ಮೃತ ರೇಣುಕಾಸ್ವಾಮಿಯ (Renukaswamy) ಚಿತ್ರದುರ್ಗದ ನಿವಾಸಕ್ಕೆ ನಟ ವಿನೋದ್ ರಾಜ್ (vinod raj) ಭೇಟಿ ನೀಡಿದ್ದಾರೆ. ರೇಣುಕಾ ಸ್ವಾಮಿ ಪೋಷಕರು ಹಾಗೂ ಪತ್ನಿಯನ್ನ ಭೇಟಿ ಮಾಡಿ,ದೇವರು ನಿಮಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಮದು ಸಾಂತ್ವನದ ನುಡಿಗಳನ್ನ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರಕ್ಕೆ (Parappan agrahara) ಭೇಟಿ ನೀಡಿದ್ದ ವಿನೋದ್ ರಾಜ್ ದರ್ಶನ್‌ರನ್ನ (drashan) ಮಾತನಾಡಿಸಿದ್ದರು.
ಇದೇ ಸಂದರ್ಭದಲ್ಲಿ ರೇಣುಕಾಸ್ವಾಮಿ ಪತ್ನಿ ಸಹನಾರಿಗೆ ವಿನೋದ್ ರಾಜ್ 1 ಲಕ್ಷದ ಚೆಕ್ ನೀಡಿದ್ದಾರೆ. ಕುಟುಂಬದ ಆಧಾರ ಸ್ತಂಭವಾಗಿದ್ದ ರೇಣುಕಾಸ್ವಾಮಿಯ ತಂದೆ, ತಾಯಿ, ಪತ್ನಿಗೆ ನಟ ವಿನೋದ್ ರಾಜ್ ಧೈರ್ಯ ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿನೋದ್ ರಾಜ್‌ಕುಮಾರ್‌ರನ್ನ ಬರಮಾಡಿಕೊಂಡ ಕುಟುಂಬ, ತಮ್ಮ ದುಖಃವನ್ನ ಹೇಳಿಕೊಂಡು ಅವರ ಮುಂದೆ ಕಣ್ಣೀರಿಟ್ಟಿದೆ.ರೇಣುಕಾಸ್ವಾಮಿ ಪೋಷಕರು ಮತ್ತು ಪತ್ನಿಯ ನೋವನ್ನು ಮನಗಂಡ ವಿನೋದ್ ರಾಜ್ ಅವರ ಕಷ್ಟಗಳನ್ನ ನೋಡಿ ಕಣ್ಣೀರು ಬಂತು ಎಂದು ಭಾವುಕರಾದ್ರು.