ಬೆಂಗಳೂರಿನ (Bengaluru) ಜಯನಗರದ (Jayanagar) 9th ಬ್ಲಾಕ್ ನಲ್ಲಿರುವ ಸುಪ್ರಸಿದ್ಧ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ (Rishi sunak), ಅವರ ಪತ್ನಿ ಅಕ್ಷತಾ ಮೂರ್ತಿ ಹಾಗೂ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ (Sudha moorthy) ಜೊತೆಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ನವೆಂಬರ್ 5ರಂದು ಸಂಜೆ ಭೇಟಿ ಕೊಟ್ಟು ರಾಯರ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸದ್ಯ ಕೆಲವು ದಿನಗಳಿಗೆ ರಿಷಿ ಸುನಕ್, ಅವರ ಪತ್ನಿ ಅಕ್ಷತಾ ಮೂರ್ತಿ ದಂಪತಿ ಭಾರತದ ಪ್ರವಾಸ ಕೈಗೊಂಡಿದ್ದು ಹೀಗೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಕುಟುಂಬ ಸಮೇತರಾಗಿ ಆಗಮಿಸಿದ ರಿಷಿ ಸುನಕ್ ಗುರು ರಾಯರಿಗೆ ಭಕ್ತಿಯಿಂದ ಕೈಮುಗಿದು ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸುಧಾ ಮೂರ್ತಿಯವರು ರಾಯರ ಪರಮ ಭಕ್ತರಾಗಿದ್ದು, ಕಲ್ಪವೃಕ್ಷ, ಕಲಿಯುಗದ ಕಾಮದೇನು, ಸಕಲಪ್ರದಾತ ಎಂದು ಕರೆಯಲ್ಪಡುವ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಸುಧಾ ಮೂರ್ತಿಯವರು ಆಗಾಗ ಆಗಮಿಸಿ ಸೇವೆ ಸಲ್ಲಿಸುತ್ತಿರುತ್ತಾರೆ.











