ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದ ಬಳಿಕ ಇದೇ ಮೊದಲ ಬಾರಿಗೆ ಪ್ರಜ್ಞಾನ್ ರೋವನ್ ಮೊದಲ ಬಾರಿಗೆ ವಿಕ್ರಮ್ ಲ್ಯಾಂಡರ್‌ನ ಮೊದಲ ಚಿತ್ರವನ್ನು ಕ್ಲಿಕ್ಕಿಸಿ ಭೂಮಿಗೆ ರವಾನಿಸಿದೆ ಎಂದು ಬುಧವಾರ (ಆಗಸ್ಟ್ 30) ಹೇಳಿದೆ.
ಚಂದ್ರಯಾನ 3 ಪ್ರಜ್ಞಾನ್ ರೋವರ್ ಬುಧವಾರ ವಿಕ್ರಮ್ ಲ್ಯಾಂಡರ್ನ ಚಿತ್ರವನ್ನು ಹಂಚಿಕೊಂಡಿದೆ. ಅದು ತನ್ನ ನ್ಯಾವಿಗೇಷನ್ ಕ್ಯಾಮೆರಾ ಬಳಸಿ ಕ್ಲಿಕ್ ಮಾಡಿದ ಮೊದಲ ಚಿತ್ರ ಇದಾಗಿದೆ. ಚಂದ್ರನ ಮೇಲೆ ಇಳಿದ ನಂತರ ರೋವರ್ ಕ್ಲಿಕ್ ಮಾಡಿದ ಮೊದಲ ಚಿತ್ರ ಇದಾಗಿದ್ದು, ಇದುವರೆಗೂ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದಿತ್ತು.
ಈ ಕುರಿತು ಟ್ವಿಟರ್ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇದನ್ನು ʼಮಿಷನ್ನ ಚಿತ್ರʼ ಎಂದು ಕರೆದಿದೆ. ರೋವರ್ನಲ್ಲಿರುವ ನವಕ್ಯಾಮ್ಗಳನ್ನು ಬೆಂಗಳೂರಿನಲ್ಲಿರುವ ಲ್ಯಾಬೊರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ.
ಭಾರತವು ಆಗಸ್ಟ್ 23 ರಂದು ಇಸ್ರೊದ ಮಹತ್ವಾಕಾಂಕ್ಷೆಯ ಮೂರನೇ ಚಂದ್ರನ ಮಿಷನ್ ಚಂದ್ರಯಾನ 3 ರ ಲ್ಯಾಂಡರ್ ಮಾಡ್ಯೂಲ್ (LM) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿ, ಈ ಸಾಧನೆಯನ್ನು ಸಾಧಿಸಿದ ಜಗತ್ತಿನ ನಾಲ್ಕನೇ ದೇಶವಾಗಿದೆ ಮತ್ತು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂದು ಭಾರತ ಇತಿಹಾಸ ಬರೆದಿದೆ.