ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಜನತೆಗೆ ಸೂಕ್ತ ಉದ್ಯೋಗ ಒದಗಿಸುವ ಸಿಟ್ಟಿನಲ್ಲಿ ಲೀಡ್ ಟ್ರೈನಿಂಗ್ ಅಂಡ್ ಕಾರ್ಪೊರೇಟ್ ಸೆಲ್ಯೂಷನ್ ಸಹಯೋಗದಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡವಪುರ ಮಹಾರಾಜ ಇಂಜನಿಯರಿಂಗ್ ಕಾಲೇಜಿನಲ್ಲಿ ಇಂದು ಅಂದರೆ ಜೂನ್ 25 ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಉದ್ಯೋಗ ಮೇಳದಲ್ಲಿ ದೇಶದ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು ಉದ್ಯೋಕಾಂಕ್ಷಿಗಳು ಸದುಪಯೋಗ ಮಾಡಿಕೊಳ್ಳಿ ಎಂದು ಆಯೋಜಕರು ತಿಳಿಸಿದ್ದಾರೆ.
ಲೀಡ್ ಟ್ರೈನಿಂಗ್ ಅಂಡ್ ಕಾರ್ಪೊರೇಟ್ ಸೆಲ್ಯೂಷನ್ ಸಂಸ್ಥೆಯ ಶ್ರೀವಿದ್ಯ ಅವರು ಪ್ರತಿಧ್ವನಿಯೊಂದಿಗೆ ಮಾತನಾಡಿ, ಅನೇಕ ಪ್ರತಿಷ್ಠಿತ ಆಸ್ಪತ್ರೆಗಳು, ಕಂಪನಿಗಳು, ಬ್ಯಾಂಕ್ಗಳು ಮತ್ತು ಕಾರ್ಖಾನೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು ಸುಮಾರು ಎರಡು ಸಾವಿರ ಯುವಜನರಿಗೆ ಉದ್ಯೋಗ ಒದಗಿಸುವ ನಿರೀಕ್ಷೆ ಇದೆ. ಎಲ್ಲರೂ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.