ಬೆಂಗಳೂರು : ರಾಜ್ಯದಲ್ಲಿ ಸದ್ಯ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಚರ್ಚೆ ಜೋರಾಗಿದೆ. ಕಾಂಗ್ರೆಸ್ನ ಪ್ರಭಾವಿ ನಾಯಕರಾದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಿಎಂಗಾದಿಗಾಗಿ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ನ ಯಾವುದೇ ನಿಲುವಿಗೂ ಬಾಗದ ಇಬ್ಬರೂ ನಾಯಕರು ಮುಖ್ಯಮಂತ್ರಿ ಪಟ್ಟ ಬಿಟ್ಟು ಇನ್ಯಾವುದೇ ಆಫರ್ ನಮಗೆ ಬೇಡ ಅಂತಿದ್ದಾರೆ.

ಸರ್ಕಾರ ರಚನೆಯ ಆರಂಭದ ದಿನಗಳಲ್ಲೇ ಬಂಡಾಯದ ಬೇಗುದಿ ಬೇಡ ಎಂದುಕೊಳ್ತಿರುವ ಹೈಕಮಾಂಡ್ ಇಬ್ಬರೂ ನಾಯಕರನ್ನು ತಣ್ಣಗಾಗಿಸಲು ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಐದು ವರ್ಷಗಳ ಅವಧಿಗೆ ಒಬ್ಬರನ್ನೇ ಸಿಎಂ ಮಾಡೋದು ಬಿಟ್ಟು ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ಮಾಡಲು ನಿರ್ಧರಿಸಿದ್ದು ಈ ಮೂಲಕ ಇಬ್ಬರೂ ನಾಯಕರಿಗೆ ಸಮಾನ ಅವಕಾಶ ನೀಡಲು ನಿರ್ಧರಿಸಿದೆ ಎನ್ನಲಾಗಿದೆ .
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಬಳಿಯಲ್ಲಿ ಸಿಎಂ ಪಟ್ಟ ಇರಬೇಕು ಅನ್ನೋದು ಇಬ್ಬರೂ ನಾಯಕರ ಆಸೆಯಾಗಿದ್ದು ಹೀಗಾಗಿ ಯಾರನ್ನು ಮೊದಲು ಸಿಎಂ ಮಾಡೋದು..? ಯಾರನ್ನು ಬಳಿಕ ಸಿಎಂ ಮಾಡೋದು ಎಂಬ ಲೆಕ್ಕಾಚಾರದಲ್ಲಿ ಸದ್ಯ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನಲಾಗಿದೆ .