ರಾಷ್ಟ್ರ ರಾಜಕಾರನದಲ್ಲಿ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದ್ದು ಈ ಭಾರೀ ಮಹಾರಾಷ್ಟ್ರದಲ್ಲಿ ಕಾರ್ಯಾಚರಣೆಯನ್ನ ಕೈಗೊಂಡಿದೆ. 169 ಸದಸ್ಯ ಬಲವಿರುವ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗುವ ಕ್ಷಣ ಸನ್ನಿಹಿತವಾಗಿದೆ.
ಏಕೆಂದರೆ ಆಡಳಿತ ಪಕ್ಷದ ಸಚಿವ ತನ್ನ ಬೆಂಬಲಿಗ ಹಾಗು ಅಸಮಾಧಾನಿತ ಶಾಸಕರೊಂದಿಗೆ ಸೂರತ್ನ ರೆಸಾರ್ಟ್ ಒಂಧರಲ್ಲಿ ಬೀಡು ಬಿಟ್ಟಿದ್ದು ಮನವೊಲಿಸಲು ಮುಂದಾದರು ಸಹ ಯಾರ ಸಂಪರ್ಕಕ್ಕೆ ಸಿಗದಿರುವುದು ಕೇಸರಿ ಪಾಳಯದಲ್ಲಿ ಅಧಿಕಾರದ ಆಸೆಯನ್ನ ಚಿಗುರೊಡೆಯುವಂತೆ ಮಾಡಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನೆ 55, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 53, ಕಾಂಗ್ರೆಸ್ 44 ಹಾಗು ಪಕ್ಷೇತರರು 29 ಸ್ಥಾನಗಳಲ್ಲಿ ಜಯಗಳಿಸಿದ್ದರು.

ಬಿಜೆಪಿ ಹಾಗು ಶಿವಸೇನೆ ಮೊದಲೇ ಮೈತ್ರಿ ಗೋಷಿಸಿ ಸೀಟು ಹಂಚಿಕೊಂಡು ಜಂಟಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ, ಫಲಿತಾಂಶ ಹೊರಬಿದ್ದ ನಂತರ ತನ್ನಗೆ ಮುಖ್ಯಮಂತ್ರಿ ಪಟ್ಟ ಬೇಕು ಎಂದು ಹಠ ಹಿಡಿದಿದ್ದ ಶಿವಸೇನೆ ಕಡೆಗೆ ಎನ್ಸಿಪಿ ಹಾಗು ಕಾಂಗ್ರೆಸ್ ಜತೆಗೂಡಿ ಮಹಾ ವಿಕಾಸ್ ಅಘಾಡಿ ಹೆಸರಿನಲ್ಲಿ ಮೈತ್ರಿ ಸರ್ಕಾರವನ್ನ ರಚಿಸಿತ್ತು.
ಆದರೆ, ಇದೀಗ ಈ ಸರ್ಕಾರಕ್ಕೆ ವಿಘ್ನ ಎದುರಾಗಿದ್ದು ಸರ್ಕಾರ ಪತನವಾಗದಂತೆ ಪಕ್ಷೇತರರ ಬೆಂಬಲ ಪಡೆಯಲು ಎಂವಿಎ ನಾಯಕರು ತೆರೆಮರೆ ಕಸರತ್ತು ನಡೆಸಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ 13 ಪಕ್ಷೇತರರು ಎಂವಿಎಗೆ ಈಗಾಗಲೇ ಬೆಂಬಲ ಸೂಚಿಸಿದ್ದಾರೆ, 6 ಮಂದಿ ಬಿಜೆಪಿ ಪರವಾಗಿದ್ದಾರೆ.
ಆದರೆ, ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಎಐಎಂಐಎಂ ಹಾಗು ಸಮಾಜವಾದಿ ಪಕ್ಷದ ಶಾಸಕರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು ಬಹುಜನ್ ವಿಕಾಸ್ ಅಘಾಡಿಯ ಮೂವರು ಶಾಸಕರು ಬಿಜೆಪಿಗೆ ಜೈ ಎಂದಿದ್ದರು.

ರಾಜ್ಯಸಭೆ ಚುನಾವಣೆಯಲ್ಲಿ ಅಂದುಕೊಂಡಂತೆ ನಿರಾಯಸವಾಗಿ ಯಾವುದೇ ಅಡ್ಡಮತದಾನವಿಲ್ಲದೆ ಗೆದಿದ್ದ ಮೈತ್ರಿ ಸರ್ಕಾರಕ್ಕೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸರಿಯಾಗಿ ಗುನ್ನ ಹೊಡೆದಿದೆ.
ಇದು ಆಪರೇಷನ್ ಕಮಲದ ಮೂರನೇ ಯತ್ನವಾಗಿದ್ದು ಇದು ಇಲ್ಲಿಗೆ ನಿಲ್ಲುತ್ತದ ಅಥವಾ ಇನ್ನೆರಡು ವರ್ಷ ಕಾದು ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.