ಕರೋನಾ ಕಾರಣದಿಂದ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟದ ನಿರ್ಬಂಧವನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಸುತ್ತೋಲೆಯನ್ನು ಹೊರಡಿಸಿದೆ.
2020 ಮಾರ್ಚ್ ರಂದು ಸಾಂಕ್ರಾಮಿಕ ರೋಗ ಕರೋನಾ ಹೆಚ್ಚಾದ ಕಾರಣ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಸರ್ಕಾರ ಕೆಲವು ತಿಂಗಳ ಹಿಂದೆ ಆರ್ಥಿಕತೆ ಕುಂಠಿತವಾಗಿದ್ದರಿಂದ ಕೆಲವು ಕ್ಷೇತ್ರಗಳಲ್ಲಿ ನಿರ್ಬಂಧವನ್ನು ಸಡಿಲಗೊಳಿಸಿತ್ತು. ಆದರೆ ಅಂತರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟದಲ್ಲಿ ನಿರ್ಬಂಧ ಹೇರಲಾಗಿತ್ತು. ಇದೀಗ ಮತ್ತೆ ನಿರ್ಬಂಧದ ಅವಧಿಯನ್ನು ವಿಸ್ತರಿಸಲಾಗಿದೆ.

ಆದರೆ ಕೆಲವೊಂದು ಪರಿಸ್ಕೃತ ಅಂತರಾಷ್ಠ್ರೀಯ ವಿಮಾನಗಳನ್ನು ನಿಗಧಿತ ಮಾರ್ಗಗಳಲ್ಲಿ ಸಂಚಾರಕ್ಕೆ ಅನುಮತಿಸಲಾಗುವುದು ಮತ್ತು ಡಿಜಿಸಿಎ ನಿಂದ ಅನುಮತಿಸಲಾದ ವಿಶೇಷ ವಿಮಾನಗಳಿಗೆ ಮತ್ತು ಸರಕುಸಾಗಾಣಿಕೆ ವಿಮಾನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಕಳೆದ ವರ್ಷದ ಕೊನೆಯಲ್ಲಿ ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಿತ್ತು. 2020 ಡಿಸೆಂಬರ್‌ನಲ್ಲಿ ಯುರೋಪ್ ದೇಶಗಳಲ್ಲಿ ಕರೋನಾ ಹೊಸ ತಳಿ ಪತ್ತೆಯಾದ ಹಿನ್ನಲೆ ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲವೆಡೆ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು.









