ನಾವು ಸೇವಿಸುವ ಆಹಾರದಿಂದಾಗಿ ಅಥವಾ ನಮ್ಮ ಲೈಫ್ ಸ್ಟೈಲ್ ಯಿಂದಾಗಿ ದೇಹದಲ್ಲಿ ವಿಷಕಾರಿ ಅಂಶ ಹೆಚ್ಚಾಗಿರುತ್ತದೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರು ಅಥವಾ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೆಲವರು ತಮ್ಮ ಬಾಡಿ ಡಿಟಾಕ್ಸ್ ಮಾಡಲು ಸಾಕಷ್ಟು ರೆಮಿಡಿ ಟ್ರೈ ಮಾಡ್ತಾರೆ. ಡಿಟಾಕ್ಸ್ ಮಾಡುವುದರಿಂದ ವಿಷಕಾರಿ ಅಂಶವನ್ನು ತೆಗೆದುಹಾಕಿ ನ್ಯೂಟ್ರಿಷನ್ ಅನ್ನ ಹೆಚ್ಚು ಮಾಡುತ್ತದೆ. ದೇಹದ ನಿರ್ವಿಶೀಕರಣಕ್ಕೆ ಕೆಲವು ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ

ನಿಂಬೆ ಹಣ್ಣು ಮತ್ತು ಶುಂಠಿ
ಒಂದು ಲೋಟ ನೀರಿಗೆ ಅರ್ಧದಷ್ಟು ನಿಂಬೆರಸ ಹಾಗೂ ಸ್ವಲ್ಪ ಶುಂಠಿಯನ್ನು ಜಜ್ಜಿ ಬೆರೆಸಿ ನಂತರ ಆ ನೀರನ್ನ ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ನಿಮ್ಮ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ತಮ್ಮ ಬಿಜಿ ಲೈಫ್ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಇರುವವರು ಈ ರೆಮಿಡಿಯನ್ನ ಪಾಲಿಸುವುದು ಉತ್ತಮ.

ಅರಿಶಿಣ
ಒಂದು ಲೋಟ ಉಗುರು ಬೆಚ್ಚ ನೀರಿಗೆ ಚಿಟಿಕೆಯಷ್ಟು ಅರಿಶಿಣವನ್ನ ಬೆರೆಸಿ ಆ ನೀರನ್ನ ಕುಡಿಯುವುದರಿಂದ ಅರಿಶಿನದಲ್ಲಿರುವ ಕರ್ಕ್ಯುಮಿನ್ ಪ್ರಬಲವಾದ ಉರಿಯೂತ ನಿವಾರಕವಾಗಿದೆ ಮತ್ತು ನಿರ್ವಿಷಗೊಳಿಸುವ ಗುಣಗಳನ್ನು ಹೊಂದಿದೆ.

ಆಪಲ್ ಸೈಡರ್ ವಿನಿಗರ್
ಒಂದು ಟೇಬಲ್ ಸ್ಪೂನ್ ಅಷ್ಟು ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಉಗುರು ಬೆಚ್ಚ ನೀರಿಗೆ ಬೆರೆಸಿ ಸೇವಿಸುವುದು ಉತ್ತಮ. ಇದು ದೇಹದ ಪಿಎಚ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ ಜೊತೆಗೆ ಡೈಜೆಶನ್ ಕೂಡ ಸಹಾಯಕಾರಿ.