ಯೂನೈಟೆಡ್ ಕಿಂಗ್ಡಮ್ ನ ಅನಿವಾಸಿ ಮತ್ತು ಭಾರತೀಯ ಸ್ನೇಹಿತರು “ಮೋದಿ ರಾಜಿನಾಮೆ ನೀಡಿ” “Resign Modi” ಎಂಬ ಬ್ಯಾನರ್ ಅನ್ನು ವೆಸ್ಟ್‌ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಹಾಕುವ ಮೂಲಕ ಡ್ರೊಮ್ಯಾಟಿಕ್ ಆಗಿ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಿದ್ದಾರೆ.
ಇಂದು ಭಾನುವಾರ, ಲಂಡನ್‌ನಲ್ಲಿ ಮುಂಜಾನೆ ಬೆಳಗಾಗುತ್ತಿದ್ದಂತೆ, ಲಂಡನ್‌ನ ಐಕಾನ್ ವೆಸ್ಟ್‌ಮಿನಿಸ್ಟರ್ ಸೇತುವೆಯಲ್ಲಿ “ಮೋದಿ ರಾಜಿನಾಮೆ ನೀಡಿ” “Resign Modi” ಎಂಬ ಬೃಹತ್ ಬ್ಯಾನರ್ ಅನ್ನು UK ಯಲ್ಲಿರುವ ಅನಿವಾಸಿಗರು ಮತ್ತು ಭಾರತೀಯ ಸ್ನೇಹಿತರೆಲ್ಲರೂ ಸೇರಿ ತೂಗುಹಾಕಿದ್ದರು. ಸೇತುವೆಗೆ ಹೋಗುವ ದಾರಿಯಲ್ಲಿ, ಭಾಗವಹಿಸುವವರು ಭಾರತೀಯ ಹೈಕಮಿಷನ್‌ನ ಬಳಿ ಮೋದಿಯವರ ಬಲಿಪಶುಗಳನ್ನು ಸ್ಮರಿಸಲು ಮೇಣದಬತ್ತಿಯ ಇಡಿತು ನಿಂತು ಮೋದಿ ರಾಜಿನಾಮೆಯನ್ನು ಸ್ವಾತಂತ್ರ್ಯ ದಿನದಂದು ಒತ್ತಾಯಿಸಿದ್ದಾರೆ.

ಸಂಘಟಕರಲ್ಲಿ ಒಬ್ಬರಾದ south Asia solidarity groupನ ಮುಕ್ತಿ ಶಾ ಅವರು ಈ ಕುರಿತು ಕಾರಣವನ್ನು ವಿವರಿಸಿದ್ದಾರೆ;
ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಹೊತ್ತಿಗೆ, ದೇಶದ ಜಾತ್ಯತೀತ ಸಂವಿಧಾನವು ಬಿರುಕು ಬಿಟ್ಟಿದೆ.ಕೋಮುವಾದ ಮತ್ತು ಜಾತಿ ಹಿಂಸೆ ದೇಶಾದ್ಯಂತ ವ್ಯಾಪವಾಗಿ ಹರಡುತ್ತಿದೆ. ಕರೋನಾ ಬಿಕ್ಕಟ್ಟಿನ ನಿರ್ಲಕ್ಷ್ಯ ಮತ್ತು ದುರಾಡಳಿತದ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ನಾವು ಭಾರತದ ಜನರಿಗಾಗಿ ಒಗ್ಗಟ್ಟಿನಿಂದ ನಿಂತಿರುವ ಅನಿವಾಸಿ ಸದಸ್ಯರು ಮತ್ತು ಸ್ನೇಹಿತರ ಗುಂಪು, ಈ ಹಿಂಸೆ, ಅನ್ಯಾಯ ಮತ್ತು ಕ್ರಿಮಿನಲ್ ನಿರ್ಲಕ್ಷ್ಯದ ಮುಖ್ಯ ರೂವಾರಿ ನರೇಂದ್ರ ಮೋದು ಅವರ ರಾಜೀನಾಮೆಗೆ ನಾವು ಒತ್ತಾಯಿಸುತ್ತಿದ್ದೇವೆ ಎಂದಿದ್ದಾರೆ.