ರೋಸ್ ವಾಟರ್ ಗುಲಾಬಿ ದಳಗಳಿಂದ ಹೊರತೆಗೆಯಲಾದ ನೈಸರ್ಗಿಕ, ಪರಿಮಳಯುಕ್ತ ದ್ರವವಾಗಿದೆ. ಈ ರೋಜ್ ವಾಟರ್ ಅನ್ನು ಶತಮಾನಗಳಿಂದಲೂ ತ್ವಚೆಯ ಆರೈಕೆಗೆ, ಕೂದಲ ಬೆಳವಣಿಗೆಗೆ ಹಾಗೂ ಅಡುಗೆಯಲ್ಲೂ ಕೂಡ ಬಳಸಲಾಗುತ್ತದೆ.. ರೋಸ್ ವಾಟರ್ ಇಂದ ತ್ವಚೆಯ ಆರೈಕೆ ಹೇಗೆ ಸಾಧ್ಯ ಎಂಬುದರ ಮಾಹಿತಿ ಹೀಗಿದೆ.

ಸ್ಕಿನ್ ಟೋನರ್ ಆಗಿ ಬಳಸಬಹುದು
ಕಾಟನ್ ಪ್ಯಾಡ್ ಗೆ ರೋಜ್ ವಾಟರ್ ಅನ್ನ ಹಾಕಿ ನಂತರ ಅದನ್ನು ಮುಖಕ್ಕೆ ಹಚ್ಚಿ ಹಾಗೂ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ. ಇದರಿಂದ ಪಿ ಹೆಚ್ ಲೆವೆಲನ್ನು ಬ್ಯಾಲೆನ್ಸ್ ಮಾಡುತ್ತದೆ ಚರ್ಮವನ್ನು ಟೈಟ್ ಮಾಡುತ್ತದೆ ಹಾಗು ಫೋರ್ಸ್ ಅನ್ನ ಕಡಿಮೆ ಮಾಡುತ್ತದೆ.

ಫೇಸ್ ಸ್ಪ್ರೇ ಆಗಿ ಬಳಸಿ
ದಿನಕ್ಕೆ ಮೂರರಿಂದ ನಾಲ್ಕು ಬಾರಿ ರೋಜ್ ವಾಟರ್ ಅನ್ನ ತ್ವಚೆಗೆ ಅಥವಾ ಮುಖಕ್ಕೆ ಸ್ಪ್ರೇ ಮಾಡುವುದರಿಂದ, ಸ್ಕಿನ್ ಅನ್ನು ಹೈಡ್ರೇಟ್ ಆಗಿರುತ್ತದೆ ಹಾಗೂ ರಿಫ್ರೆಶ್ ಆಗಿಡಲು ತುಂಬಾನೇ ಸಹಾಯಕಾರಿ.
ಚರ್ಮದ ಆರೈಕೆ
ಪ್ರತಿದಿನ ನೀವು ಸ್ನಾನ ಮಾಡುವ ನೀರಿಗೆ ಎರಡರಿಂದ ಮೂರು ಸ್ಪೂನ್ ಅಷ್ಟು , ರೋಜ್ ವಾಟರ್ ಬೆರೆಸಿ, ಆ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆಯ ಆರೈಕೆಯನ್ನು ಸುಲಭವಾಗಿ ಮಾಡಬಹುದು ,ಚರ್ಮದಲ್ಲಾಗುವಂತ ತುರಿಕೆಗಳು ನಿವಾರಣೆಯಾಗುತ್ತದೆ.

ಮೇಕಪ್ ರಿಮೂವರ್
ಮೇಕಪ್ ನ ರಿಮೂವ್ ಮಾಡಲು ಸುಲಭ ವಿಧಾನ ಎಂದರೆ ರೋಜ್ ವಾಟರ್ ಒಂದು ಕಾಟನ್ ಪ್ಯಾಡ್ ಗೆ, ರೋಜ್ ವಾಟರ್ ಹಾಕಿ ಮುಖದ ಮೇಕಪ್ ಅನ್ನು ವೈಪ್ ಮಾಡುವುದರಿಂದ ,ಮೇಕಪ್ ರಿಮೂವ್ ಆಗುವುದು ಮಾತ್ರವಲ್ಲದೆ ನಿಮ್ಮ ಚರ್ಮದ ನೈಸರ್ಗಿಕ ತೈಲಗಳನ್ನು ಹಾಗೆ ಉಳಿಸುತ್ತದೆ .











