• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಂಚಮಸಾಲಿ ಮೀಸಲಾತಿ; ಲಾಠಿಚಾರ್ಜ್‌ ಬೆನ್ನಲ್ಲೇ ನಾಯಕರ ಭೇಟಿ..!

ಪ್ರತಿಧ್ವನಿ by ಪ್ರತಿಧ್ವನಿ
December 11, 2024
in Top Story, ಇತರೆ / Others, ಕರ್ನಾಟಕ
0
ಪಂಚಮಸಾಲಿ ಮೀಸಲಾತಿ; ಲಾಠಿಚಾರ್ಜ್‌ ಬೆನ್ನಲ್ಲೇ ನಾಯಕರ ಭೇಟಿ..!
Share on WhatsAppShare on FacebookShare on Telegram

ಚಿತ್ರದುರ್ಗ: ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮನೆಗೆ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.ಮಾಜಿ ಶಾಸಕರಿಬ್ಬರು ಸೌಹಾರ್ದಯುತ ಭೇಟಿ ಹೆಸರಲ್ಲಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ADVERTISEMENT

ತಿಪ್ಪಾರೆಡ್ಡಿ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ಬೆಳಗಾವಿಯಲ್ಲಿ 2A ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಜಯ ಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ ನಡೆದಿದ್ದ ಮುತ್ತಿಗೆ ಕಾರ್ಯಕ್ರಮದಲ್ಲಿ ಸರ್ಕಾರ ಮಾನವೀಯತೆ ಮರೆತ ಮೃಗಗಳಂತೆ ವರ್ತನೆ ಮಾಡಿದ್ದಾರೆ. ಸರ್ಕಾರ, ಸಿಎಂ ಸಿದ್ದರಾಮಯ್ಯ ಸಂಬಂಧ ಪಟ್ಟ ಸಚಿವರನ್ನು ಕರೆದು ಸ್ವಾಮಿಜಿ ಜೊತೆ ಮಾತನಾಡಬಹುದಿತ್ತು ಎಂದಿದ್ದಾರೆ.

ಆದರೆ ಪ್ರತಿಭಟನಾಕಾರರನ್ನು ಕರೆದು ಮಾತನಾಡದ ಸರ್ಕಾರ, ಅಮಾನವೀಯತೆಯಿಂದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ಹಲವು ಅಮಾಯಕರ ಕೈ ಕಾಲು, ಮೂಳೆ ಮುರಿದಿದೆ. ಸಾವಿರಾರು ಜನರಿಗೆ ಲಾಠಿ ಏಟು ಬಿದ್ದಿದೆ. ಇದೇ ಲಾಠಿ ಏಟು ನಿಮಗೆ ಬಿದ್ದಿದ್ರೆ ಹೇಗೆ ಇರುತ್ತಿತ್ತು..? ಎಂದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ನೀವು ರಾಜಿನಾಮೆ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಆ ಸ್ಥಾನದಲ್ಲಿ ಮುಂದುವರೆಯಲು ನಿಮಗೆ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ಪಂಚಮಸಾಲಿ ಸಮಾಜಕ್ಕೆ 2ಬಿ ಮೀಸಲಾತಿ ನೀಡಿದ್ರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿಭಟನೆಯನ್ನು ಹತ್ತಿಕ್ಕಲಿಲ್ಲ. ಆದ್ರೆ ಈಗ ಅಧಿಕಾರಕ್ಕೆ ಬಂದ‌ ನೀವು ಯಾಕೆ ಮೀಸಲಾತಿ ನೀಡ್ತಿಲ್ಲ..? ಮೀಸಲಾತಿ ನೀಡುವ ಬದಲು ಶ್ರೀಗಳಿಗೆ ಸಿಎಂ ಸಿವಾಸದಲ್ಲಿ ಅಪಮಾನ ಮಾಡಿದ್ರಿ. ಪಂಚಮಸಾಲಿ ವಿರೋಧಿ ಅಂತಾ ಬಿ.ಎಸ್‌ ಯಡಿಯೂರಪ್ಪ ಹಾಗು ಬಿ.ವೈ ವಿಜಯೇಂದ್ರ ವಿರುದ್ಧ ಅಪಪ್ರಚಾರ ಮಾಡಿದ್ರಿ, ಆದರೆ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಛೇಡಿಸಿದ್ದಾರೆ.

ರಾಮ, ಹನುಮಾನ್, ಕೇಸರಿ ಕಂಡ್ರೆ ಈ ಸರ್ಕಾರಕ್ಕೆ ಆಗಲ್ಲ ಎಂದಿರುವ ರೇಣುಕಾಚಾರ್ಯ, ಸಂಕಟ ಬಂದಾಗ ವೆಂಕಟರಮಣ ಅಂತಾ ಸಿಎಂ ಸಿದ್ದರಾಮಯ್ಯ, ಚಾಮುಂಡಿ ಬೆಟ್ಟ, ಸವದತ್ತಿ ಯಲ್ಲಮ್ಮನ ದರ್ಶನ ಪಡೆದು‌ ಕುಂಕುಮ ಹಚ್ಚಿಕೊಂಡ್ರು. ಸಿದ್ದರಾಮಯ್ಯನವರೇ ನಿಮ್ಮ ತಂದೆ-ತಾಯಿ ನಿಮಗೆ ದೇವರ ಹೆಸರಿಟ್ಟಿದ್ದಾರೆ. ಅಂಥ ನೀವು ಹೋರಾಟ ಹತ್ತಿಕ್ಕಲು ಕ್ರೌರ್ಯ ಮೆರೆದಿದ್ದೀರಿ. ಆದೇಶ ಮಾಡಿ ಪೊಲೀಸರನ್ನು ಬಿಟ್ಟು ಹೊಡೆಸಿದ್ರಿ. ಶ್ರೀಗಳನ್ನು ಬಂಧಿಸಿ, ಅಮಾಯಕರ ಮೇಲೆ ಲಾಠಿಚಾರ್ಜ್ ಮಾಡಿಸಿದ್ರಿ ಎಂದು ಟೀಕಿಸಿದ್ದಾರೆ.

ಈ ಸರ್ಕಾರ ತೊಲಗಬೇಕು ಅಂತ ನಾವು ಸಂಕಲ್ಪ ಮಾಡ್ತೀವಿ. ಕಾಂಗ್ರೆಸ್ ರೈತ, ಮಹಿಳಾ, ಹಿಂದೂ ವಿರೋಧಿ ಸರ್ಕಾರ. ಹಿಂದೂಗಳಿಗೆ, ಸ್ವಾಮಿಜಿಗಳಿಗೆ ರಕ್ಷಣೆ ಇಲ್ಲಾ ಅಂದ್ರೆ ಹೇಗೆ..? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಗೃಹಮಂತ್ರಿ ಪರಮೇಶ್ವರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕಂಡಲ್ಲಿ‌ ಗುಂಡಿಕ್ಕಿ ಕೊಲ್ಲಬೇಕೆಂದು ಸರ್ಕಾರದ ಪಿತೂರಿ ಇತ್ತೇನೋ.? ಎಂದು ಅನುಮಾನ ವ್ಯಕ್ತಪಡಿಸಿರುವ ರೇಣುಕಾಚಾರ್ಯ, ನಾಡಿನ ಪ್ರಜ್ಞಾವಂತ ಮತದಾರರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags: 2A reservation2B reservationBY VijayendraChitradurgaFormer MLA G.H.Former minister MP Renukacharya.lathicharge..Panchmasali reservationTippareddy's
Previous Post

ಕೊಡಗು , ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಂದ ಸರ್ಕಾರಕ್ಕೆ 1,492.18 ಕೋಟಿ ರೂಪಾಯಿ ಶುಲ್ಕ , ಬಡ್ಡಿ, ದಂಡ ಬಾಕಿ

Next Post

ಮಂಜು – ಗೌತಮಿ ಫ್ರೆಂಡ್ಶಿಪ್ ಬ್ರೇಕ್ – ಕ್ಯಾಪ್ಟನ್ಸಿ ಟಾಸ್ಕ್ ನಿಂದ ಮಂಜುನ ಹೊರಗಿಟ್ಟ ಗೆಳತಿ.!

Related Posts

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ
Top Story

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದರ್ಶನ್‌ ಹಲ್ಲೆ ಬಗ್ಗೆ ಪ್ರದೋಷ್‌ ಸ್ಫೋಟಕ ಹೇಳಿಕೆ

by ಪ್ರತಿಧ್ವನಿ
August 15, 2026
0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ನಂ.14 ಆಗಿರುವ ಪ್ರದೋಷ್‌ ರಾವ್‌, ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ನ್ಯಾಯಾಲಯದ ಮುಂದೆ...

Read moreDetails
ವಂದೇ ಮಾತರಂ ವಿವಾದಕ್ಕೆ ಹೊಸ ತಿರುವು: ಖರ್ಗೆ, ಸೋನಿಯಾ, ರಾಹುಲ್ ಸನ್ನೆ ವೈರಲ್; ಕಾಂಗ್ರೆಸ್‌ ಸ್ಪಷ್ಟನೆ

ವಂದೇ ಮಾತರಂ ವಿವಾದಕ್ಕೆ ಹೊಸ ತಿರುವು: ಖರ್ಗೆ, ಸೋನಿಯಾ, ರಾಹುಲ್ ಸನ್ನೆ ವೈರಲ್; ಕಾಂಗ್ರೆಸ್‌ ಸ್ಪಷ್ಟನೆ

August 15, 2026
ನನಗಿಂತ ಚೆನ್ನಾಗಿ ರಾವಣನ ಪಾತ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ!

ನನಗಿಂತ ಚೆನ್ನಾಗಿ ರಾವಣನ ಪಾತ್ರ ಮಾಡಲು ಯಾರಿಂದಲೂ ಸಾಧ್ಯವಿಲ್ಲ!

August 15, 2026
ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

ನಾವು ಕೇವಲ ಸ್ವಾವಲಂಬಿಗಳಲ್ಲ, ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಯಾಗಿ ಹೊರಹೊಮ್ಮುತ್ತಿದ್ದೇವೆ : ರಮೇಶ್ ಗೌಡ

August 15, 2026
`A DATE’ ಚಿತ್ರದ ಬ್ಯಾಡ್ ಗೈ ಆಂಥಮ್ ಸಾಂಗ್ ಹೊರಬಂತು !

`A DATE’ ಚಿತ್ರದ ಬ್ಯಾಡ್ ಗೈ ಆಂಥಮ್ ಸಾಂಗ್ ಹೊರಬಂತು !

August 15, 2026
Next Post
ಮಂಜು – ಗೌತಮಿ ಫ್ರೆಂಡ್ಶಿಪ್ ಬ್ರೇಕ್ – ಕ್ಯಾಪ್ಟನ್ಸಿ ಟಾಸ್ಕ್ ನಿಂದ ಮಂಜುನ ಹೊರಗಿಟ್ಟ ಗೆಳತಿ.!

ಮಂಜು - ಗೌತಮಿ ಫ್ರೆಂಡ್ಶಿಪ್ ಬ್ರೇಕ್ - ಕ್ಯಾಪ್ಟನ್ಸಿ ಟಾಸ್ಕ್ ನಿಂದ ಮಂಜುನ ಹೊರಗಿಟ್ಟ ಗೆಳತಿ.!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada