ಜೈಲರ್ ಒಬ್ಬರು ಅಧಿಕಾರ ವಹಿಸಿಕೊಂಡ ಕೆಲವೇ ಸಮಯದಲ್ಲಿ ಕರ್ತವ್ಯ ಲೋಪ ಎಸಗಿರುವ ಘಟನೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ರೌಡಿ ಶೀಟರ್ ಸೀನನ Birthday celebration ಬಲು ಜೋರು !

ಒಂದು ಕಡೆ ಕೊಲೆ ಮಾಡಿ ಜೈಲು ಸೇರಿರುವ ನಟ ದರ್ಶನ್ ತಾವು ಸೆಲ್ ನಲ್ಲಿ ಇರೋಕೆ ಆಗುತ್ತಿಲ್ಲ, ಮಲಗಲು ಹಾಸಿಗೆ, ದಿಂಬು ಕೂಡ ಕೊಡತ್ತಿಲ್ಲವೆಂದು ಹೇಳಿ ಅವರ ಪರ ವಕೀಲರು ಕೋರ್ಟ್ ಜೈಲ್ ಅಧಿಕಾರಿಗಳು ನಡೆಯನ್ನು ಪ್ರಶ್ನಿಸಿ ಅವರ ವಿರುದ್ಧವೇ
ಕೋರ್ಟ್ ಮೆಟ್ಟಿಲೇರಿದರು.
ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಕೂಡ ನಡೆಯಿತು.

ಇದರ ಬೆನ್ನಲ್ಲೇ ರೌಡಿ ಶೀಟರ್ ಸೀನಾ ಹಾಗೂ ಆತನ ಗ್ಯಾಂಗ್ ಜೈಲಿನ ಒಳಗೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾನೆ.
ಹಾಗಿದ್ದರೆ ಜೈಲ್ ಅಧಿಕಾರಿಗಳು ಈ ರೀತಿಯಾಗಿ ತಾರತಮ್ಯ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ? ಸಾರ್ವಜನಿಕರಲ್ಲಿ ಮೂಡಿದೆ.