ಬೆಂಗಳೂರು : ರಾಜ್ಯದಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಎಲ್ಲಿ ತಪ್ಪಾಯ್ತು ಅನ್ನೋದನ್ನು ಪರಾಮರ್ಶೆ ಮಾಡಿಕೊಳ್ಳುತ್ತಲೇ ಇದೆ. ಈ ನಡುವೆ ಇಂದು ಹಂಗಾಮಿ ಸಿಎಂ ಬೊಮ್ಮಾಯಿಗೆ ಬುಲಾವ್ ನೀಡಿದ ಆರ್ಎಸ್ಎಸ್ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾರಣವೇನು ಎಂದು ಪ್ರಶ್ನಿಸಿದ ಆರ್ಎಸ್ಎಸ್ ನಾಯಕರು ಪಕ್ಷಕ್ಕೆ ಮೇಜರ್ ಸರ್ಜರಿ ಮಾಡುವಂತೆ ಬಸವರಾಜ ಬೊಮ್ಮಾಯಿಗೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಕಚೇರಿ ಕೇಶವಕೃಪದಿಂದ ಹೊರಬಂದ ಬಳಿಕ ಮಾತನಾಡಿದ ಹಂಗಾಮಿ ಸಿಎಂ ಬೊಮ್ಮಾಯಿ, ಚುನಾವಣೆ ಫಲಿತಾಂಶದ ಬಗ್ಗೆ ಚರ್ಚಿಸಿದ್ದೇವೆ. ಪಕ್ಷ ಪುನರ್ ಸಂಘಟನೆ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.