರದ ಸಾರ, ಅಲ್ಲಿನ ದೃಶ್ಯ ಮತ್ತು ಧ್ವನಿಯ ಮೂಲಕ ಕೇಳುಗರ ಕಿವಿಗೆ ಇಂಪಾಗಿಸಿದ್ದಾರೆ.

ಟಿ.ಜಿ. ವಿಶ್ವ ಪ್ರಸಾದ್, ಟಿ.ಜಿ. ಕೃತಿ ಪ್ರಸಾದ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗೌರಿ ನಾಯ್ಡು ಜಮ್ಮು ಈ ಚಿತ್ರದ ನಿರ್ದೇಶಕರು. ಇನ್ನು ಗರಿವಿಡಿ ಲಕ್ಷ್ಮೀ ಚಿತ್ರದಲ್ಲಿ ಹಿರಿಯ ನಟ ನರೇಶ್, ರಾಸಿ, ಆನಂದಿ, ರಾಗ್ ಮಯೂರ್, ಶರಣ್ಯ ಪ್ರದೀಪ್, ಅಂಕಿತ್ ಕೊಯ್ಯ, ಮೀಸಲ ಲಕ್ಷ್ಮಣ್, ಕಂಚರಪಾಲೆಂ ಕಿಶೋರ್, ಶರಣ್ಯ ಪ್ರದೀಪ್, ಕುಶಾಲಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿವೇಕ್ ಕೂಚಿಬೋಟ್ಲ ಸಹ ನಿರ್ಮಾಪಕರಾದರೆ, ಜೆ. ಆದಿತ್ಯ ಅವರ ಛಾಯಾಗ್ರಹಣ, ಚರಣ್ ಅರ್ಜುನ್ ಸಂಗೀತ ನೀಡುತ್ತಿದ್ದಾರೆ.

Tags: AnandAnkith koyyanareshPeople Media FactoryRag mayurRashiTelugu Movietollywood
Previous Post

ಸಂವಿಧಾನ ರಕ್ಷಣೆಯ ಕ್ರಾಂತಿಯಾಗಲಿ: ಬಸವರಾಜ ಬೊಮ್ಮಾಯಿ

Next Post

“ರುದ್ರ ಗರುಡ ಪುರಾಣ” ಚಿತ್ರದ ಮತ್ತೊಂದು ಮನಮೋಹಕ ಹಾಡು ಬಿಡುಗಡೆ .

Related Posts

ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಆತಂಕ: ಆರೋಗ್ಯ ಇಲಾಖೆ ಅಲರ್ಟ್
Top Story

ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರ ಆತಂಕ: ಆರೋಗ್ಯ ಇಲಾಖೆ ಅಲರ್ಟ್

by ಪ್ರತಿಧ್ವನಿ
May 20, 2026
0

ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಹಕ್ಕಿ ಜ್ವರ (Bird Flu / Avian Influenza) ಭೀತಿ ಮತ್ತೆ ಆತಂಕ ಮೂಡಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋಳಿಗಳ ಅಸಹಜ ಸಾವು...

Read moreDetails
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ಹೈಕೋರ್ಟ್ ಸೂಚನೆಗೆ ಮಣಿದ ಸಾರಿಗೆ ನೌಕರರು: ರಾಜ್ಯವ್ಯಾಪಿ ಮುಷ್ಕರ ವಾಪಸ್

May 19, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post

"ರುದ್ರ ಗರುಡ ಪುರಾಣ" ಚಿತ್ರದ ಮತ್ತೊಂದು ಮನಮೋಹಕ ಹಾಡು ಬಿಡುಗಡೆ .

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada