2016ರಲ್ಲಿ ಜಾತಿ ನಿಂದನೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದ ಹೈದರಬಾದ್ ಸೆಂಟ್ರಲ್ ವಿವಿ ವಿದ್ಯಾರ್ಥಿ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಯಾತ್ರೆಯಲ್ಲಿ ಭಾಗಿಯಾಗಿರುವ ಕುರಿತು ಮಾತನಾಡಿದ ರೋಹಿತ್ ತಾಯಿ ರಾಧಿಕಾ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಕರೆಗೆ ಒಗೊಟ್ಟು ಹೆಜ್ಜೆ ಹಾಕುತ್ತಿದ್ದೇನೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ದೇಶದ ಸಂವಿಧಾನವನ್ನ ಕಾಪಾಡುವಂತೆ ರಾಹುಲ್ ಬಳಿ ಮನವಿ ಮಾಡಿದ್ದೇನೆ ಮತ್ತು ರೋಹಿತ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ವಿನಂತಿಸಿದ್ದೇನೆ ಎಂದು ರಾಧಿಕಾ ವೇಮುಲಾ ಹೇಳಿದ್ದಾರೆ.
ರೋಹಿತ್ ತಾಯಿ ಯಾತ್ರೆಯಲ್ಲಿ ಭಾಗಿಯಾಗಿರುವ ಕುರಿತು ಸಂತಸ ವ್ಯಕ್ತಪಡಿಸಿದ ರಾಹುಲ್ ಗಾಂಧಿ ರೋಹಿತ್ ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ದ ಹೋರಾಟದ ಸಂಕೇತವಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ರೋಹಿತ್ ತಾಯಿ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಹಂಚಿಕೊಂಡಿದ್ದಾರೆ.












