ಖ್ಯಾತ Tennis ಆಟಗಾರ Rohan Bopanna ಅವರು ಪ್ರಧಾನಮಂತ್ರಿ Narendra Modi ಅವರನ್ನು ಭೇಟಿಯಾಗಿದ್ದರು. ಇತ್ತೀಚೆಗೆ ನಡೆದ 2024ರ Australia Open ಪುರುಷರ ಡಬಲ್ಸ್ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ಕನ್ನಡಿಗ ರೋಹನ್ ಬೋಪಣ್ಣ, ದಾಖಲೆ ಬರೆದಿದ್ದರು. ಅಲ್ಲದೇ ಈ ಗೆಲುವಿನೊಂದಿಗೆ ಬೋಪಣ್ಣ ಅವರು, ಡಬ್ಲ್ಯುಟಿಎ ಶ್ರೇಯಾಂಕದಲ್ಲಿ ವಿಶ್ವದ ನಂಬರ್ ಒನ್ ಡಬಲ್ಸ್ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ರೋಹನ್ ಬೋಪಣ್ಣ ಅವರು ಕೆಲಕಾಲ ಮಾತುಕತೆ ನಡೆಸಿದರಲ್ಲದೆ, ಆಸ್ಟ್ರೇಲಿಯಾ ಓಪನ್ ಪುರುಷರ ಡಬಲ್ಸ್ನಲ್ಲಿ ತಾವು ಆಡಲು ಬಳಸಿದ ಟೆನ್ನಿಸ್ ರಾಕೇಟ್ ಅನ್ನು ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಪ್ರಧಾನಿ ಮೋದಿ ಅವರನ್ನು ಭೇಟಿಯಾದ ವಿಶೇಷ ಸಂದರ್ಭದ ಬಗ್ಗೆ ರೋಹನ್ ಬೋಪಣ್ಣ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
#RohanBopanna #TennisPlayer #PrimeMinister #NarendraModi