
ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ನಿರಂತರವಾಗಿ ಬರುತ್ತಿರುವ ಹಿನ್ನಲೆಯಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದ್ದು, ದಿನ ನಿತ್ಯ ಚುಟುವಟಿಕೆಗಳನ್ನು ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನದಿಗಳು ಅಪಾಯಮಟ್ಟವನ್ನು ತಲುಪಿದ್ದು ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರನ್ನು ರಕ್ಷಿಸುವ ಹೊಣೆ ಸರ್ಕಾರ ಮತ್ತು ಜಿಲ್ಲಾಡಳಿತ ತೆಗೆದಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳು ಕಾರ್ಯಪ್ರವೃತ್ತರಾಗಿದ್ದು, ಜಿಲ್ಲಾ ಪ್ರವಾಸದ ಜೊತೆಗೆ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಇದರ ನಡುವೆ ಜಿಲ್ಲಾ ಉಸ್ತುವಾರಿಗಳ ಜೊತೆ ಜಿಲ್ಲೆಗಳ ಸಿಇಓ, ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ.

ಮಹಾರಾಷ್ಟ್ರದಿಂದ ಒಳನೀರು ಹರಿದು ಭೀಮಾ ನದಿ ನೀರು ಅಪಾಯಮಟ್ಟವನ್ನು ಮೀರಿದ್ದು,
ಕಲರ್ಬುಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳು ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಈವರೆಗೂ 1500 ನಿವಾಸಿಗಳನ್ನು ರಕ್ಷಿಸಲಾಗಿದ್ದು, ಎಲ್ಲರೂ ಆಶ್ರಯ ಕೇಂದ್ರದಲ್ಲಿ ಸುರಕ್ಷಿತರಾಗಿದ್ದಾರೆ.
ಹವಮಾನ ಇಲಾಖೆಯ ಮಾಹಿತಿ ಅನ್ವಯ ಕಲಬುರ್ಗಿ ಜಿಲ್ಲೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಸುಮಾರು 151 MM ನಷ್ಟು ಮಳೆ ಸುರಿಯುತಿತ್ತು. ಆದರೆ ಈ ವರ್ಷದಲ್ಲಿ ಸುರಿದ ಮಳೆಯೂ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, 250 MM ಮಳೆಯಾಗಿದ್ದು, ಕಳೆದ 50 ವರ್ಷಗಳಲ್ಲೇ ಅತೀ ಹೆಚ್ಚು ಮಳೆಯಾಗಿದೆ.
ನಿಲ್ಲದ ಮಳೆ ಸೃಷ್ಟಿಸಿದ ಅವಾಂತರ!
ಸದ್ಯ 3.4 ಲಕ್ಷ ಕ್ಯೂಸೆಕ್ ನೀರು ಉಜ್ಜಯಿನಿ ಮತ್ತು ಸಿನಾನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟಿನಿಂದ ಹೊರಬಿಡಲಾಗಿದ್ದು, 94 ಹಳ್ಳಿಗಳು ಪ್ರವಾಹ ಭೀತಿ ಎದುರಿಸುತ್ತಿದೆ. 36 ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ರವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ, ಮತ್ತು ಮನೆಗಳ ಹಾನಿಗಳ ಬಗ್ಗೆ ಸಮೀಕ್ಷೆಯನ್ನು ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕಲರ್ಬುಗಿ ಜಿಲ್ಲೆಯ ಮಣ್ಣೂರಿನಲ್ಲಿರುವ ಪ್ರಖ್ಯಾತ ಮತ್ತು ಪ್ರವಾಸಿಗಳ ನೆಚ್ಚಿನ ದೇವಾಲವಾಗಿರುವ ಯಲ್ಲಮ್ಮ ದೇವಾಲಯವು ನೀರನಲ್ಲಿ ಮುಳುಗಡೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಹತ್ತಿ, ಸೂರ್ಯ ಕಾಂತಿ, ಹಾಗೂ ತೊಗರಿ ಬೇಳೆಯ ಬೆಳೆಗಳು ಮಳೆಗೆ ಸಂಪೂರ್ಣವಾಗಿ ನಾಶವಾಗಿದೆ.
ರೈತರು ಒಂದು ಕಡೆ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದರೆ ಮತ್ತೊಂದು ಕಡೆ ತಾವು ಕಷ್ಟ ಪಟ್ಟು ಬೇವರು ಸುರಿಸಿ ಬೇಳೆದ ಬೆಳೆ, ಮಳ ನೀರಿನಲ್ಲಿ ಕೊಚ್ಚಿಹೋಯಿತಲ್ಲ ಎಂಬ ನೋವಿನಲ್ಲಿದ್ದಾರೆ.

ಈ ಭಾಗದ ರೈತರು ಹೇಳುವ ಪ್ರಕಾರ 1972ರಲ್ಲಿ ಕಂಡುಬಂದ ಭೀಕರ ಬರದಷ್ಟೇ ಭಯನಾಕವಾಗಿದೆ ಎಂದು ದಿಗ್ಬ್ರಮೆಯಲ್ಲಿದ್ದಾರೆ
ಯಾದಗಿರಯ ಹುಣಸಗಿ ಮತ್ತು ಗುರುಮಿಟ್ಕಲ್ ತಾಲೂಕುಗಳು ಭೀಮಾ ನದಿಯೂ ರಭಸದಿಂದ ಹರಿಯುತ್ತಿರುವ ಪರಿಣಾಮ ಜಲಾಪ್ರವಾಹಕ್ಕೆ ತುತ್ತಾಗಿವೆ. ವಿಜಯಪುರದ ಡೋನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆಯೊಂದು ಮುಳುಗಡೆಯಾಗಿ ಸಂಚಾರ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರವಾಹದಿಂದ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಬಸ್ ಸಂಚಾರಗಳ ಸೇವೆಯನ್ನು ರದ್ದು ಪಡಿಸಲಾಗಿದೆ. 50ಕ್ಕಿಂತ ಹೆಚ್ಚು ಗ್ರಾಮಸ್ಥರನ್ನು ಅಲಮೇಲ ತಾಲೂಕಿನ ಹಾಳಾ ತಾರಾಪುರ ಹಳ್ಳಿಗಳ್ಳಿಂದ ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ರಾಯಚೂರು, ಕೊಪ್ಪಳ, ಧಾರವಾಡ ಮತ್ತು ಚಿಕ್ಕಮಗಳೂರಿನಲ್ಲೂ ಸಹ ಧಾರಾಕಾರವಾಗಿ ಮಳೆಯಾಗಿರುವ ಬಗ್ಗೆ ಹವಮಾನ ಇಲಾಖೆ ತಿಳಿಸಿದೆ.