ಯುಕ್ರೇನ್ ರಷ್ಯಾ ಯುದ್ಧ ಒಂದೆಡೆ ತೈಲ ಬೆಲೆ ಏರಿಕೆಗೆ ಕಾರಣವಾದರೆ ಇನ್ನೊಂದೆಡೆ ಆಹಾರ ಪದಾರ್ಥಗಳ ಬೆಲೆಯನ್ನು ವಿಪರೀತ ಏರುವಂತೆ ಮಾಡಿದೆ. ಸ್ಥಳೀಯ ಪೂರೈಕೆಗಳನ್ನು ರಕ್ಷಿಸಲು ಮತ್ತು ಬೇಡಿಕೆಗಳನ್ನು ಪೂರೈಸಲು ಆಯಾಯ ದೇಶದ ಸರ್ಕಾರಗಳು ಆಹಾರ ಪದಾರ್ಥಗಳ ರಫ್ತಿಗೆ ಕಡಿವಾಣ ಹಾಕುವ ಅನಿವಾರ್ಯತೆಗೆ ಒಳಗಾಗಿದೆ. ಇದು ಆರ್ಥಿಕತೆಯ ಮೇಲೆ ಬೀರಲಿರುವ ವ್ಯತಿರಿಕ್ತ ಪರಿಣಾಮ ಅಪಾರ.
ಮಲೇಷಿಯಾ ಚಿಕನ್ ರಫ್ತುಗಳ ಮೇಲೆ ಇತ್ತೀಚೆಗಷ್ಟೇ ನಿಷೇಧ ಹೇರಿತು. ಇದು ಸಿಂಗಪೂರ್ನ ಆಹಾರ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತು. ಯಾಕೆಂದರೆ ಮಲೆಷ್ಯಾದ ಚಿಕನ್ ಸರಬರಾಜಿನ ಮೂರನೇ ಒಂದು ಭಾಗ ಸಿಂಗಾಪುರ್ ಗೆ ಹೋಗುತ್ತಿತ್ತು. ಭಾರತವು ಗೋಧಿ ಮತ್ತು ಸಕ್ಕರೆ ಸಾಗಣೆಯ ಮೇಲೆ ನಿರ್ಬಂಧ ಹೇರಲು ಹೊರಟಿದೆ. ಇನ್ನೊಂದೆಡೆ ಇಂಡೋನೇಷ್ಯಾ ಪಾಮ್ ಆಯಿಲ್ ಮಾರಾಟದ ಮೇಲೆ ನಿರ್ಬಂಧ ಹೇರಿದೆ. ಇನ್ನು ಕೆಲವು ರಾಷ್ಟ್ರಗಳು ಧಾನ್ಯಗಳ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಿವೆ.
ಆಹಾರ ಪದಾರ್ಥಗಳ ಕೊರತೆ ಮತ್ತು ವಿಪರೀತ ಏರಿಕೆಗಳು ಮೊದಲು ಬಾಧಿಸಲಿರುವುದೇ ಬಡ ದೇಶಗಳನ್ನು. ಹಾಗೆಂದು ಶ್ರೀಮಂತ ದೇಶಗಳೇನು ಸೇಫ್ ಅಲ್ಲ. ಉದಾಹರಣೆಗೆ ಎಪ್ರಿಲ್ನಲ್ಲಿ ಆಹಾರದ ಮೇಲೆ ಸುಮಾರು 10 ಮಿಲಿಯನ್ ಬ್ರಿಟನ್ಸ್ ಕಡಿಮೆ ಮಾಡಲಾಗಿದೆ. ಯುಎಸ್ ರೆಸ್ಟಾರೆಂಟ್ಗಳ ಗಾತ್ರವೂ ಕುಗ್ಗುತ್ತಿವೆ, ಫ್ರಾನ್ಸ್ ಸರ್ಕಾರವು ತಮ್ಮ ದೇಶದ ಕೆಲವು ಮನೆಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸಲು ಪ್ರಾರಂಭಿಸಿದೆ.
ಆಹಾರ ಪದಾರ್ಥಗಳ ಕೊರತೆಯ ಬಗ್ಗೆ ವಿಶ್ವಾದ್ಯಂತ ಕಳಕಳಿ ವ್ಯಕ್ಯವಾಗಿದ್ದು “ಯುಕೆ ಮತ್ತು ಯು.ಎಸ್.ನಲ್ಲಿನ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ತಮ್ಮ ಆಹಾರಕ್ಕಾಗಿ ಹೆಣಗಾಡುತ್ತಿವೆ” ಎನ್ನುವ ಸಿಂಗಪುರ್ನ ನ್ಯಾಷನಲ್ ಯೂನಿವರ್ಸಿಟಿಯ ‘ಲೀ ಕುವಾನ್ ಯೂ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿ’ಯ ಕೃಷಿ ಸಹಾಯಕ ಪ್ರಾಧ್ಯಾಪಕ ಸೋನಿಯಾ ಅಖ್ತರ್ “ಹೆಚ್ಚುತ್ತಿರುವ ಬೆಲೆಗಳು ಆಹಾರದ ಮೇಲೆ ತಮ್ಮ ಆದಾಯದ ದೊಡ್ಡ ಪಾಲನ್ನು ವ್ಯಯಿಸುವ ಬಡವರ ಮೇಲೆ ಪರಿಣಾಮ ಬೀರುತ್ತವೆ” ಎಂದು ಹೇಳುತ್ತಾರೆ.
ಆಹಾರದ ಬೆಲೆಗಳ ಬಗೆಗಿನ ವಿಶ್ವಸಂಸ್ಥೆಯ ಗೇಜ್ 2020ರ ನಂತರ 70% ಕ್ಕಿಂತಲೂ ಹೆಚ್ಚು ಜಿಗಿತವನ್ನು ಕಂಡಿದೆ. ಯುಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ನಂತರ ಇದು ಇನ್ನಷ್ಟು ಹೆಚ್ಚಿದೆ. ಈಗ ಸರ್ಕಾರಗಳು ಅಳವಡಿಸಿಕೊಳ್ಳುತ್ತಿರುವ ಆಹಾರ ರಕ್ಷಣಾ ನೀತಿಯು ಈ ವೆಚ್ಚವನ್ನು ಇನ್ನಷ್ಟು ಹೆಚ್ಚಿಸಬಹುದು ಮತ್ತು ಇದು ಗ್ರಾಹಕರ ಖರೀದಿ ಶಕ್ತಿಯ ಮೇಲೆ ನೇರ ಪರಿಣಾಮ ಬೀರಲಿದೆ. ಮತ್ತು ದೇಶದ ಆರ್ಥಿಕ ಬೆಳವಣಿಗೆಯನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಹಣದುಬ್ಬರವನ್ನು ನಿಗ್ರಹಿಸಲು ಪ್ರಯತ್ನಿಸುತ್ತಿರುವ ಕೇಂದ್ರೀಯ ಬ್ಯಾಂಕುಗಳ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು.

ಆಹಾರ ಪದಾರ್ಥಗಳಲ್ಲಿನ ಕೊರತೆಯು ಏಷ್ಯಾದಲ್ಲಿ ಹೆಚ್ಚಿನ ಆಹಾರ ರಕ್ಷಣಾತ್ಮಕತೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ನೊಮುರಾ ಹೋಲ್ಡಿಂಗ್ಸ್ ಇಂಕ್ನ ಮುಖ್ಯ ಅರ್ಥಶಾಸ್ತ್ರಜ್ಞರಾದ ಸೋನಲ್ ವರ್ಮಾ. ಇದು ಜಾಗತಿಕವಾಗಿ ಬೆಲೆ ಒತ್ತಡಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ.
ಈ ಪ್ರದೇಶದಲ್ಲಿ ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಲು ಇತ್ತೀಚಿನ ಉದಾಹರಣೆ ಭಾರತವು ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದ್ದು. ಕಬ್ಬು ಬೆಳೆಯ ಮುಂದಿನ ಋತುವು ಅಕ್ಟೋಬರ್ನಲ್ಲಿ ಪ್ರಾರಂಭವಾಗಲಿದ್ದು ಮುನ್ನೆಚ್ಚರಿಕೆಯ ಕ್ರಮವಾಗಿ ಸಕ್ಕರೆ ರಫ್ತು ನಿಷೇಧಿಸಲಾಗಿದೆ.
2007 ಮತ್ತು 2008 ರಲ್ಲಾದ ಆಹಾರ ಬಿಕ್ಕಟ್ಟಿನಿಂದಾಗಿ ಮುನ್ನೆಚ್ಚರಿಕೆಯಂತೆ ಉಕ್ರೇನ್ನಲ್ಲಿ ಯುದ್ಧ ಆರಂಭವಾಗುತ್ತಿದ್ದಂತೆ ಸುಮಾರು 30 ದೇಶಗಳು ಆಹಾರದ ರಫ್ತುಗಳನ್ನು ನಿರ್ಬಂಧಿಸಲು ಕ್ರಮಗಳನ್ನು ತೆಗೆದುಕೊಂಡಿವೆ ಎನ್ನುತ್ತಾರೆ ‘ಫಿಚ್ ಸೊಲ್ಯುಷನ್ಸ್’ ಮುಖ್ಯಸ್ಥರಾದ ಸಬ್ರಿನ್ ಚೌಧರಿ. “ಆಹಾರ ಸುರಕ್ಷತೆಯ ಖಾತ್ರಿ ಖಂಡಿತವಾಗಿಯೂ 2022 ರಲ್ಲಿ ಮುಂದುವರಿಯುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಬೆಲೆ ಏರಿಕೆಯಾಗುತ್ತದೆ. ಇದು ಪ್ರಪಂಚದ ಅತ್ಯಂತ ದುರ್ಬಲರ ಆಹಾರ ಭದ್ರತಾ ಅಪಾಯಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ” ಎಂದು ಅವರು ಹೇಳುತ್ತಾರೆ.
ಆಹಾರ ಸುರಕ್ಷತಾ ಕ್ರಮಗಳು ಅತ್ಯಂತ ಪ್ರಮುಖವಾದ ಆಹಾರ ಪಾದಾರ್ಥಗಳು ಹೆಚ್ಚು ದುಬಾರಿಯಾಗುವಂತೆ ಮಾಡುತ್ತದೆ. ಗೋಧಿ ಬೆಲೆಯಲ್ಲಿ ಈ ವರ್ಷ 56% ರಷ್ಟು ಏರಿಕೆಯಾಗಿದೆ, ಪಾಮ್ ಎಣ್ಣೆಯ ಬೆಲೆ 38% ನಷ್ಟು ಏರಿಕೆಯಾಗಿದೆ, ಯುಎನ್ನಲ್ಲಿ ಹಾಲಿನ ಪದಾರ್ಥಗಳ ಬೆಲೆ 14% ಹೆಚ್ಚಾಗಿದೆ.
ರಫ್ತು ನಿರ್ಬಂಧಗಳು ಆಮದು ಮಾಡುವ ದೇಶಗಳಿಗೆ ಮಾತ್ರ ಅಪಾಯಕಾರಿಯಲ್ಲ. ರಫ್ತುದಾರ ರಾಷ್ಟ್ರದ ರೈತನ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅಡೆಲೇಡ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಆಹಾರ ಮತ್ತು ಸಂಪನ್ಮೂಲಗಳ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರಾಗಿದ್ದ ಡೇವಿಡ್ ಆ್ಯಡಮ್ಸನ್. “ಆಹಾರ ಭದ್ರತೆಗಾಗಿ ಸುರಕ್ಷತೆ ಎಂಬುದು ಅತ್ಯಂತ ಕೆಟ್ಟ ಯೋಜನೆಯಾಗಿದೆ, ಏಕೆಂದರೆ ಇದು ಮಾರುಕಟ್ಟೆಗಳು ಸರಾಗವಾಗಿ ಕೆಲಸ ಮಾಡುವುದಕ್ಕೆ ಅನುಮವು ಮಾಡಿಕೊಡುವುದಿಲ್ಲ” ಎನ್ನುತ್ತಾರೆ ಅವರು.