ಮಂಗಳೂರು ನಗರದಲ್ಲ ನಾಡ ಗೀತೆಗೆ ಅಪಮಾನ ಮಾಡಿದ, ಪಠ್ಯಪುಸ್ತಕವನ್ನು ಕೇಸರಿಕರಣ ಮಾಡಿದ ರೋಹಿತ್ ಚಕ್ರತೀರ್ಥನಿಗೆ ಶಾಸಕ ವೇದವ್ಯಾಸ ಅಧ್ಯಕ್ಷತೆಯಲ್ಲಿನಡೆಯಬೇಕಿದ್ದ ಸನ್ಮಾನ ಕಾರ್ಯಕ್ರಮ ರದ್ದಾಗಿದೆ.
ಹೌದು, ಮಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥಗೆ ಸನ್ಮಾನ ನಡೆಸುವುದು ಮಂಗಳೂರಿಗರಿಗೆ ಮಾಡುವ ಅವಮಾನ, ಕಾರ್ಯಕ್ರಮ ರದ್ದುಪಡಿಸದೇ ಇದ್ದಲ್ಲಿ ನಾಳೆ ಸಂಜೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ದೇಶಪ್ರೇಮಿಗಳ ಒಕ್ಕೂಟವು ಎಚ್ಚರಿಕೆ ನೀಡಿದ ಬೆನ್ನಲ್ಲೇ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಈ ಕುರಿತು, ಕಾರ್ಯಕ್ರಮ ನಡೆಯುವ ಜಾಗಕ್ಕೆ ಮುತ್ತಿಗೆ ಹಾಕುವ ಪೋಸ್ಟ್‌ಗಳು ಸಮಾಜಿಕ ಜಾಲತಾಣದಲ್ಲಿ ಹರದಾಡಿದ್ದು ಗಮನಕ್ಕೆ ಬಂದಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರದ್ದುಗೊಳಿಸುವ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಘಟಕರು ಖಾಸಗಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ್ದಾರೆ.
![](https://pratidhvani.com/wp-content/uploads/2022/06/FB_IMG_1656093692338-768x1024.jpg)