ಬಣ ಬಡಿದಾಟ ಜೋರಾಗುತ್ತಲೇ ಇದೆ. ಮನೆಯೊಂದು ಮೂರು ಬಾಗಿಲು ಅನ್ನೋ ಗಾದೆ ಮಾತು ಸದ್ಯಕ್ಕೆ ಬಿಜೆಪಿ ಪಕ್ಷಕ್ಕೆ ಹೇಳಿ ಮಾಡಿಸಿದಂತಿದೆ. ಹಲವರ ಪ್ರಕಾರ ಇದು ಮೂರು ಬಾಗಿಲಲ್ಲ ಹಲವಾರು ಬಾಗಿಲು ಎಂಬಂತೆ ವ್ಯಾಖ್ಯಾನ ಮಾಡಲಾಗುತ್ತಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಅವರ ವಿರುದ್ಧ ಧ್ವನಿಯೆತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏಕಾಂಗಿಯಾಗಿ ಮಾತನಾಡಿದ್ದರು. ಆದರೆ ಹೈಕಮಾಂಡ್ ಇದರ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಸುಮ್ಮನಾಗಿತ್ತು.
ಬಿಜೆಪಿ ಬಣಗಳ ಬಡಿದಾಟ ಮತ್ತಷ್ಟು ಜೋರಾಗ ತೊಡಗಿತು. ಬಿಜೆಪಿಯಲ್ಲಿ ಯತ್ನಾಳ್ ಜೊತೆ ಇನ್ನಷ್ಟು ನಾಯಕರು ಜೊತೆಗೂಡಿದರು. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಶಾಸಕ ಕುಮಾರ್ ಬಂಗಾರಪ್ಪ, ಜಿಎಂ ಸಿದ್ದೇಶ್ವರ, ಬಿಪಿ ರಮೇಶ್, ಅರವಿಂದ್ ಲಿಂಬಾವಳಿ ಸೇರಿ ಹಲವರು ಭಾಗಿಯಾಗಿ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಿದರು. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ತಟಸ್ಥ ಗುಂಪು ಹುಟ್ಟಿಕೊಂಡಿದೆ.
ಕುಮಾರ್ ಬಂಗಾರಪ್ಪ ನೀನು ಯಾವಾಗ ಬಿಜೆಪಿಗೆ ಬಂದಿದ್ದು.ಸೊರಬದಲ್ಲಿ ಸಂಘ ಪರಿವಾರ ಪಕ್ಷ ಕಟ್ಟಿದ್ದು ಮಂಡಳಿ ಅಧ್ಯಕ್ಷರಿಗೆ ಪರ್ಯಾಯವಾಗಿ ಅಧ್ಯಕ್ಷರಾಗಿ ಮಾಡಿದೆ. ನಿಮ್ಮ ತಂದೆಯವರು ಬಂದಾಗ ನೀನು ಬಿಜೆಪಿಗೆ ಬಂದಾ..? ಕುಮಾರ್ ಬಂಗಾರಪ್ಪ ನೀನು ಕಾಂಗ್ರೆಸ್ ಗೆ ಹೊರಟಿದ್ದೆ, ನಿನ್ನ ತಮ್ಮ ಸೇರಿಸಿಕೊಳ್ಳಲಿಲ್ಲ.ವಿಜಯೇಂದ್ರ ಅಧ್ಯಕ್ಷರಾದಾಗ ಪಾದಯಾತ್ರೆಯಲ್ಲಿ ಏಕೆ ಬರ್ಲಿಲ್ಲ.ಕಾಂಗ್ರೆಸ್ನ ಭ್ರಷ್ಟಾಚಾರದ ವಿರುದ್ಧ ಏಕೆ ಹೋರಾಟ ಮಾಡಲಿಲ್ಲ ಎಂದು ಸವಾಲ್ ಹಾಕಿದ ರೇಣುಕಾಚಾರ್ಯ
ನಿಮ್ಮ ನಾಟಕ ಬಂದು ಮಾಡ್ರಿ, ದೆಲ್ಲಿಗೆ ಹೋಗಿ ಬರೋದು ಅವರನ್ನು ಭೇಟಿ ಮಾಡ್ದೊ ಅಂತ ಸುಳ್ಳು ಹೇಳ್ತಿದ್ದಾರೆ.ಯಾರನ್ನಾದ್ರು ಭೇಟಿ ಆದ್ರಾ, ಪೋಟೊ ಹಾಕುದ್ರಾ..? ಎಲ್ಲಾ ಸುಳ್ಳು ಪೋಟೊ ಹಾಕಲ್ಲ ನಾವು, ರಿವೀಲ್ ಮಾಡಲ್ಲ ಅಂತ ಸುಳ್ಳು ಹೇಳ್ತಾರೆ.ಅವರು ಯಾವ ಹೈಕಮಾಂಡ್ ನಾಯಕರನ್ನು ಭೇಟಿ ಆಗಲ್ಲ, ಎಲ್ಲವು ಷಡ್ಯಂತ್ರ ವಿಜಯೇಂದ್ರ ಅವರ ಮನಸ್ಥಿತಿ ಕುಗ್ಗಿಸಲು ನಿಮಗೆ ಸಾಧ್ಯವಿಲ್ಲ.ವಿಜಯೇಂದ್ರ ಜನರ ಹೃದಯದಲ್ಲಿ ಇದ್ದಾರೆ.
ಮುಂದಿನ ಬುಧವಾರ ನಾವು ಮಾಜಿ ಶಾಸಕರು, ಸಚಿವರು 100 ಕ್ಕೂ ಹೆಚ್ಚು ಜನ ಸಭೆ ಮಾಡ್ತೀವಿ. ಬಿಜೆಪಿಯ ಪಕ್ಷ ಕಟ್ಟಿದವರು ಸಭೆ ಮಾಡ್ತೀವಿ. 65 ಜನರ ನಮ್ಮ ತಂಡ ಇದೆ, ಚುನಾವಣೆಗೆ ಸ್ಫರ್ಧೆ ಮಾಡಿದವರನ್ನು ಕರಿತಿವಿ 12 ನೇ ತಾರೀಖು ದೊಡ್ಡ ಸಭೆ ಮಾಡ್ತೀವಿ.ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು, ಅಲ್ಲಿವರೆಗು ಬಿಡಲ್ಲ. ನೀವು ಅಭ್ಯರ್ಥಿ ಹುಡುಕಾಟ ಮಾಡ್ತಿದ್ದೀರಿ.ರಾಷ್ಟ್ರೀಯ ನಾಯಕರು ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರೋದು.ವಿಜಯೇಂದ್ರ ಯಡಿಯೂರಪ್ಪ ಅವರನ್ನು ಟೀಕೆ ಮಾಡೋದು ಹೈಕಮಾಂಡ್ ಟೀಕೆ ಮಾಡಿದಂತೆ ಎಂದು ರೇಣುಕಾಚಾರ್ಯ ವಾಗ್ದಾಳಿ
ನಾವು ದೆಹಲಿಗೆ ಹೋಗಬೇಕು ಅಂತ ತೀರ್ಮಾನ ಮಾಡಿದ್ದೀವಿ.ಹೈಕಮಾಂಡ್ ನಾಯಕರ ಸಮಯ ಕೇಳ್ತಿದ್ದೀವಿ.ಇವರು ದಂತಪಿಂಡಗಳು, ಮಾನಸಿಕ ಅಸ್ವಸ್ಥರಾಗಿದ್ದಾರೆ.ಇವರು ದೆಹಲಿಯಲ್ಲಿ ಯಾರನ್ನು ಭೇಟಿಯಾಗಲ್ಲ, ಎಲ್ಲವೂ ಸುಳ್ಳು ಎಂದು ಯಾತ್ನಾಳ್,ರಮೇಶ್ ಜಾರಕಿಹೊಳಿ,ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ ರೇಣುಕಾಚಾರ್ಯ