• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕೊಡಗು , ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಂದ ಸರ್ಕಾರಕ್ಕೆ 1,492.18 ಕೋಟಿ ರೂಪಾಯಿ ಶುಲ್ಕ , ಬಡ್ಡಿ, ದಂಡ ಬಾಕಿ

ಪ್ರತಿಧ್ವನಿ by ಪ್ರತಿಧ್ವನಿ
December 11, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

ಬೆಂಗಳೂರು: ಬ್ರಿಟಿಷರ ಕಾಲದಲ್ಲಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಗೆ ಸುಮಾರು 5,150 ಎಕರೆ ಅರಣ್ಯ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದ್ದು ಈ ಸಾವಿರಾರು ಎಕರೆ ಭೂಮಿಯನ್ನು (Forest Land) ಮರು ವಶಕ್ಕೆ ಪಡೆಯಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅರಣ್ಯ ಸಚಿವ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ADVERTISEMENT

ಸೋಮವಾರ ವಿಧಾನ ಪರಿಷತ್ ನ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸುಜಾ ಕುಶಾಲಪ್ಪ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಮರ್ಕೆರಾ ರಬ್ಬರ್ ಕಂಪನಿಗೆ 1074 ಎಕರೆ, ನೀಲಾಂಬುರ್ ರಬ್ಬರ್ ಕಂಪನಿಗೆ 713.03 ಎಕರೆ, ಥಾಮ್ಸನ್ ರಬ್ಬರ್ ಕಂಪನಿಗೆ 625 ಎಕರೆ, ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿಗೆ 1289.29 ಎಕರೆ, ಟಾಟಾ ಕಾಫಿ ಲಿಮಿಟೆಡ್‌ಗೆ 923.378 ಎಕರೆ, ಗ್ಲೆನ್‌ ಲೊರ್ನಾ ಪ್ಲಾಂಟೇಷನ್ ಗೆ 279.748 ಎಕರೆ, ಚಾಮರಾಜನಗರ ಜಿಲ್ಲೆಯ ಎಮರಾಲ್ಡ್ ಹೆವೆನ್ ಎಸ್ಟೇಟ್ ಬೇಡಗುಳಿ ಕಂಪೆನಿಗೆ 37.25 ಎಕರೆ, ಬಿಳಿಗಿರಿ ರಂಗನ ಎಸ್ಟೇಟ್, ಬೇಡಗುಳಿಗೆ 25 ಎಕರೆ , ಮತ್ತು ನೀಲಗಿರಿ ಪ್ಲಾಂಟೇಷನ್ ಲಿ. ಹೊನ್ನಮೇಟಿ ಗೆ 184 ಎಕರೆ ಸೇರಿ ಒಟ್ಟು 5150 ಎಕರೆ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎಂದು ವಿವರಿಸಿದರು.

“1999-2000ನೇ ಇಸವಿಯಲ್ಲಿ ಈ ತೋಟಗಳು ಮೀಸಲು ಅರಣ್ಯ ಭೂಮಿಗೆ ಸೇರಿದವು ಎಂಬುದನ್ನು ಅರಣ್ಯ ಇಲಾಖೆ ಪತ್ತೆ ಮಾಡಿತು. ಅಲ್ಲಿಯವರೆಗೂ ಈ ಜಮೀನಿನ ಮಾಲೀಕತ್ವದ ಕುರಿತು ಸ್ಪಷ್ಟತೆ ಇರಲಿಲ್ಲ ಎಂದರು.ಈ ಕಂಪನಿಗಳು ಹಲವು ದಶಕಗಳಿಂದ ಗುತ್ತಿಗೆ ಹಣವನ್ನೂ ಪಾವತಿಸಿರುವುದಿಲ್ಲ. ಈ 9 ಕಂಪನಿಗಳಿಂದ ಅರಣ್ಯ ಇಲಾಖೆಗೆ ಬಡ್ಡಿ ಮತ್ತು ದಂಡ ಸೇರಿ ಒಟ್ಟು 1492.18 ಕೋಟಿ ರೂ. ಬರಬೇಕಿದೆ ಎಂದೂ ಸಚಿವರು ತಿಳಿಸಿದರು.

ಈ ಕಂಪನಿಗಳು ತಮಗೆ 999 ವರ್ಷಗಳಿಗೆ ಲೀಸ್ ನೀಡಲಾಗಿದ್ದು ಲೀಸ್‌ ಅವಧಿ ಮುಗಿದ ನಂತರ ಭೂಮಿ ಬಿಟ್ಟುಕೊಡುತ್ತೇವೆ ಎಂದು ಕಂಪನಿಗಳು ವಾದಿಸುತ್ತಿದ್ದವು.ಆದರೆ ರಾಜ್ಯ ಸರ್ಕಾರ 2012ರಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಿ ಈ 999 ವರ್ಷಗಳ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ತಗ್ಗಿಸಿದ್ದು, ಅವಧಿ ಮುಗಿದ ಅರಣ್ಯ ಭೂಮಿಯ ಮರು ವಶಕ್ಕೆ ನೋಟಿಸ್ ನೀಡಿತ್ತು.ಆ ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದು, ಪ್ರಸ್ತುತ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.ಈ ಪ್ರಕರಣವು ಡಿಸೆಂಬರ್‌ 12ರಂದು ವಿಚಾರಣೆಗೆ ಬರಲಿದೆ ಎಂದೂ ಸಚಿವ ಖಂಡ್ರೆ ಮಾಹಿತಿ ನೀಡಿದರು.

ತಾವು ಸಚಿವರಾದ ಬಳಿಕ ಗುತ್ತಿಗೆ ಅರಣ್ಯ ಭೂಮಿಯನ್ನು ಮರು ವಶಕ್ಕೆ ಪಡೆಯಲು 5 ಜನ ಸದಸ್ಯರ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಪಡೆಯು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ, ದಾಖಲೆಗಳನ್ನು ಒಗ್ಗೂಡಿಸಿ ಭೂಮಿ ಮರಳಿ ಪಡೆಯಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿರುವ ಪ್ರಕರಣಗಳ ಪರಿಶೀಲನೆ, ಗೇಣಿ ವಸೂಲಾತಿ, ಅರಣ್ಯ ಪ್ರದೇಶವನ್ನು ಇಲಾಖೆಗೆ ಹಿಂಪಡೆಯುವ ಬಗ್ಗೆ ಕಾರ್ಯಪಡೆ ಅಧ್ಯಕ್ಷರು ಮತ್ತು ಸದಸ್ಯರು ಹಲವು ಬಾರಿ ಸಭೆ ನಡೆಸಿ, ಆದ್ಯತೆಯ ಆಧಾರದಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲು ಶ್ರಮಿಸುತ್ತಿದ್ದಾರೆ ಎಂದರು. ವರದಿ ಕೋವರ್‌ ಕೊಲ್ಲಿ ಇಂದ್ರೇಶ್‌

Tags: 9 companiesbengaluruBritish eraEnvironment Minister Eshwar KhandreIn 1999-2000.Kodagu and Chamarajanagar districts.lease paymentsRs 1492 crores
Previous Post

ಇವಿಎಂ ದುರ್ಬಳಕೆ ಆರೋಪ ; ಸುಪ್ರೀಂ ಕೋರ್ಟ್‌ ಗೆ ಅರ್ಜಿ ಸಲ್ಲಿಸಲಿರುವ ಇಂಡಿಯಾ ಬಣ

Next Post

ಪಂಚಮಸಾಲಿ ಮೀಸಲಾತಿ; ಲಾಠಿಚಾರ್ಜ್‌ ಬೆನ್ನಲ್ಲೇ ನಾಯಕರ ಭೇಟಿ..!

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಪಂಚಮಸಾಲಿ ಮೀಸಲಾತಿ; ಲಾಠಿಚಾರ್ಜ್‌ ಬೆನ್ನಲ್ಲೇ ನಾಯಕರ ಭೇಟಿ..!

ಪಂಚಮಸಾಲಿ ಮೀಸಲಾತಿ; ಲಾಠಿಚಾರ್ಜ್‌ ಬೆನ್ನಲ್ಲೇ ನಾಯಕರ ಭೇಟಿ..!

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada