• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾಟಲಿಪುತ್ರ ನಿಲ್ದಾಣದಲ್ಲಿ ರೈಲು ವಿಳಂಬಕ್ಕೆ ಗಲಭೆ, ಭುಗಿಲೆದ್ದ ಹಿಂಸಾಚಾರ : ರೈಲು ತಡೆದು ವಿದ್ಯಾರ್ಥಿಗಳ ಆಕ್ರೋಶ..!

ವಿಕೋಪಕ್ಕೆ ತಿರುಗಿದ ಸಾವಿರಾರು ವಿದ್ಯಾರ್ಥಿಗಳ ಹೋರಾಟ, ಅಶ್ರುವಾಯು ಪ್ರಯೋಗ, ಬಿಹಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು..

ಪ್ರತಿಧ್ವನಿ by ಪ್ರತಿಧ್ವನಿ
June 14, 2026
in Top Story, ಇದೀಗ, ದೇಶ, ರಾಜಕೀಯ
0
ಪಾಟಲಿಪುತ್ರ ನಿಲ್ದಾಣದಲ್ಲಿ ರೈಲು ವಿಳಂಬಕ್ಕೆ ಗಲಭೆ, ಭುಗಿಲೆದ್ದ ಹಿಂಸಾಚಾರ : ರೈಲು ತಡೆದು ವಿದ್ಯಾರ್ಥಿಗಳ ಆಕ್ರೋಶ..!
Share on WhatsAppShare on FacebookShare on Telegram

ನವದೆಹಲಿ : ಬಿಹಾರದ ಪಾಟಲಿಪುತ್ರ ರೈಲು ನಿಲ್ದಾಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತೆರಳುತ್ತಿದ್ದ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿದ್ದಾರೆ.

ADVERTISEMENT
Balaramana Dinagalu Movie Exclusive Interview : ಸಣ್ಣ ಕನಸು ಕಟ್ಟಿಕೊಂಡು ದೊಡ್ಡ ನಗರಕ್ಕೆ ಬಂದ ಯುವಕನ ಕಥೆ.

ರೈಲುಗಳ ಸಂಖ್ಯೆ ಕಡಿಮೆ, ಸಮಯಕ್ಕೆ ಸರಿಯಾಗಿ ರೈಲುಗಳು ಬಾರದ ಹಿನ್ನೆಲೆಯಲ್ಲಿ ಕೋಪಗೊಂಡ ಸಾವಿರಾರು ಅಭ್ಯರ್ಥಿಗಳು ಹಳಿಗಳಿಗೆ ಇಳಿದು ರೈಲು ಸಂಚಾರಕ್ಕೆ ಸಂಪೂರ್ಣವಾಗಿ ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಹೋರಾಟ ವಿಕೋಪಕ್ಕೆ ತೆರಳಿ, ಕೆಲವರು ರೈಲುಗಳನ್ನು ಧ್ವಂಸಗೊಳಿಸಿ, ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ, ಗಾಳಿಯಲ್ಲಿ ಗುಂಡು ಹಾರಿಸಿ, ಲಾಠಿಚಾರ್ಜ್ ನಡೆಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

पाटलिपुत्र स्टेशन पर छात्रों का बवाल, ट्रेन में तोड़फोड़-पथराव, IG समेत कई पुलिसकर्मी जख्मी - bihar police recruitment exam candidates protest train shortage patliputra station ...

ಈ ಘಟನೆಯಲ್ಲಿ ಐಜಿಪಿ ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಪಾಟ್ನಾದಲ್ಲಿ ಬಿಹಾರ ಪೊಲೀಸ್ ಇಲಾಖೆಯ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾವಿರಾರು ಅಭ್ಯರ್ಥಿಗಳು ತಯಾರಿ ನಡೆಸುತ್ತಿದ್ದರು. ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಜೂನ್ 13 ರ ಶನಿವಾರ ತಡರಾತ್ರಿಯಿಂದಲೇ ಪರೀಕ್ಷಾ ಕೇಂದ್ರಗಳನ್ನು ತಲುಪಲು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ನಿಲ್ದಾಣದಲ್ಲಿ ಜಮಾಯಿಸಿದ್ದರು. ರೈಲ್ವೆ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ರೈಲುಗಳ ವ್ಯವಸ್ಥೆ ಮಾಡಿರಲಿಲ್ಲ, ಇದರಿಂದಾಗಿ ನಿಲ್ದಾಣದಲ್ಲಿ ಭಾರಿ ಜನಸಂದಣಿ ಉಂಟಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ : ಮೋದಿ-ಟ್ರಂಪ್ ಭೇಟಿಯತ್ತ ವಿಶ್ವದ ಚಿತ್ತ ; ಫ್ರಾನ್ಸ್‌ನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆ

ನಾವು ಕಾಯುತ್ತಿದ್ದ ರೈಲು ನಿರಂತರವಾಗಿ ವಿಳಂಬವಾಗುತ್ತಿತ್ತು. ಪಾಟಲಿಪುತ್ರದಿಂದ ಕಟಿಹಾರ್‌ಗೆ ತೆರಳುವ ವಿಶೇಷ ರೈಲು ಹತ್ತುವಾಗ ಗದ್ದಲ, ತಳ್ಳಾಟ ನೂಕಾಟ ಉಂಟಾಗಿ  ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಜನಸಂದಣಿಯಿಂದ ಕೋಪಗೊಂಡ ಅಭ್ಯರ್ಥಿಗಳು ರೈಲಿನ ಮುಂದೆ ಕುಳಿತು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Normalcy restored after police exam aspirants stage protest at Bihar railway station - Social News XYZ

ಇನ್ನೂ ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವಿವಿಧ ಠಾಣೆಗಳ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಅಲ್ಲದೆ  ದಾನಾಪುರದ ಉಪವಿಭಾಗಾಧಿಕಾರಿ ಮತ್ತು ಉಪ ಪೊಲೀಸ್‌ ವರಿಷ್ಠಾಧಿಕಾರಿ ಇಬ್ಬರು ಸ್ಥಳಕ್ಕೆ ಆಗಮಿಸಿ ಅಭ್ಯರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಇದಕ್ಕೂ ತಣ್ಣಗಾಗದ ವಿದ್ಯಾರ್ಥಿಗಳು ರೈಲಿಗೆ ತಡೆಯೊಡ್ಡಲು ಮುಂದಾಗುತ್ತಾರೆ. ಇದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಲು ಕಾರಣವಾಗುತ್ತದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು, ಪೊಲೀಸರು ಅಶ್ರುವಾಯು ಸಿಂಪಡಿಸಿ, ಎಚ್ಚರಿಕೆಯಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು ಮತ್ತು ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.

Video: Bihar Police Aspirants Block Train, Throw Stones, Cops Fire Tear Gas

ಗಲಭೆಯ ಸಂದರ್ಭದಲ್ಲಿ ಐಜಿ ಜಿತೇಂದ್ರ ರಾಣಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಾಟ್ನಾ ಜಿಲ್ಲೆಯ ರೂಪಾಸ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಕೂಡ ಸ್ವಲ್ಪ ಗಾಯಗೊಂಡಿದ್ದಾರೆ. ಐಜಿ ಜಿತೇಂದ್ರ ರಾಣಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಠಾಣೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ರೈಲು ನಿಲ್ದಾಣದಲ್ಲಿನ ಸ್ಥಿತಿ ಕಂಡು ಬಲಪ್ರಯೋಗ ಮಾಡಿ ಗುಂಪನ್ನು ಚದುರಿಸಲಾಯಿತು,  ಪರಿಸ್ಥಿತಿ ಈಗ ಸಂಪೂರ್ಣವಾಗಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಪಾಟ್ನಾ ಜಿಲ್ಲಾಧಿಕಾರಿ ಡಾ. ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.

Previous Post

ಈ ಬ್ಯಾಂಕ್‌ನಲ್ಲಿ ಖಾತೆ ಇದೆಯಾ? ಎಚ್ಚರ RBI ಕಠಿಣ ನಿರ್ಬಂಧ!

Next Post

ಧರ್ಮಸ್ಥಳ-ಕುಕ್ಕೆ ಭಕ್ತರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ KSTDC ವಿಶೇಷ ವೀಕೆಂಡ್ ಟೂರ್ ಪ್ಯಾಕೇಜ್ ಆರಂಭ!

Related Posts

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ
Top Story

ಕೇಂದ್ರದ ಕಠಿಣ ಕ್ರಮ: ಜೂನ್ 22ರವರೆಗೆ ಟೆಲಿಗ್ರಾಂ ನಿರ್ಬಂಧ: ಯಾಕೆ ಗೊತ್ತೆ 

by ಪ್ರತಿಧ್ವನಿ
June 16, 2026
0

ನೀಟ್-ಯುಜಿ 2026 ಮರುಪರೀಕ್ಷೆಯ ಪಾರದರ್ಶಕತೆ ಕಾಪಾಡುವ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ, ವದಂತಿಗಳು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಮೆಸೇಜಿಂಗ್ ವೇದಿಕೆಗೆ ತಾತ್ಕಾಲಿಕ...

Read moreDetails
ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ದಿನ: ಒಂದೇ ದಿನ ಮೂರು ತಂಡಗಳ ಪಂದ್ಯ, 12 ಗಂಟೆಗಳ ಕ್ರಿಕೆಟ್ ರಸದೌತಣ

ಕರ್ನಾಟಕ ಬಿಜೆಪಿ ಅಧ್ಯಕ್ಷರ ರೇಸ್‌ನಲ್ಲಿ ಪ್ರಹ್ಲಾದ್ ಜೋಶಿ ಮುಂಚೂಣಿ? ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ

June 16, 2026
ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

ಅಖಿಲ ಭಾರತ ವೀರಶೈವ ಮಹಾಸಭೆಯ “ಮಹಾಪ್ರಧಾನ ಕಾರ್ಯದರ್ಶಿಯಾಗಿ S.S ಗಣೇಶ್ ನೇಮಕ..

June 16, 2026
ಪಕ್ಷದ ಹೈಕಮಾಂಡ್‌ ಮೆಚ್ಚಿಸಿ, ಇನ್ನಷ್ಟು ಉನ್ನತ ಹುದ್ದೆಗಳಿಗೆ ಪ್ರಯತ್ನ ಹಾಸ್ಯಾಸ್ಪದ : ಪ್ರಿಯಾಂಕ್‌ ಖರ್ಗೆಗೆ ಬೊಮ್ಮಾಯಿ ಟಾಂಗ್..!

ಪಕ್ಷದ ಹೈಕಮಾಂಡ್‌ ಮೆಚ್ಚಿಸಿ, ಇನ್ನಷ್ಟು ಉನ್ನತ ಹುದ್ದೆಗಳಿಗೆ ಪ್ರಯತ್ನ ಹಾಸ್ಯಾಸ್ಪದ : ಪ್ರಿಯಾಂಕ್‌ ಖರ್ಗೆಗೆ ಬೊಮ್ಮಾಯಿ ಟಾಂಗ್..!

June 16, 2026
ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ನಾಪತ್ತೆ: ಶಂಕಿತ ಆರೋಪಿಗಳಿಂದ 2 ಕೋಟಿ ನಗದು ವಶ

June 16, 2026
Next Post
ಮೋದಿ-ಟ್ರಂಪ್ ಭೇಟಿಯತ್ತ ವಿಶ್ವದ ಚಿತ್ತ; ಫ್ರಾನ್ಸ್‌ನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆ

ಧರ್ಮಸ್ಥಳ-ಕುಕ್ಕೆ ಭಕ್ತರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ KSTDC ವಿಶೇಷ ವೀಕೆಂಡ್ ಟೂರ್ ಪ್ಯಾಕೇಜ್ ಆರಂಭ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada